ಕಾರ್ಟೂನ ಸುಗ್ಗಿ- ನೋಡಿ ಹಿಗ್ಗಿ
ವರಕವಿ ಡಾ ದ . ರಾ. ಬೇಂದ್ರೆ ಅವರ ವ್ಯಂಗ್ಯ ಚಿತ್ರ , ಹಾಗೂ” ಕಾರ್ಟೂನ ಸುಗ್ಗಿ- ನೋಡಿ ಹಿಗ್ಗಿ ” ಎಂಬ ಸ್ಲೋಗನ ದೊಂದಿಗೆ ಮುದ್ರಿತವಾದ ಆಮಂತ್ರಣ ಪತ್ರಿಕೆ ಸೊಗಸಾಗಿತ್ತು, ದಿನಾಂಕ 22-02-2016 ರಂದು ಬೆಳಿಗ್ಗೆ 11-00 ಘಂಟೆಗೆ ಧಾರವಾಡದ ,ಕರ್ನಾಟಕ ಕಾಲೇಜು ರಸ್ತೆಯಲ್ಲಿಯ ಆರ್ಟ ಗ್ಯಾಲರಿ ಯಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ಪ್ರಾದೇಶಿಕ ಸಾರಿಗೆ ಇನ್ಸ್ಪೆಕ್ಟರ್ ಶ್ರೀ ಅರುಣ. ಫ . ಕಟ್ಟಿಮನಿ ಯವರು ನೂತನ ಸಂಘದ, ಉದ್ಘಾಟಕರಾಗಿಯೂ ಮತ್ತು ವ್ಯಂಗ್ಯ ಚಿತ್ರ ಪ್ರದರ್ಶನದ ಉದ್ಘಾಟಕರಾಗಿ, ಧಾರವಾಡದ ಹಿರಿಯ ವ್ಯಂಗ್ಯ ಚಿತ್ರಕಾರರಾದ ಶ್ರೀ ಅಶೋಕ್ ಜೋಷಿ ಯವರು ಆಗಮಿಸಿದ್ದರು.
ಶ್ರೀ ಜಗದೀಶ ಬಜಂತ್ರಿಯವರಿಂದ “ಕರ ಮುಗಿವೆ, ಗುರು ರಾಯ, ಹರಸಬೇಕು” ಎಂಬ ಸುಶ್ರಾವ್ಯ ಸಂಗೀತದ ಮೂಲಕ ಸಮಾರಂಭವು ಪ್ರಾರಂಭ , ನಂತರ ದೀಪ ಬೆಳಗುವ ಮೂಲಕ ಸಂಘದ ಹಾಗು ವ್ಯಂಗ್ಯ ಚಿತ್ರ ರಚಿಸುವ ಮೂಲಕ ಚಿತ್ರ ಪ್ರದೆರ್ಶನದ ಪ್ರಾರಂಭೋತ್ಸವ ಜರುಗಿದ ನಂತರ ಶ್ರೀ ಕಟ್ಟಿಮನಿಯವರು ಸಂಘದ ರಚನೆ ಕುರಿತು ಶ್ಲಾಘಿಸುತ್ತ ಇದರ ಅಭಿವೃದ್ಧಿ ಆಗಲಿ, ಹಾಗು ಸಂಘವು ಯಶಸ್ವಿಯತ್ತ ಮುನ್ನಡೆಯಲಿ ಎಂದು ಹರಿಸಿದರು, ಶ್ರೀ ಅಶೋಕ ಜೋಷಿಯವರು ತಾವು 1983 ರಿಂದ ವ್ಯಂಗ್ಯ ಚಿತ್ರಗಳನ್ನು ರಚಿಸುತ್ತ ಇದ್ದು ಆಗ ಮತ್ತು ಈಗಿನ ಅನುಕೂಲತೆಗಳ ಬಗ್ಗೆ ವಿವರಣೆ ನೀಡುತ್ತ ಕೆಲವೆ ಗೆರೆಗಳಲ್ಲಿ ಸಮಾಜದ, ಓರೇ ಕೋರೆಗಳನ್ನು ಬಿಂಬಿಸುವ ಇಂಥ ವ್ಯಂಗ್ಯ ಚಿತ್ರಗಳು ರಾಜಕಾರಣಿಗಳ, ನಕಲೀ ಸಾಧುಗಳು, ವ್ಯಕ್ತಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುವಲ್ಲಿ ಯಶಸ್ವೀ ಆಗುತ್ತವೆ.
