Category: ಪೌರಾಣಿಕ ಕತೆ

5

ವಿಭೀಷಣ – ಧರ್ಮದ ಮೂರ್ತ ರೂಪ

Share Button

ವಾಲ್ಮೀಕಿ ಮಹರ್ಷಿಯು ಬರೆದ ರಾಮಾಯಣ ಮಹಾಕಾವ್ಯವು ಜೀವನದಲ್ಲಿ ನಾವು ಹೇಗಿರಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಸಂಬಂಧಗಳ ಸೂಕ್ಷ್ಮತೆ ಹಾಗು ಅದರ ನಿರ್ವಹಣೆಯ ಬಗ್ಗೆ ಇಲ್ಲಿ ಸೊಗಸಾಗಿ ವರ್ಣಿಸಲಾಗಿದೆ. ಧರ್ಮಪಾಲನೆ, ವಚನಪಾಲನೆ, ಕರ್ತವ್ಯ ನಿಷ್ಠೆ, ಪತ್ನಿ ಧರ್ಮ, ಸ್ನೇಹ ಧರ್ಮ, ಸಮರ ಧರ್ಮ, ಸಹಿಷ್ಣುತೆ, ಕ್ಷಮಾದಾನ ಹೀಗೆ ನಮ್ಮ ದಿನನಿತ್ಯದ...

6

ಚಂದದ ಗುಣದ ಚಂದ್ರಹಾಸ

Share Button

ಪುರಾತನ ಕೇರಳ ರಾಜ್ಯದಲ್ಲಿ ‘ಮೇಧಾವಿ’ ಎಂದೊಬ್ಬ ರಾಜನಿದ್ದನು. ಈತನು ಪ್ರಜೆಗಳನ್ನು ಬಹಳ ಪ್ರೀತಿ ವಾತ್ಯಲ್ಯಗಳಿಂದ ಕಾಣುತ್ತಿದ್ದು ಪ್ರಜಾನುರಾಗಿಯಾದ್ದ ರಾಜನಾಗಿದ್ದ, ರಾಜನಿಗೆ ವಿವಾಹವಾಯ್ತು. ರಾಣಿ ಚಿತ್ರಭಾನು, ಅವರಿಗೆ ಬಹುಕಾಲ ಮಕ್ಕಳಾಗಲಿಲ್ಲ. ದೇವರೊಲುಮೆಯಂತೆ ಕಾಲಕ್ರಮದಲ್ಲಿ ಅವರಿಗೊಬ್ಬ ಮಗ ಹುಟ್ಟಿದ. ಪುತ್ರೋತ್ಸವವಾದ ಸಂತೋಷ ಒಂದೆಡೆಯಾದರೆ ಇನ್ನೊಂದೆಡೆ ದುಃಖವೂ ಆಯ್ತು. ಮಗುವು ಮೂಲಾ...

8

ರಾಮಾನುಜ ಲಕ್ಷ್ಮಣ.

Share Button

ಮಾನವನ ಕುಟುಂಬದ ಬಾಂಧವ್ಯ ಅವರೊಳಗಿನ ಸಾಮರಸ್ಯ, ಇರಬೇಕಾದ ವ್ಯವಸ್ಥಿತ ರೂಪ, ನ್ಯಾಯಬದ್ಧತೆ ಎಲ್ಲವೂ ನಮ್ಮ ಧರ್ಮ ಸಂಸ್ಕೃತಿಯಲ್ಲಿ ಹುದುಗಿದೆ. ಅದಕ್ಕಾಗಿಯೇ ಹಿಂದೂ ಸಂಸ್ಕೃತಿಯ ಹಿರಿಮೆ ಕೊಂಡಾಡುವಂತಾದ್ದು, ಲೋಕ ಮೆಚ್ಚುವಂತಾದ್ದಾಗಿದೆ. ನಮ್ಮ ಪುರಾಣಗಳಾದ ಮಹಾಭಾರತ,ರಾಮಾಯಣ ಮೊದಲಾದವುಗಳಲ್ಲಿ ಎಲ್ಲ ಬಾಂಧವ್ಯಗಳ ಅಡಿಪಾಯ, ಇರಬೇಕಾದ ರೀತಿ ನೀತಿಗಳನ್ನು ನೋಡುತ್ತೇವೆ. ಸುವ್ಯವಸ್ಥೆಯನ್ನು ಕಂಡು...

