Category: ಪೌರಾಣಿಕ ಕತೆ

4

ಕೃಪಾಚಾರ್ಯರ ಕೃಪೆ

Share Button

ಹಿರಿಯರು ತಮ್ಮ ಮಕ್ಕಳ ಹೆಸರನ್ನು ಉಲ್ಲೇಖಿಸುವಾಗ ಅಥವಾ ಬರೆಯುವಾಗ ಹೆಸರಿನ ಹಿಂದೆ ಚಿ| ಅಂದರೆ ಚಿರಂಜೀವಿ ಎಂದು ಸೇರಿಸಿ ಬರೆಯುವುದು ಸರ್ವತ್ರ ವಾಡಿಕೆ. ತಮ್ಮ ಮಕ್ಕಳು ಚಿರಾಯುಗಳಾಗಬೇಕು ಎಂಬುದೇ ಇಲ್ಲಿ ಮಾತಾ-ಪಿತರ ಮನೋಭೂಮಿಕೆ, ಆದರೆ ಅವರೆಲ್ಲಾ ಚಿರಾಯುಗಳಾಗುವುದಿಲ್ಲವಲ್ಲ ಹುಟ್ಟಿದ ಮನುಷ್ಯ ಸಾಯಲೇಬೇಕಲ್ಲವೇ? ಜನ್ಮವೆತ್ತಿ ಬಂದ ಮಾನವರು ಈ...

5

ಭಗವದ್ಗೀತಾ ಸಂದೇಶ

Share Button

ಶ್ರೀ ಭಗವಾನುವಾಚಊರ್ಧ್ವ ಮೂಲ ಮಧಃ ಶಾಖಮ್ಅಶ್ವತ್ಥಂ ಪ್ರಾಹುರವ್ಯಯಮ್ Iಛಂದಾಂಸಿ ಯಸ್ಯ ಪರ್ಣಾನಿಯಸ್ತಂ ವೇದ ಸ ವೇದವಿತ್ II ಸರ್ವೋನ್ನತ ಭಾಗದಲ್ಲಿ ಬೇರು, ಕೆಳಗೆ ಕೊಂಬೆಗಳು, ಇರುವ ಅಶ್ವತ್ಥ ವೃಕ್ಷವನ್ನು ”ಅವ್ಯಯವೃಕ್ಷ”ವೆನ್ನುವರು. ಇದರ ಎಲೆಗಳು ವೇದಗಳು. ಯಾರು ಈ ವೃಕ್ಷವನ್ನು ಮೂಲ ಸಹಿತ ಬಲ್ಲರೋ ಅವರು ವೇದವನ್ನು ಬಲ್ಲವರು...

6

 ಜಗದ್ಗುರುವಿನ ಜನನ….

Share Button

ಓಂ ಶ್ರೀ ಗುರುಭ್ಯೋ ನಮಃ  ಯೋಗ ಮಾಯೆಯು ಶ್ರೀಹರಿಯ ಆಣತಿಯಂತೆ ದೇವಕಿಯ ಏಳನೇ ಗರ್ಭದಲ್ಲಿದ್ದ ಪಿಂಡವನ್ನೊಯ್ದು ಗೋಕುಲದಲ್ಲಿದ್ದ ವಸುದೇವನ ಪತ್ನಿ ರೋಹಿಣಿಯ ಗರ್ಭದಲ್ಲಿ ಇರಿಸಿದಳು. ಅಲ್ಲದೆ ಮಹಾವಿಷ್ಣುವಿನ ಆಜ್ಞೆಯಂತೆ ನಂದಗೋಪನ ಪತ್ನಿ ಯಶೋದೆಯ ಗರ್ಭವನ್ನು ಪ್ರವೇಶಿಸಿದಳು.  ವಸುದೇವ- ದೇವಕಿಯರು ಕಂಸನಿಂದ ಬಂಧಿತರಾಗಿ ಸೆರೆ ಯಲ್ಲಿದ್ದರು. ಹೀಗಿರಲು ಒಂದು...

