ಕಲಿತಾಡು ಕನ್ನಡವ..
ಕನ್ನಡ ಕಲಿ ‘ಕನ್ನಡ’ಕದಲಿ ‘ಕದ’ಲಿದರೆ ಕದ ನಿಧಿ ಪೆಟ್ಟಿಗೆ ಸದಾ || ತೆರೆದಾ ಮನ ತೆರೆ ಸರಿಸಿ ಘನ ಬಿಚ್ಚಿದ ಕೊಡೆ ಮಾಯೆ ಕನ್ನಡದಲದರದೆ ಛಾಯೆ || ನಾಲಿಗೆ ಸದಾ ಎಲುಬಿಲ್ಲದ ಸಿದ್ಧ ಶುದ್ಧ ಮಾಡುವ ತರ ನುಡಿ ಕನ್ನಡ ಸ್ವರ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಕನ್ನಡ ಕಲಿ ‘ಕನ್ನಡ’ಕದಲಿ ‘ಕದ’ಲಿದರೆ ಕದ ನಿಧಿ ಪೆಟ್ಟಿಗೆ ಸದಾ || ತೆರೆದಾ ಮನ ತೆರೆ ಸರಿಸಿ ಘನ ಬಿಚ್ಚಿದ ಕೊಡೆ ಮಾಯೆ ಕನ್ನಡದಲದರದೆ ಛಾಯೆ || ನಾಲಿಗೆ ಸದಾ ಎಲುಬಿಲ್ಲದ ಸಿದ್ಧ ಶುದ್ಧ ಮಾಡುವ ತರ ನುಡಿ ಕನ್ನಡ ಸ್ವರ...
ಅದು ಯಾವ ಜನುಮದ ನಂಟೊ ? ಬಾಲ್ಯದ ಕನಸು ಚಿತ್ತಾರ ಬಿಡಿಸಿಕೊಂಡು ಮೊಗ್ಗಾಗಿ ಚಿಗುರೊಡೆದು ಹಿಗ್ಗಾಗಿ ಅರಳಿಕೊಂಡ ದಿನಗಳವು. ಬಾಲ್ಯದ ಎಳೆತನದ ಹೊಸಿಲು ದಾಟಿ ಟೀನೇಜಿನ ಬಾಗಿಲು ತಟ್ಟುತ್ತಿದ್ದ ಗೊಂದಲ ಸಂಭ್ರಮಗಳ ಸಮ್ಮಿಶ್ರ ಸಮಯ. ಆ ದಿನಗಳಲ್ಲೆ ಹೊಸದಾಗಿ ಬಂದು ನೆರೆಮನೆಯವರಾದ ಕುಟುಂಬವೊಂದರ ಪರಿಚಯವಾಗಿದ್ದು… ಮಕ್ಕಳ...
ಅವನಾರೊ ಗಾಂಧಿತಾತ ಬೆನ್ನು ಬಿಡದಂತೆ ಭೂತ ಮುಂದೆ ನಡೆ ನಡೆದನಂತೆ ಇಂದೇಕೆ ಹಿಂದೆ ಬಿದ್ದ ಕಥೆ ?|| ಇವನೆ ನೋಡು ಗಾಂಧಿತಾತ ಮಿಕ್ಕುಳಿದ ಬರಿದವನ ಭೂತ ಬಯಸಿದ್ದನವ ಭವ್ಯ ಭವಿತ ಅದನ್ಹುಡುಕುವುದರಲೆ ಪ್ರಸ್ತುತ || ಅವನಿದ್ದನಂತೆ ಗಾಂಧಿ ತಾತ ಸ್ವಚ್ಛತೆಗೆ ಆಶ್ರಮದಲಿ ಕೂತ ಗಲ್ಲಿ ಮೋರಿ...
ಹೀಗೆ ಮಾತಾಡುತ್ತ ಕುಳಿತ ಹೊತ್ತು ಮಗನ ಕೈ ಹಿಡಿದು ಸುಮ್ಮನೆ ನೋಡ್ತಾ ಇದ್ದೆ – ಹಸ್ತ ಪೂರ ಗೆರೆಗಳಿದ್ರೂ ಅಸ್ಪಷ್ಟವಾಗಿ, ನಯವಾಗಿ ಕಾಣೋ ತರವನ್ನ. ಬರಿಯ ದಪ್ಪ ಗೆರೆ ಬಿಟ್ರೆ ಮಿಕ್ಕಿದ್ದು ತೆಳು ಗೆರೆಗಳು ಕಡಿಮೆ; ಜತೆಗೆ ತೀರಾ ಇಲ್ಲವೆ ಇಲ್ಲ ಅನ್ನೊ ಹಾಗೆ ತೆಳುಗೆರೆಗಳು....