9

ಮಂಥರೆಯ ತಿರುಮಂತ್ರ[ಚಿಂತನ]

Share Button

“ಓಂ ಶ್ರೀ ಗುರುಭ್ಯೋ ನಮಃ” ಪರರಾಜ್ಯ ದಿಂದ ಬಂದ ಒಬ್ಬಾಕೆ ಅಯೋಧ್ಯೆಯ ಸುಖ- ಸಂತೋಷವನ್ನು ಧ್ವಂಸ ಮಾಡಿದ ಮಾಟಗಾತಿ, ಅಲ್ಲದೆ ಅಲ್ಲಿಯ ಪ್ರಜೆಗಳ ಪಾಲಿಗೆ ಖಳನಾಯಕಿಯಾದವಳು ಆ ಧೂರ್ತ ಹೆಂಗಸು ;  ಒಬ್ಬಾಕೆ ದಾಸಿಯ ನಿಮಿತ್ತದಿಂದ ಅಯೋಧ್ಯೆಯ ರಾಜಕಾರಣವೇ ಬದಲಾಯಿತು ಎಂದರೆ ತಪ್ಪಾಗಲಾರದು. ಮೇಲ್ನೋಟಕ್ಕೆ ಮಂಥರೆಯ ಕಾರಣದಿಂದ...

12

 ಚಿಂತನ : ಶ್ರೀ ವೇದವ್ಯಾಸರು

Share Button

ಓಂ ಶ್ರೀ ಗುರುಭ್ಯೋ ನಮಃಸಾಕ್ಷಾತ್ ಶ್ರೀಮನ್ನಾರಾಯಣನ ಅಂಶ ಸಂಭೂತರಾಗಿಯೇ ಜನಿಸಿದ್ದ ವೇದವ್ಯಾಸರು ಭೂಲೋಕದ ಸುಜೀವರ ಉದ್ದಾರಾರ್ಥವಾಗಿ ಕೇವಲ ಜ್ಞಾನಪ್ರಸಾರವನ್ನೇ ತಮ್ಮ ಅವತಾರದ ಉದ್ದೇಶವನ್ನಾಗಿ ಇಟ್ಟುಕೊಂಡವರು. ಹದಿನೆಂಟು ಪುರಾಣಗಳನ್ನು ಹದಿನೆಂಟು ಉಪ-ಪುರಾಣಗಳನ್ನು ಬರೆದವರು. ಅವುಗಳಲ್ಲಿ ಅತ್ಯಂತ ಕ್ಲಿಷ್ಟವಾದುದು ಮತ್ತು ಶ್ರೇಷ್ಠವಾದುದು ಮಹಾಭಾರತ. ಇದು “ಪಂಚಮವೇದ” ಎಂದು ಖ್ಯಾತಿಯನ್ನು ಪಡೆದಿದೆ....

6

ಗಟ್ಟಿಗ ಮಗ ಗರುಡ

Share Button

‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ‘ ಎಂಬ ಒಂದು ಸೂಕ್ತಿಯು ಪ್ರಚಲಿತವಾಗಿರುವಂತಾದ್ದು. ಜನನಿ ಹಾಗೂ ಜನ್ಮಭೂಮಿಯು ಸ್ವರ್ಗಕ್ಕಿಂತ ಮಿಗಿಲಾದುದಂತೆ, ಹಾಗೆಯೇ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎನ್ನುತ್ತಾ, ಪ್ರಥಮತಃ ಹೆತ್ತತಾಯಿಗೆ ಮತ್ತೆ ತಂದೆಗೆ, ಆಮೇಲೆ ಗುರುಗಳಿಗೆ ನಮಿಸಿದ ಮೇಲಷ್ಟೇ ಮಿಕ್ಕವರಿಗೆ ಪ್ರಣಾಮ ಮಾಡುವುದು ಹಿಂದೂಗಳಲ್ಲಿ ಸನಾತನದಿಂದಲೇ ಬಂದ...

6

ಜಾಜಲಿಯ ಸಾಧನೆ…

Share Button

ಅನೇಕ ಋಷಿಮುನಿಗಳು ತಪಸ್ಸನ್ನಾಚರಿಸಿ ತಮ್ಮ ತಮ್ಮ ಸಾಧನೆಗಳನ್ನು ಈಡೇರಿಸಿಕೊಂಡಿರುವ ಕತೆಗಳನ್ನು ಕೇಳಿದ್ದೇವೆ. ಹೆಚ್ಚಿನವರು ನಿಯಮಿತವಾಗಿ ತಮ್ಮ ದಿನನಿತ್ಯ ವೃತ್ತಿಗಳನ್ನೂ ದೇಹಬಾಧೆಗಳನ್ನೂ ತೀರಿಸಿಕೊಂಡು ಧ್ಯಾನಕ್ಕೆ ಕುಳಿತುಕೊಂಡರೆ ಕೆಲವು ಮಂದಿ ಉದಾ: ವಾಲ್ಮೀಕಿ, ಚ್ಯವನ ಮೊದಲಾದವರು ಅನ್ನಾಹಾರಗಳನ್ನೂದೇಹಬಾಧೆಗಳನ್ನೂ ತೊರೆದು ತಪಸ್ಸನ್ನಾಚರಿಸುತ್ತಿದ್ದರು. ಅಂದರೆ ಅವುಗಳನ್ನೆಲ್ಲಾ ಕ್ರಮೇಣ ನಿಯಂತ್ರಣಕ್ಕೆ ತಂದುಕೊಂಡು ದೀರ್ಘಕಾಲ ತಪಸ್ಸನ್ನಾಚರಿಸುತ್ತಿದ್ದರು....

5

ನಕುಲ-ಸಹದೇವರ ಶ್ರೇಷ್ಠತೆ-ವಿಶಿಷ್ಟತೆ

Share Button

ಒಬ್ಬ ರಾಜನಿಗೋ ಅಥವಾ ಗೃಹಸ್ಥನಿಗೋ ಇಬ್ಬರು ಪತ್ನಿಯರಿದ್ದರೆ; ಒಬ್ಬರು ಬಲತಾಯಿ, ಇನ್ನೊಬ್ಬರು ಮಲತಾಯಿ -ತಂದೆಯ ಹಿರಿ ಪತ್ನಿಯೊಂದಿಗೆ ಹಾಗೂ ಕಿರಿ ಪತ್ನಿಯೊಂದಿಗೆ ಮಕ್ಕಳಿಗೂ ಏಗುವುದು ಕಷ್ಟ ಎಂಬ ಭಾವನೆ ಲೋಕದಲ್ಲಿ ಇರುವಂತಾದ್ದು, ಅರ್ಥಾತ್ ಹೆಣ್ಣಿಗೆ ತಾನು ಹೆತ್ತ ಮಕ್ಕಳಲ್ಲಿರುವಷ್ಟು ಅಕ್ಕರೆ ಇನ್ನೋರ್ವಾಕೆಯ ಮಕ್ಕಳಲ್ಲಿ ಇರುವುದಿಲ್ಲ ಎಂಬುದೇ ತಾತ್ಪರ್ಯ....

4

ಮಹಾಪರಾಕ್ರಮಿ ಬಲಭೀಮ

Share Button

ಬಲವಾದ ದೇಹದಾರ್ಡ್ಯ ಇರುವವರನ್ನ, ಕಠಿಣ ಕೆಲಸ ಮಾಡುವವರನ್ನ, ಅತಿಭಾರ ಎತ್ತುವವರನ್ನ, ಮಿತಿಮೀರಿ ಉಣ್ಣುವವರನ್ನ ಅಲ್ಲದೆ ಶುಚಿ, ರುಚಿಯಾಗಿ ಅಡುಗೆ ಮಾಡಿ ಗುಟ್ಟಾಗಿ ಮುಚ್ಚಿಟ್ಟು ಹೋಗುವವರನ್ನೂ ಭೀಮಸೇನನಿಗೆ ಹೋಲಿಸಿ ಹೇಳುವ ವಾಡಿಕೆಯಿದೆ, ಯಾಕೆ?… ಏನು ಆ ಕತೆ?  ನೋಡೋಣ. ಮಹಾಭಾರತ ಕತೆಯಲ್ಲಿರುವ ಪಂಚಪಾಂಡವರಲ್ಲಿ ದ್ವಿತೀಯನಾಗಿಯೂ ಶೋಭಿಸುತ್ತಾನೆ ಈ ನಮ್ಮ...

6

ಕೃಷ್ಣನ ಆಪ್ತಸಖ ಪಾರ್ಥ

Share Button

ಅರ್ಜುನನೆಂದರೆ ತಿಳಿಯದವರಾರು? ಪರಾಕ್ರಮಶಾಲಿ, ಶ್ರೀಕೃಷ್ಣನ ಆಪ್ತ ಸಖ. ಮಾತ್ರವಲ್ಲ ಸೋದರತ್ತೆಯ ಮಗನೂ ಹೌದು. ಎಲ್ಲಿ ಅರ್ಜುನನಿದ್ದಾನೋ ಆತನಿಗೆ ನೆರಳಾಗಿ ಕೃಷ್ಣನೂ ಇದ್ದಾನೆ ಎಂಬ ಮಾತಿದೆ. ಅರ್ಜುನನ ಜನನ:  ಚಂದ್ರ ವಂಶದಲ್ಲಿ ವಿಚಿತ್ರವೀರ್ಯನ ಮಗನೆ  ಪಾಂಡು ಚಕ್ರವರ್ತಿ. ಈ ಪಾಂಡು ಹಾಗೂ ಕುಂತಿಯರ ಪುತ್ರನೇ ಅರ್ಜುನ. ಪಂಚಪಾಂಡವರಲ್ಲಿ ಮೂರನೆಯವ....

Follow

Get every new post on this blog delivered to your Inbox.

Join other followers: