ಮಧ್ಯವಯಸ್ಸಿನ ನಂತರ…ಜೀವನಾ-ಸಂಜೀವನಾ

Share Button

Bellala Gopinatha Rao

ಬೆಳ್ಳಾಲ ಗೋಪಿನಾಥ ರಾವ್

ಜೀವನದ ಬಗೆಗಿನ ಕೆಲವು ಮೆಲುಕು ಹಾಕುವಂತ ನುಡಿಗಳು: ಮಧ್ಯವಯಸ್ಸಿನ ನಂತರ

 

1. ಜೀವನದ ರಹಸ್ಯ :  ಮಧ್ಯವಯಸ್ಸಿನ ವರೆಗೆ : ಹೆದರ ಬೇಡಿ , ಮಧ್ಯವಯಸ್ಸಿನ ನಂತರ : ಬೇಸರ ಪಡಬೇಡಿ

2. ನೀವು ಸಾಧ್ಯವಾಗುವಾಗ ನಿಮ್ಮ ಜೀವನವನ್ನು ಅನುಭವಿಸಿ

3. ಎರಡು ಹೆಜ್ಜೆ ನಡೆದು ದುಃಖ ವ್ಯಕ್ತ ಪಡಿಸಲೂ ಸಾಧ್ಯವಾಗದಷ್ಟು ಮುದುಕರಾಗುವ ವರೆಗೆ ಮುಂದೂಡಬೇಡಿ, ಎಲ್ಲಿಯವರೆಗೆ ನಿಮ್ಮಿಂದ ಸಾಧ್ಯವೋ ಅಲ್ಲಿಯವರೆಗೆ ಮೊದಲೇ ನೀವು ನೋಡಬೇಕೆಂದಿರುವ ಸ್ಥಳಗಳನ್ನು ಭೇಟಿ ಕೊಡಿ, ನೋಡಿ ಬಿಡಿ.

4. ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಹಳೆ ಸ್ನೇಹಿತರು ಗುರು ಹಿರಿಯರು ಇವರುಗಳನ್ನು ಬೇಟಿಯಾಗಿಬಿಡಿ, ಮುಂದೆ ಅವರೆಲ್ಲರನ್ನು ನೋಡುವ ಅವಕಾಶ ಸಿಗುತ್ತೋ ಇಲ್ಲವೋ.

5. ಬ್ಯಾಂಕುಗಳಲ್ಲಿ ಇಟ್ಟ ನಿಮ್ಮ ಹಣ ನಿಮ್ಮದಾಗಿ ಇರದಿರಬಹುದು, ಅದಕ್ಕೇ ಅದನ್ನ ಖರ್ಚು ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಎಂಜೋಯ್ ಮಾಡಿ, ನೀವು ನಾಳೆಯ ಬಗ್ಗೆ ಯೋಚಿಸ ಬೇಕಿಲ್ಲ

6. ಏನೆಲ್ಲಾ ತಿನ್ನ ಬೇಕೆನಿಸುತ್ತೋ ತಿಂದು ಬಿಡಿ, ನೀವು ಖುಷಿ ಯಾಗಿರುವುದು ಮಾತ್ರ ಮುಖ್ಯ ಆದರೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳನ್ನು ಯಾವಾಗಲೂ ತಿನ್ನಿ, ಅದೇ ನಿಮ್ಮ ಆರೋಗ್ಯಕ್ಕೆ ಹಾನಿಕರವಾದವುಗಳನ್ನು ತಿನ್ನಲೇಬೇಕೆನಿಸಿದಲ್ಲಿ ಕೆಲವು ಸಾರಿ ಮಾತ್ರ ಸ್ವಲ್ಪವೇ ತಿನ್ನಿ.

7. ಅನಾರೋಗ್ಯವನ್ನು ಸರಿಯಾದ ರೀತಿಯಲ್ಲೇ ಕೃಮಿಸಿ, ಬಡವರಾಗಿರಲಿ, ಶ್ರೀಮಂತರಾಗಿರಲಿ, ಪ್ರತಿಯೊಬ್ಬರೂ ಹುಟ್ಟು, ವಯಸ್ಸು, ಅನಾರೋಗ್ಯ, ಮತ್ತು ಸಾವು ಈ ಚಕ್ರದಲ್ಲೇ ಸುತ್ತಬೇಕು. ಇದಕ್ಕೆ ಶಾಶ್ವತವಾದ ಪರಿಹಾರ ಎಂದೂ ಇಲ್ಲವೇ ಇಲ್ಲ. ಇದೇ ಜೀವನ.