ವರ್ಷಕೊಮ್ಮೆ ಅಮ್ಮನ ಜತೆ ತಪ್ಪದೆ ಬಂದು ಭೇಟಿಯಿತ್ತು ಹೋಗುವ ಗಣಪನೆಂದರೆ ನಮಗೆಲ್ಲ ಎಂತದೊ ಪ್ರೀತಿ. ಬೇರೆ ಹಬ್ಬಗಳಲ್ಲಿ ಬಂದು ಹೋಗುವ ನೂರೆಂಟು ದೇವರುಗಳಿಗು ಮಿಗಿಲಾದ ವಿಶೇಷ ಪ್ರೀತಿ ಗಣಪನ ಮೇಲೆ. ಮಿಕ್ಕವರದು ಬಹುತೇಕ ಮನೆಯಲ್ಲಿರುವ ಪೋಟೊ ಅಥವಾ ವಿಗ್ರಹಕ್ಕೆ ಮಾಡುವ ಅಲಂಕಾರ ಪೂಜೆಯಾದರೆ ಗಣಪನ ಪೂಜೆಗೆ ಮಾತ್ರ...
ಈ ಬದುಕಿನ ಪರಿಯೆ ವಿಚಿತ್ರ. ಬದಲಾವಣೆ ಬದುಕಿನ ಸಹಜ ನಿಯಮ ಎಂದು ಹೇಳುತ್ತಲೆ ಇರುತ್ತಾರೆ, ನಾವು ಕೇಳುತ್ತಲೆ ಇರುತ್ತೇವೆ. ಆದರೆ ತೀರಾ ಇತ್ತೀಚಿನವರೆಗು ನಮ್ಮ ತೀರಾ ಖಾಸಗಿ ಬದುಕಿಗು, ಅದೇ ಬದುಕಿನ ಸಾರ್ವಜನಿಕ ಮುಖವಾಡಕ್ಕು ಒಂದು ತೆಳು ಪರದೆ ಅಡ್ಡವಿರುತ್ತಿತ್ತು. ಪ್ರತಿಯೊಬ್ಬರಿಗು ಒಂದು ರೀತಿಯ ಆಯ್ಕೆಯ ಸ್ವೇಚ್ಛೆಯಿತ್ತು...
ಈಗ ಎಷ್ಟೆ ತಡವಾಗಿ ಮಲಗಿದರು ಯಾರೊ ಬಡಿದೆಬ್ಬಿಸಿದಂತೆ ಐದೂವರೆಗೆ ಎಚ್ಚರವಾಗಿಬಿಡುತ್ತದೆ. ಎದ್ದ ಒಂದರ್ಧ ನಿಮಿಷದ ನಂತರ ಅಲಾರಾಂ ಬಡಿದುಕೊಂಡಾಗ, ಅದರ ಅಗತ್ಯವಿತ್ತ ಅನಿಸಿದ್ದು ಎಷ್ಟೊ ಬಾರಿ. ಎದ್ದ ಸ್ವಲ್ಪಹೊತ್ತು ಆಲಸಿಕೆ, ಸೋಮಾರಿತನದ ದೆಸೆಯಿಂದ ಹಾಗೆ ಒರಗಿಕೊಂಡೊ, ಹೊದ್ದುಕೊಂಡೊ ಕಣ್ಮುಚ್ಚಿ ಕೂರುವುದು ಮಾಮೂಲಾದರು ಪ್ರಜ್ಞಾವಸ್ಥೆಯ ಕದ ಹಂತ ಹಂತವಾಗಿ...
ಬಡವ ಸಿರಿವಂತನೆನ್ನುವ ಬೇಧವೆಣಿಸದೆ ಕಾಡುವ ನೆಗಡಿ ಯಾರಿಗೆ ತಾನೆ ಅಪರಿಚಿತ? ಬೇಡದ ಅತಿಥಿಯಾಗಿ ಬಂದು, ಬಲವಂತದಿಂದ ವಾರವಾದರು ತಳವೂರಿ ಕಾಡಿ ಕಂಗೆಡಿಸಿ ನಂತರವಷ್ಟೆ ಮರೆಯಾಗುವ ಇದರ ಪರಾಕ್ರಮದೆದುರು ಎಲ್ಲರೂ ದುರ್ಬಲರೆ. ಇದರ ಸಾಮರ್ಥ್ಯಕ್ಕೆ ಸೋತು, ಎದುರು ನಿಲ್ಲಲಾಗದಿದ್ದರು ಸರಿ ಕಡೆಗೆ ಕಥೆ, ಕವನ, ಪ್ರಬಂಧವಾದರು ಬರೆದು ಸೇಡು...
ಮದುವೆ ಮುಂಜಿ ಜವಾಬ್ದಾರಿ ಮಕ್ಕಳ ಬದುಕಿಗೊಂದೊಂದು ದಾರಿ ಮುಗಿಸಿದ ಸಂತೃಪ್ತಿಗೆ ರಾಮ ಕಲಿತ ಚಟ ಕುಡಿತದ ಬ್ರಹ್ಮ.. ಯಾಕೊ ಅತಿಯಾಯ್ತೆಂದು ಸತಿ ಜಾಡಿಸಿಬಿಟ್ಟಳು ಆ ರಾತ್ರಿ ಕುಡಿದು ಬಂದವನ ಮೇಲೆ ಕಾರುತ್ತ ಮೊನೆಚಿನ ವಾಗ್ದಾಳಿ.. ‘ನೀವೊಬ್ಬರೆ ಏನು ನಿರಾಳ ? ಮುಗಿದಿದೆ ನನದೂ ಹೊರೆಯಾಳ ಕಳೆದಿದೆ ಹೊಣೆಗಾರಿಕೆ...
ನಿಮ್ಮ ಅನಿಸಿಕೆಗಳು…