Category: ಕವಿ ಕೆ.ಎಸ್.ನ ನೆನಪು
ಕಳೆದ ವರುಷ ಹಿಂದೂ ದಿನಪತ್ರಿಕೆಯಲ್ಲಿ ಕವಿ ಕೆ ಎಸ್ ನ ಹುಟ್ಟಿದ ಮತ್ತು ಬಾಲ್ಯವನ್ನು ಕಳೆದ ಮನೆ ಎಂದು ಕಿಕ್ಕೇರಿಯ ಒಂದು ಹಳೆಯ ಮನೆಯ ಚಿತ್ರ ಪ್ರಕಟವಾಗಿತ್ತು. ವಾಸ್ತವವಾಗಿ ಕೆ ಆರ್ ಪೇಟೆ ತಾಲೂಕಿನ ಕಿಕ್ಕೇರಿ ನಮ್ಮ ತಂದೆಯವರ ಪೂರ್ವಜರ ಸ್ಥಳ. ನಮ್ಮ ತಂದೆಯವರು ಹುಟ್ಟಿದ್ದು ಹೊಸಹೊಳಲು ಎಂಬ...
“ಇವರ ಹುಟ್ಟುಹಬ್ಬವನ್ನು ದೇಶಾದಾದ್ಯಂತ ಆಚರಿಸಲಾಗುತ್ತದೆ. ಏಕೆಂದರೆ ಇವರು ಹುಟ್ಟಿದ್ದು ಜನವರಿ 26 ʼʼಎಂಬುದು ಪ್ರಾ.ಎಚ್ಚೆಸ್ಕೆಯವರು ಸುಧಾ ವಾರಪತ್ರಿಕೆಯ ವಾರದ ವ್ಯಕ್ತಿ ಅಂಕಣದಲ್ಲಿ ಕೆ ಎಸ್ ನ ಅವರನ್ನುಕುರಿತು ಬರೆದ ಲೇಖನದ ಮೊದಲ ಸಾಲು. ಹೌದು. ಇಂಗ್ಲಿಷ್ ಪಂಚಾಂಗದ ಪ್ರಕಾರ ಅಂದು ನಮ್ಮ ತಂದೆಯವರ ಹುಟ್ಟಿದ ದಿನ. ಆ...
1970 ರಲ್ಲಿ ನಿವೃತ್ತಿಯಾದ ನಂತರ ನಮ್ಮ ತಂದೆಯವರಿಗೆ ಪ್ರವಾಸ ಒಂದು ಆದ್ಯತೆಯಾಗಿಬಿಟ್ಟಿತ್ತು.ಹಾಗೆಂದುಸೇವೆಯಲ್ಲಿದ್ದಾಗ ಪ್ರವಾಸಗಳಿಗೆ ಹೋಗುತ್ತಿರಲಿಲ್ಲವೆಂದಲ್ಲ. ಆಕಾಶವಾಣಿ ಕವಿ ಸಮ್ಮೇಳನ, ಸಾಹಿತ್ಯ ಸಮ್ಮೇಳನ,ಇಂಥವುಗಳಿಗೆ ಅನಿವಾರ್ಯವಾಗಿ ಹೋಗಬೇಕಾದ ಪ್ರಸಂಗ ತಪ್ಪಿಸುವಂತಿರಲಿಲ್ಲ. ಕರಾವಳಿಯ ನಂಟು ಕರಾವಳಿ ಪ್ರದೇಶಗಳಿಗೆ ಪ್ರವಾಸ ಹೋಗುವುದು ಅವರಿಗೆ ಅತ್ಯಂತ ಪ್ರಿಯವಾದವಿಷಯವಾಗಿತ್ತು. ಪೇಜಾವರ ಶ್ರೀಗಳು ,ಬನ್ನಂಜೆ ಗೋವಿಂದಾಚಾರ್ಯ, ಎಮ್ ಜಿ...
ಬಿ ಆರ್ ಲಕ್ಷ್ಮಣರಾವ್ ಕೆ ಎಸ್ ನ ರವರನ್ನು ತಮ್ಮ ಕಾವ್ಯಗುರುಗಳು ಎಂದೇ ಭಾವಿಸಿ ಗೌರವಿಸಿದವರು ಪ್ರೇಮಕವಿ ಬಿ ಆರ್ ಲಕ್ಷ್ಮಣರಾವ್. ಅವರ ಕಾವ್ಯದ ಮೊದಲ ದಿನಗಳಲ್ಲಿ ಅವರು ಅಡಿಗರ ಸೆಳೆತಕ್ಕೆ ಒಳಗಾಗಿದ್ದವರು. ತಮ್ಮ ಯೌವನದ ದಿನದಲ್ಲೇ ಲಂಕೇಶರು ಹೊರತಂದ ಅಕ್ಷರ ಹೊಸಕಾವ್ಯ ಸಂಕಲನದಲ್ಲಿ ನವ್ಯಕಾವ್ಯದ ಖ್ಯಾತನಾಮರ ಕವನಗಳೊಡನೆ ಗೋಪಿ ಮತ್ತು ಗಾಂಡಲೀನ ,ಟುವಟಾರ...
ಕೆಲವು ಸಾರಿ ನಮ್ಮ ತಂದೆಯವರಿಗೆ ಬರುತ್ತಿದ್ದ ಆಹ್ವಾನ ನಿಗೂಢವಾಗಿ ಇರುತ್ತಿತ್ತು. ಬಹುಪಾಲು ಮಂದಿ ನಮ್ಮ ತಂದೆಯವರ ಬಗ್ಗೆ ,ಅವರ ಕವನಗಳ ಕೇಳಿರುತ್ತಿದ್ದರು ಅಷ್ಟೆ. ಹಾಗೆ ಒಬ್ಬ ಯುವಕ ಮನೆಗೆ ಬಂದ. ತಾನು ಭಾರತೀಯ ಅರ್ಥಶಾಸ್ತ್ರ ಸೇವೆ ಉತ್ತೀರ್ಣರಾಗಿ ಈಗ ದೆಹಲಿಯಲ್ಲಿ ಇರುವುದಾಗಿಯೂ, ಅವರ ತಂದೆಯವರು ನಮ್ಮ ತಂದೆ ತಾಯಿಗಳನ್ನು ಅವರ...
ವಿ ಸೀ ಅವರ ನೆನಪಿನಲ್ಲಿ ಸ್ಥಾಪಿಸಲಾಗಿರುವ “ವಿ ಸೀ ಸಂಪದ” ಎಂಬ ಸಂಘಟನೆಯ ರೂವಾರಿ ಶ್ರೀ ಎಂ ವಿ ವೆಂಕಟೇಶಮೂರ್ತಿ ಅವರು, ನಮ್ಮ ತಂದೆಯವರ ನಿಕಟವರ್ತಿಗಳಲ್ಲಿ ಮುಂಚೂಣಿಯ ಸ್ಥಾನ ಪಡೆದಿದ್ದವರು. ವೆಂಕಟೇಶಮೂರ್ತಿ ಎಂಬ ನಿಜನಾಮಧೇಯ ಹೊಂದಿದ್ದರೂ ಪ್ರೇಮಕುಮಾರ್ ಅಥವಾ ಕುಮಾರ್ ಎಂದೇ ಚಿರಪರಿಚಿತರು. ಸುಮನಾ ಎಂಬ...
ಕೆ ಎಸ್ ನ ಅವರಿಗೆ ಬೆಂಗಳೂರಿನ ಬ್ಯೂಗಲ್ ರಾಕ್ ರಸ್ತೆಯಲ್ಲಿರುವ ಲಿಪಿ ಪ್ರಕಾಶನದ ಮಾಲೀಕ ಬಾಕಿನ (ಬಾಲಕೃಷ್ಣ ಕಿಳಿಂಗಾರು ನಡುಮನೆ) ಅವರೊಂದಿಗೆ ಒಂದು ವಿಶೇಷ ಅಕ್ಕರೆ.ಒಮ್ಮೆ ಅವರು ಮನೆಗೆ ಭೇಟಿ ನೀಡಿದರೆಂದರೆ ಸಾಹಿತ್ಯಲೋಕದ ಹಲವಾರು ಸ್ವಾರಸ್ಯಕರ ಸಂಗತಿಗಳ ಅಲೆಗಳೇ ತೇಲಿಬರುತ್ತಿದ್ದವು. ಬಾಕಿನ ಅವರು ಒಮ್ಮೆ “ಕೇಳಿದ್ರಾ ಸಾರ್ ,ಮೊನ್ನೆ ನಡೆದ...