ಖ್ಯಾತ ವ್ಯಂಗ್ಯ ಚಿತ್ರಕಾರರಾದ ದಿವಂಗತ ಬೀ. ವಿ,ರಾಮಮೂರ್ತಿ ಯವರು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಹತರಾದಾಗ “ಮೋಡಗಳ ಹಿನ್ನೆಲೆಯಲ್ಲಿ ಮಹಾತ್ಮಾ ಗಾಂಧಿಯವರು , ಇಂದಿರಾ ಅವರನ್ನು ಹೆಗಲ ಮೇಲೆ ಕೈಹಾಕಿ,ಹಿಮ್ಮುಖವಾಗಿ ನಡೆಸಿಕೊಂಡು ಹೋದ ರೀತಿಯನ್ನು” ಚಿತ್ರಿಸಿದ್ದು, ಎಲ್ಲರ ಮನದಲ್ಲಿ ಅಗಾಧ ಪರಿಣಾಮ ಬೀರಿತ್ತು , ಹಾಗು ವ್ಯಂಗ್ಯ ಚಿತ್ರಗಳಿಂದ ಆಗುವ ಪರಿಣಾಮ ಇತ್ತ್ಯಾದಿಗಳನ್ನು ತಮ್ಮ ಹಾಸ್ಯ ಪೂರಿತ ಭಾಷಣದ ಮೂಲಕ ತಿಳಿಯ ಪಡಿಸಿದರು, ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀ ವೆಂಕಟೇಶ ಇನಾಮದಾರ , ಶ್ರೀ ಹಾಲಭಾವಿ ಯವರು ತಮ್ಮ ಅನಿಸಿಕೆಗಳನ್ನು ಪ್ರಸ್ತಾವ ಮಾಡಿದರು, ನ್ಯೂ ಡೆಲ್ಲಿ ಯಿಂದ ಆಗಮಿಸಿದ ಶ್ರೀ ಸುಧೀರ ಫಡ್ನೀಸ ಅವರು ತಾವು ಡೆಲ್ಲಿಯ ಆರ್ಟ ಗ್ಯಾಲರಿಯಲ್ಲಿ ವ್ಯಂಗ್ಯ ಚಿತ್ರಗಳ ಪ್ರದರ್ಶನಗಳಿಗೆ ಅನುಕೂಲ ಮಾಡಿಕೊಡುವದಾಗಿ ವಾಗ್ದಾನವನ್ನು ನೀಡಿದರು ಪ್ರದರ್ಶನದಲ್ಲಿ ತಮ್ಮ ಚಿತ್ರಗಳೊಂದಿಗೆ ಭಾಗಿಯಾದ ಎಲ್ಲ ಕಲಾಕಾರರನ್ನು ಗೌರವಿಸಲಾಯಿತು , ಪ್ರದರ್ಶನದಲ್ಲಿ ಸುಮಾರು ಎರಡನೂರು ಕಲಾಕೃತಿಗಳು ಪ್ರದರ್ಶಿತಗೊಂಡವು; ವ್ಯಂಗ್ಯ ಚಿತ್ರಕಾರ ಶ್ರೀ ಮಧುಕರ ಎಕ್ಕೇರಿ ಅವರು ಚಿಕ್ಕ ಹಾಗು ಚೊಕ್ಕ ಪ್ರಾಸ್ತಾವಿಕ ಭಾಷಣ, ಹಾಗೂ ಸಭೆಯ ಯಶಸ್ವಿಗಾಗಿ ಸಹಕರಿಸಿದ ಸಮಸ್ತರಿಗೆ ಧನ್ಯವಾದಗಳನ್ನು ಅರ್ಪಿಸಿ ಸದುದ್ದೆಶವುಳ್ಳ ಸದರೀ ಸಂಘದ ಉದ್ಘಾಟನಾ ಸಮಾರಂಭವನ್ನು ಮುಕ್ತಾಯಗೊಳಿಸಿದರು.