6

ದ್ರೋಣ ಸುತ ಅಶ್ವತ್ಥಾಮ

Share Button

‘‘ಕೈಯಲ್ಲಿ ಕಾಸಿಲ್ಲಿ ಕಡಕೆ ನಂಬುವರಿಲ್ಲೆ| ಹರಹರ್ ಶಿವನೆ ಬಡತನ| ಈ ಒಂದು ಬರದಿರಲಿ ನಮ್ಮ ಬಳಗಕ್ಕೆ|” ಎಂಬುದು ಜಾನಪದ ಸೊಲ್ಲು. ಹೌದು ಬಡತನವನ್ನು ಎಲ್ಲರೂ ದ್ವೇಷಿಸುತ್ತಾರೆ. ಆದರೆ ಯಾರೂ ಇಂದು ಇದ್ದಂತೆ ನಾಳೆ ಇರಲಾರ! ಬಡವ ಬಲ್ಲಿದನಾಗಬಹುದು, ಬಲ್ಲಿದ ಬಡವನಾಗಲೂಬಹುದು. ‘ಮಿಡಿ ಹಣ್ಣಾಗದೇ ದೈವದೊಲ್ಮೆಯಿರಲ್ ಕಾಲಾನುಕಾಲಕ್ಕೆ ತಾಂ...

6

ಧರ್ಮ ರಕ್ಷಣೆಗೆ ವೇದಿಕೆ

Share Button

ಓಂ ಶ್ರೀ ಗುರುಭ್ಯೋ ನಮಃಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯಚ Iನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ IIಜಗದ್ಗುರು, ಗೀತಾಚಾರ್ಯ ಮೊದಲಾಗಿ ಸ್ತುತಿಸಲ್ಪಡುವ ಶ್ರೀ ಕೃಷ್ಣನ ಅವತಾರವು ವಿಶಿಷ್ಟವಾದದು. ಹಿಂದೆ ಕೋಟ್ಯಾನು ಕೋಟಿ ದಾನವರು ಭೂಲೋಕದಲ್ಲಿ ಲೋಕಕಂಟಕರಾಗಿ ಮೆರೆಯುತ್ತಿದ್ದರು. ಅವರ ದುರ್ವರ್ತನೆಯನ್ನು ತಾಳಲಾರದೆ ಭೂದೇವಿಯು ಗೋ ರೂಪವನ್ನು ತಾಳಿ...

5

ದಿಲೀಪನ ನಿಸ್ವಾರ್ಥ ಸೇವೆ

Share Button

ಪರೋಪಕಾರಾಯ ಫಲಂತಿ ವೃಕ್ಷಾ!! ಪರೋಪಕಾರಾಯ ವಹಂತಿ ನದ್ಯಃ।ಪರೋಪಕಾರಾಯ ದುವಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಂ॥ ಅನ್ಯರಿಗೆ ಅಸಂತೋಷ, ದುಃಖ, ಕಷ್ಟ ಕೊಡುವುದು ಸರ್ವಥಾ ಸಲ್ಲದು. ಅನ್ಯರಿಗೆ ನಮ್ಮಿಂದಾದಷ್ಟು ಉಪಕಾರಗಳನ್ನು ಮಾಡಬೇಕು. ಒಂದು ವೇಳೆ ಅದು ಕೈಲಾಗದಿದ್ದರೆ ಉಪದ್ರವಾದಿಗಳನ್ನು ಮಾಡದೆ ತಮ್ಮಷ್ಟಕ್ಕೆ ತಾವಿರಬೇಕೇ ವಿನಹ ಅಪಕಾರ ಬಯಸಬಾರದು. ನಮ್ಮೆಲ್ಲ ಶರೀರವು...

5

ಧ್ರುವ ತಾರೆ

Share Button

ಸವತಿಯ ಮತ್ಸರವು ಸಾವಿರಾರು ಬಗೆಯಂತೆ. ಮಲತಾಯಿಯ ಕಷ್ಟಕ್ಕೆ ಗುರಿಯಾದರೂ ತನ್ನ ಪ್ರಾಮಾಣಿಕತೆಯಿಂದ, ದೈವ ಸಾನ್ನಿಧ್ಯತೆಯಿಂದ ಮೆರೆದ ಮಣಿಕಂಠ ಆ ಚಂದ್ರಾರ್ಕ ಪೂಜನೀಯ ಸ್ಥಾನ ಪಡೆದ ವಿಚಾರ ಹಿಂದಿನ ಅಂಕಣದಲ್ಲಿ ಓದಿದ್ದೇವೆ. ಹಾಗೆಯೇ ಮಲತಾಯಿಯ ಕುತ್ತಿತ ದೃಷ್ಟಿಗೆ ಬಲಿಯಾಗಿ ನೊಂದು, ಬೆಂದು ಕೊನೆಗೆ ದೇವರನೊಲಿಸಿಕೊಳ್ಳುವುದಕ್ಕಾಗಿ ತಪಸ್ಸು ಕುಳಿತು ಸಾಕ್ಷಾತ್ಕಾರವಾಗಿ,...

5

ಹುಲಿಯ ಬೆನ್ನೇರಿದ ಬಾಲಕ…?

Share Button

ಲೋಕದಲ್ಲಿ ಮಲತಾಯಿಯ ಮತ್ಸರವೆಂಬುದು ಮಹಾ ಕಠಿಣವಾದುದು. ಮೊದಲನೆಯವಳ ಮಗುವನ್ನು ಸರಿಯಾಗಿ ಪೋಷಣೆ ಮಾಡದೆ, ಆಹಾರವನ್ನೂ ಸರಿಯಾಗಿ ಕೊಡದೆ ಇನ್ನಿಲ್ಲದಂತೆ ಪೀಡಿಸುವುದು ಸರ್ವೇ ಸಾಮಾನ್ಯ. ಮಲತಾಯಿಗೆ ಮಕ್ಕಳಾಯಿತೂಂದ್ರೆ ಮತ್ತೆ ಕೇಳುವುದೇ ಬೇಡ. ಬಲ ಮಗುವನ್ನು ಕೊಂದು ಬಿಡಬೇಕೆಂಬ ಸಂಚು ಹೂಡಿ ಮಂತ್ರ – ತಂತ್ರಗಳ ಸಹಿತ ಎಲ್ಲಾ ವಿದ್ಯೆಗಳನ್ನೂ...

9

ಗುರುವಿನ ಮಾತು ಈಡೇರಿಸಿದ ಗಾಲವ

Share Button

ಮಾನವನ ಮೇಲೆ ಋಣತ್ರಯಗಳು ಇವೆ ಎನ್ನುತ್ತಾರೆ. ಅವುಗಳೆಂದರೆ ದೇವಋಣ, ಪಿತೃಋಣ, ಋಷಿ (ಆಚಾರ್ಯ) ಋಣಗಳೆಂದು ಮೂರು ವಿಧ. ಅವುಗಳಿಂದ ಮುಕ್ತರಾಗಬೇಕೆಂದಾದಲ್ಲಿ ಅವರಿಗೆ ಸಲ್ಲಬೇಕಾದುದನ್ನು ಸಲ್ಲಿಸಬೇಕು. ಜನ್ಮಕೊಟ್ಟ ತಂದೆಗೆ ಮಕ್ಕಳು ಮಾಡಬೇಕಾದ ಕರ್ತವ್ಯವನ್ನು ಮಾಡುವುದು, ವೃದ್ಧಾಪ್ಯದಲ್ಲಿ, ಕಾಯಿಲೆಗಳಲ್ಲಿ, ಅವರ ಸೇವೆಯನ್ನು ಭಕ್ತಿ ಶ್ರದ್ಧೆಯಿಂದ ಮಾಡುವುದರ ಮೂಲಕ ಪಿತನ ಋಣ...

7

ಶೃಂಗಿಯೆಂಬ ಯೋಗಿ

Share Button

ಅರಿಯದೆ ಯಾವುದಾದರೂ ಪಾಪಕಾರ್ಯ ಅಥವಾ ತಪ್ಪು ಕೆಲಸ ಮಾಡಿದರೆ ಆ ತಪ್ಪು ಮನವರಿಕೆಯಾದಾಗ ಆತ ಪಶ್ಚಾತ್ತಾಪಪಟ್ಟನೆಂದರೆ ಅದಕ್ಕೆ ಕ್ಷಮೆಯಿದೆ ಎನ್ನುತ್ತಾರೆ. ಎಂದರೆ, ಮುಂದೆ ಅಂತಹ ತಪ್ಪು ತನ್ನಿಂದ ಆಗದಂತೆ ನೋಡಿಕೊಳ್ಳುತ್ತಾನೆ, ತಿದ್ದಿಕೊಳ್ಳುತ್ತಾನೆ, ಉತ್ತಮನಾಗುತ್ತಾನೆ. ಎಂಬುದು ಇದರ ಹಿಂದಿರುವ ತಾತ್ಪರ್ಯ. ಮನುಷ್ಯನೆಂದ ಮೇಲೆ ತಿಳಿದೋ ತಿಳಿಯದೆಯೋ ತಪ್ಪುಗಳು ಬಂದೇ...

Follow

Get every new post on this blog delivered to your Inbox.

Join other followers: