ಈ ಕವಿತೆ ಓದುವಿರಾ?

Share Button

veeralinganagoudar s (1)

ಎನ್ನೆದೆಯನು ಹದಗೊಳಿಸಿಕೊಂಡು
ಬೀಜಗಳನು ಹುದುಗಿಸಿಕೊಂಡಿದ್ದೆ ಗೆಳತಿ
ನೀ ಮಳೆಯಾಗಿ ಹೂವು ಅರಳಿಸಬಹುದೆಂದು
ಆದರೆ ಚಲಿಸುವ ಮೋಡವಾಗಿ ಮರೆಯಾದೆ
ಮರೆತ ಕುರುವಿಗಾಗಿ ಕವಿತೆಯಾಗಿರುವೆ
ಒಂದು ಸಾರಿ ಈ ಕವಿತೆ ಓದುವೆಯಾ?

ಗೆಳೆಯ ಹಾದಿಯೂದ್ದಕ್ಕೂ ನೀನು
ಹಾವಾಗಿ ಹರಿದಾಡಿದ್ದರಿಂದ
ತಂತಿಯ ಮೇಲೆ ನಡೆದು
ಹೇಗೊ ದಡ ಸೇರಿದೆ ನಾನು
ನೀನು ಕಾಡಿದ್ದಕ್ಕೆ ಕವಿತೆಯಾಗಿರುವೆ
ಒಂದು ಸಾರಿ ಈ ಕವಿತೆ ಓದುವೆಯಾ?

emotionsಸುಡುಬಿಸಿಲು;ಕಡುಬಡತನದ ನಡುವೆಯೂ
ಅಕ್ಷರಲೋಕದಲಿ ನನ್ನನೊಂದು ಮೊಗ್ಗಾಗಿ
ಬಿರಿಯುವಂತೆ ಬದುಕು ಸವೆಸಿದ ಅವ್ವ
ನೀನು ಅನಕ್ಷರಸ್ಥಳಾಗಿದ್ದರೂ ಅಕ್ಷರವಾಗಿರುವೆ
ಒಂದು ಸಾರಿ ಈ ಕವಿತೆ ಓದುವೆಯಾ?

ಖಾದಿ;ಕಾವಿ,ಖಾಕಿ ಬಟ್ಟೆ ಧರಿಸಿದವರೆ..
ಜಾತಿ,ಮತ,ಪಂಥ,ಗಡಿ,ಗೋಡೆ ಪರಿವಿಲ್ಲದೆ
ಅರಳುವ ಹೂವುಗಳು, ಹಾರಾಡುವ ಹಕ್ಕಿಗಳಾಗಿ
ನನ್ನ ಮನವ ಅರಳಿಸದೆ ಕೆರಳಿಸಿದ್ದಕ್ಕೆ ಕವಿತೆಯಾಗಿದ್ದಿರಿ
ಒಂದು ಸಾರಿ ಈ ಕವಿತೆ ಓದುವಿರಾ?

 

 –  ಕೆ.ಬಿ.ವೀರಲಿಂಗನಗೌಡ್ರ  ಸಿದ್ದಾಪುರ,  ಉ.ಕ ಜಿಲ್ಲೆ.

4 Responses

  1. Niharika says:

    ಕವನ ಇಷ್ಟವಾಯಿತು..

  2. Sneha Prasanna says:

    Wav…! Wonderful…Very nice….

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: