Monthly Archive: October 2023
ಎಲ್ಲವನ್ನೂ ಬಲ್ಲ ಸಕಲಗುಣ ಸಂಪನ್ನರೆಂದು ಮಾನವರಿಗೆ ಕರೆಸಿಕೊಳ್ಳುವುದಕ್ಕೆ ಕಷ್ಟ ಸಾಧ್ಯವೇ ಸರಿ. ಯಾರೂ ಪರಿಪೂರ್ಣರಾಗಲಾರರು. ಹಾಗೆಯೇ ಸಮಯ,ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ; ಬಾಲ್ಯದಲ್ಲೇ ಮಂದಬುದ್ಧಿಯೆನಿಸಿಕೊಂಡವರು ಮುಂದೆ ಚುರುಕು ಬುದ್ಧಿಯವರಾಗಬಹುದು. ಚುರುಕಿನವರು ಬುದ್ಧಿಹೀನರೂ ಸೋಮಾರಿಗಳೂ ಆಗಬಹುದು, ಉತ್ಸಾಹಿಯಾಗಿದ್ದವ ನಿರುತ್ಸಾಹಿಯಾಗಬಹುದು. ಅಂತೆಯೇ ಅರೆಹುಚ್ಚನಂತೆ ಕಾಣಿಸುತ್ತ ಅಪ್ರಯೋಜಕನೆನಿಸಿದವನೊಳಗೆ ಆತ್ಮಜ್ಞಾನ ತುಂಬಿದ್ದು, ಮುಂದೆ ಸಮಾಜೋದ್ಧಾರಕನಾಗಬಹುದು....
ಸುನೀತಾ ಕುಶಾಲನಗರ ಇವರ ‘ ಇಂಜಿಲಗೆರೆ ಪೋಸ್ಟ್ ‘ ಎಂಬ ವಿನೂತನ ಶೀರ್ಷಿಕೆ ಹೊತ್ತ , ಆಕರ್ಷಕ ಮುಖಪುಟದ ಕಥಾಸಂಕಲನ ಸಾರಸ್ವತ ಲೋಕಕ್ಕೆ ಚಂದನೆಯ ಉಡುಗೊರೆ. ಹತ್ತು ಕಥೆಗಳ ಗುಚ್ಚದ ಈ ಭಾವ ಪ್ರಪಂಚದಲ್ಲಿ ನೋವು ನಲಿವಿನ ಸಂಗಮವಿದೆ. ಕೊಡಗಿನ ಪ್ರಾಕೃತಿಕ ದುರಂತಗಳನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ...
ನಮ್ಮ ಭಾರತ ದೇಶ ಕಂಡ ಅಪ್ರತಿಮ ಇಬ್ಬರು ನಾಯಕರ ಹುಟ್ಟು ಹಬ್ಬವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಭಕ್ತಿ ಪೂರ್ವಕವಾಗಿ ಆಚರಿಸಿದ್ದೇವೆ. ಇಂತಹ ರಾಷ್ಟ್ರ ಭಕ್ತರ ಆಚರಣೆಗಳು ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ, ವರ್ಷಪೂರ್ತಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕು. “ರಾಷ್ಟ್ರಪಿತ” ಮಹಾತ್ಮ ಗಾಂಧೀಜಿ ಮತ್ತು “ಭಾರತದ...
ವಸಾಹತುಶಾಹಿ ಮತ್ತು ಸ್ತ್ರೀವಾದದ ಎಳೆ: ಬ್ರಿಟಿಷರ ವಸಾಹತುಶಾಹಿಯಿಂದಾಗಿ ಹತ್ತೊಂಬತ್ತನೇ ಶತಮಾನದಲ್ಲಿ ಸಾಂಪ್ರದಾಯಿಕ ಜೀವನ ರೀತಿಗೆ ಬಹುಮಟ್ಟಿಗೆ ನಿರ್ಣಾಯಕವಾಗಿ ವಿದಾಯ ಹೇಳಬೇಕಾಗಿ ಬಂದ ಕಾಲಘಟ್ಟವನ್ನು ನಮ್ಮ ದೇಶದ ದೃಷ್ಟಿಯಿಂದ ಆಧುನಿಕ ಎನ್ನಬಹುದು. ವಸಾಹತುಶಾಹಿಯೊಂದಿಗೆ ರಾಷ್ಟ್ರೀಯತಾ ಸಿದ್ಧಾಂತ, ಪ್ರಜಾಪ್ರಭುತ್ವ, ಮುಕ್ತ ಮಾರುಕಟ್ಟೆ, ಸಮಾಜವಾದ, ಸ್ತ್ರೀವಾದ ಮುಂತಾದ ಸಾಂಸ್ಥಿಕ ಪರಿಕಲ್ಪನೆಗಳೂ ನಮ್ಮ...
ರಾಬರ್ಟ್ ಫ್ರಾಸ್ಟ್ ಬರೆದಿರುವ ಮೆಂಡಿಗ್ ವಾಲ್. ಕವನದ ಸಾಲುಗಳು ನೆನಪಾದವು ಗುಡ್ ಫೆನ್ಸಸ್ ಮೇಕ್ ಗುಡ್ ಫ್ರೆಂಡ್ಸ್ (Good fences make good friends). ಐರ್‌ಲ್ಯಾಂಡಿನ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿ ಕೋಮುಗಲಭೆಯನ್ನು ನಿಯಂತ್ರಿಸಲು ನಗರದ ವಿವಿಧ ಭಾಗಗಳಲ್ಲಿ ಸುಮಾರು ಇಪ್ಪತ್ತು ಕಿ.ಮೀ. ಉದ್ದವಿರುವ ಅರವತ್ತು ಶಾಂತಿ ಗೋಡೆಗಳನ್ನು ಕಟ್ಟಿದ್ದಾರೆ....
