ಬಂಡೆಯ ಬೆರಗು
ಬಾಗಿಲು ಕಿಟಕಿಗಳ ಕೊರೆದು ಬಂಡೆಗಳ ನಡುವೆಯೂ ಬೀದಿಯಾಗಿಸುವುದ ಕಂಡು ಬೆಚ್ಚಿ ಬಿದ್ದಿರಬಹುದು ಬದಿಗೆ ಸರಿದಿರಬಹುದು ಬಣ್ಣಬಣ್ಣದ ಬದುಕಿದು ಬಿಳಿಕರಿಯ ಗೋಡೆಯಡಿ ಬೆಡಗು ಬಿನ್ನಾಣಗಳೆಡೆ ಬೆರಗುಗೊಂಡು ಮತ್ತೆ ಬೇಸತ್ತು ಕೊರಗಿರಬಹುದು ಬರಸಿಡಿಲಿಗೆ ಅಂಜಿರಬಹುದು ಬೆದರಿ ಬೆವೆತಿರಬಹುದು ಭಯದಿ ನಡುಗಿರಬಹುದು ಬಿರುಗಾಳಿಗೆ ಭೀತವಾಗಿರಬಹುದು ಬಾಯಿಬರದದಕೆ ಹೇಳಲು ಬಾಗಲಾಗದು ಹೋಗಲಾಗದು ಬೇಸರ...
ನಿಮ್ಮ ಅನಿಸಿಕೆಗಳು…