ಪ್ರಾ ಎಚ್ಚೆಸ್ಕೆಯವರ ಗದ್ಯಶೈಲಿಯನ್ನು ಅವರ ಸುಧಾ ವಾರಪತ್ರಿಕೆಗಳ ಬರಹಗಳ ಮೂಲಕ ಮೆಚ್ಚಿದ ನಮ್ಮತಂದೆಯವರು ಇದೂ ಗದ್ಯರೂಪದ ಕಾವ್ಯವೇ ಎಂದಿದ್ದರು.ವಾರದ ವ್ಯಕ್ತಿ ಅಂಕಣದಲ್ಲಿ ಎಚ್ಚೆಸ್ಕೆಯವರು ತಮ್ಮಬಗ್ಗೆ ಬರೆದುದನ್ನು ಅಭಿಮಾನದಿಂದ ಸ್ಮರಿಸುತ್ತಿದ್ದರು. ಎಚ್ಚೆಸ್ಕೆಯವರು1969ರಲ್ಲಿ ಒಮ್ಮೆ ಬೆಂಗಳೂರಿನ ಜಯನಗರದ ಮಾಧವನ್ ಪಾರ್ಕ್ ಬಳಿ ಇದ್ದ ನಮ್ಮ ಮನೆಗೆ ಅನಿರೀಕ್ಷಿತವಾಗಿ ಬಂದು ಸಂತಸ ಉಂಟು...
1982ರಲ್ಲಿ ಮೈಸೂರ ಮಲ್ಲಿಗೆ ಧ್ವನಿಸುರುಳಿಯನ್ನು ವರನಟ ಡಾ.ರಾಜ್ ಕುಮಾರ್ ಬಿಡುಗಡೆ ಮಾಡುವರೆಂದು ಸಂಗೀತ ನಿರ್ದೇಶಕರಾದ ಅಶ್ವಥ್ ನಮ್ಮ ತಂದೆಯವರಿಗೆ ತಿಳಿಸಿದಾಗ, ನಮ್ಮ ತಂದೆ ಅಚ್ಚರಿಯಿಂದ ಹೌದೇ? ಎಂದರು. ಅದಕ್ಕೆ ಅಶ್ವಥ್ ”ಕ್ಯಾಸೆಟ್ ಗೆ ಉತ್ತಮ ಪ್ರಚಾರ ಸಿಗಬೇಕಲ್ಲವೇ?“ ಎಂದರು . ನಾನು ತಿಳಿದ ಮಟ್ಟಿಗೆ ನಮ್ಮ ತಂದೆ ಅಷ್ಟಾಗಿ...
ಸುಗಮ ಸಂಗೀತ ಕ್ಷೇತ್ರದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಸಿ ಅಶ್ವಥ್ ಅವರೊಡನೆ ನಮ್ಮ ತಂದೆಯವರ ಸ್ನೇಹ ನಿಕಟವಾದುದು. ಅದು ಬೇರೂರಿದ್ದು 1981ರ ನಂತರ; ಮೈಸೂರ ಮಲ್ಲಿಗೆ ಹಾಗೂ ಇತರ ಸಂಕಲನಗಳಲ್ಲಿದ್ದ ಭಾವಗೀತೆಗಳನ್ನು ಮೈಸೂರ ಮಲ್ಲಿಗೆ ಎಂಬ ಧ್ವನಿಸುರುಳಿಯಾಗಿ ಹೊರತಂದ ಸಂದರ್ಭದಲ್ಲಿ. ಮೈಸೂರು ಅನಂತಸ್ವಾಮಿಯವರು ನಿಸಾರರ “ನಿತ್ಯೋತ್ಸವ” ಧ್ವನಿಸುರುಳಿ ಹೊರತಂದು ಯಶಸ್ವಿಯಾದ ನಂತರದ...
ನಿಮ್ಮ ಅನಿಸಿಕೆಗಳು…