ಕೃಷ್ಣನಾಗುವ ನೆಪದಿ ಕಂಸನಂತಾಡುವರುಪುoಸವನಕೂ ಮುಂಚೆ ಪುಂಡಾಟ ಕಲಿತಿಹರುಹಂಸ ವರ್ಣದ ಮನಕೆ ಕೆಂಗೆಸರನೆರಚಿಹರುಸಂಗ ಸಜ್ಜನರದೇ ಕೊಡಿಸು… ಹರಿಯೇ…. ಬರಿದೆ ನೊಂದವರನೇ ಹುರಿದು ತಿನ್ನುವರುಮುರಿದ ಕೋಲನೆ ಮೆರೆಸಿ ಜಗವ ಮೇಸುವರುಬಗೆ ಬಗೆಯ ವೇಷದಲಿ ಮರುಳು ಮಾಡಿಹರುದುರುಳ ಮುಷ್ಟಿಯ ಬಿಡಿಸಿ… ಕಾಯೋ ಹರಿಯೇ…. ಹರಿಪಾದ ಗತಿಯೆಂದು ಎಂದಿಗರಿಯುವರುಹಿಂದು ಮುಂದಿನ ಕರ್ಮ ಎಂತು...
“ನೀನು ಮುತ್ತೈದೆಯೇ ಆಗಿದ್ದರೆ, ನನ್ನನ್ನು ನೋಡಿದ ಕೂಡಲೇ ಗಿಡದಿಂದ ಕೊಯಿದು(ಕಿತ್ತು) ನಿನ್ನ ತಲೆಯಲ್ಲಿ ಮುಡಿಯುವೆ” ಅಂತ ಈ ಗಿಡ ಹೇಳುತ್ತದೆಯೆಂದು ನನ್ನಮ್ಮ ಹೇಳುತ್ತಿದ್ದರು. ಆಹಾ! ಎಂತಹ ಒಂದು ಸುಂದರ ಕಲ್ಪನೆ! ಹಾಗಾದರೆ, ಹೂವಿನ ಗಿಡಗಳಿಗೂ ಗೊತ್ತು ಹೂವುಗಳೆಂದರೆ ಹೆಣ್ಣಿಗೆ ಇಷ್ಟ, ಹೂವುಗಳನ್ನು ಮುಡಿಯುವುದು ಇಷ್ಟ ಎಂದಾಯಿತು ತಾನೇ?...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ವಾಷಿಂಗ್ಟನ್ ಡಿ.ಸಿ. (Washigton D. C.) ಸುಂದರ ಪಟ್ಟಣ ಫಿಲಡೆಲ್ಫಿಯಾದಿಂದ ಸುಮಾರು 140 ಮೈಲು ದೂರದ ದೇಶದ ರಾಜಧಾನಿಯತ್ತ ನಮ್ಮ ಪಯಣ ಹೊರಟಿತು. ಸುಮಾರು ಎರಡೂವರೆ ಗಂಟೆಗಳ ಪ್ರಯಾಣ… ಅತ್ಯಂತ ಅಚ್ಚುಕಟ್ಟಾದ ರಸ್ತೆ, ಇಕ್ಕೆಲಗಳಲ್ಲಿ ನಗುವ ಹಸಿರು ವನರಾಶಿ…ನಮ್ಮ ಚಾಲಕ ಮಹಾಶಯರಿಗೆ(ಅಳಿಯ!)...
ಸ್ವಾಮಿ ವಿವೇಕಾನಂದರ ಪರಮಶಿಷ್ಯರಾದ ಸೋದರಿ ನಿವೇದಿತಾ ತಮ್ಮ ಗುರುಗಳ ಆಶಯದಂತೆ ಬಾಲಕಿಯರಿಗಾಗಿ ಸ್ವದೇಶಿ ಚಿಂತನೆಯುಳ್ಳ ಶಾಲೆಯೊಂದನ್ನು ಆರಂಭಿಸಿದರು. ಆದರೆ ಅದನ್ನು ಮುನ್ನಡೆಸಲು ನಿವೇದಿತಾರಿಗೆ ಅಲ್ಪಕಾಲದಲ್ಲಿಯೇ ಆರ್ಥಿಕ ಸಂಕಷ್ಟ ಎದುರಾಯಿತು. ಆ ಸಮಯದಲ್ಲಿ ಕಾಶ್ಮೀರದ ಮಹಾರಾಜರು ಕಿಂಚಿತ್ತು ಧನಸಹಾಯ ಮಾಡಿದರಾದರೂ ಅದು ನಾಲ್ಕೈದು ತಿಂಗಳ ನಿರ್ವಹಣೆಗಷ್ಟೇ ಸಾಕಾಯಿತು. ಮುಂದೇನು...
ಪರಿಸರ ಮಾಲಿನ್ಯ ತಡೆಯುವ, ಪಳೆಯುಳಿಕೆ ಆಧರಿಸಿದ ತೈಲ ಬಳಕೆ ಕಡಿಮೆ ಮಾಡುವ ತಂತ್ರದ ಹಿನ್ನೆಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ ಘೋಷಿಸಿರುವ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಬಹಳ ಮಹತ್ವ ಪಡೆದಿದೆ. ಈ ಮಿಷನ್ ಅಡಿ ಭಾರತವನ್ನು ಹಸಿರು ಜಲಜನಕ ಕ್ಷೇತ್ರದಲ್ಲಿ ಗ್ಲೋಬಲ್ ಹಬ್ ಮಾಡುವ...
ನಿಮ್ಮ ಅನಿಸಿಕೆಗಳು…