8. ನೀವು ಅನಾರೋಗ್ಯವಾಗಿರುವಾಗ ಹೆದರುವುದೂ ಬೇಡ, ಬೇಸರವೂ ಬೇಡ. ನಿಮ್ಮದೇನಾದರೂ ಬಾಕಿ/ ನೀವು ಪರಿಹರಿಸಬೇಕಾದ /ಇತ್ಯರ್ಥವಾಗಬೇಕಾದ ಸಮಸ್ಯೆ ಇದ್ದರೆ ಅದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ಮತ್ತು ನಿರಾಳರಾಗಿ.

9. ನಿಮ್ಮ ದೇಹವನ್ನು ವೈದ್ಯರೂ, ಜೀವನವನ್ನು ದೇವರೂ/ ಪ್ರಕೃತಿಯೂ ಮತ್ತು ನಿಮ್ಮ ಮನಸ್ಥಿತಿಯನ್ನು ನೀವೂ ನೋಡುತ್ತಿರಿ.

10. ನಿಮ್ಮ ಚಿಂತೆ ನಿಮ್ಮ ಅನಾರೋಗ್ಯವನ್ನು ಸರಿ ಪಡಿಸುವದಾದರೆ ನೀವು ಸದಾ ಚಿಂತಿಸಿ, ನಿಮ್ಮ ಆಯುಷ್ಯವನ್ನು ಚಿಂತೆ ಹೆಚ್ಚಿಸುವುದಾದರೆ ನೀವು ಸದಾ ಚಿಂತಿಸಿ, ಮತ್ತು ಸಂತೋಷಗಳಿಗೆ ಚಿಂತೆಗಳನ್ನು ಬದಲಿಸ ಬಹು ದಾದರೆ ಹಾಗೇ ಮಾಡಿ .

11. ಮಕ್ಕಳು ಅವರ ಭವಿಷ್ಯವನ್ನು ಖುದ್ದು ಮಾಡಿಕೊಳ್ಳುತ್ತಾರೆ.

middle age

12. ಹಳೆಯ ನಾಲ್ಕು ಖಜಾನೆಯನ್ನು ಸರಿಯಾಗಿ ನೋಡಿಕೊಳ್ಳಿ

  • ನಿಮ್ಮ ಹಳೆಯ ದೇಹ : ನಿಮ್ಮ ಆರೋಗ್ಯ ಮತ್ತು ದೇಹಸ್ಥಿತಿಯ ಬಗೆಗೆ ಜಾಸ್ತಿ ಕಾಳಜಿ ನಿಮ್ಮದೇ ಇರಲಿ
  • ನಿಮ್ಮ ಆರ್ಜಿತ ಧನ ನಿಮ್ಮ ಕೈಯಲ್ಲೇ ಇಟ್ಟುಕೊಳ್ಳುವುದು ಅತ್ಯಂತ ಒಳ್ಳೆಯದು.
  • ನಿಮ್ಮ ಹಳೆಯ ಸಂಗಾತಿ ಅತ್ಯಂತ ಅಮೂಲ್ಯ ಖಜಾನೆಯಿದು, ಪ್ರತಿ ಕ್ಷಣವೂ ಅನ್ಯೋನ್ಯವಾಗಿ ಸಹಚರರಂತೆ ಬಾಳಲು ಪ್ರಯತ್ನ ಪಡಿ , ನಿಮ್ಮಿಬ್ಬರಲ್ಲಿ ಒಬ್ಬರು ಮೊದಲು ಕೈ ಬಿಡುವಿರಿ ( ಈ ಜಗದಿಂದ)
  • ನಿಮ್ಮ ಹಳೆಯ ಸ್ನೇಹಿತರು: ಇವರನ್ನು ಸಿಗಲು ಸಾಧ್ಯವಾಗುವ ಪ್ರತಿ ಕ್ಷಣಗಳನ್ನೂ ಸಿಕ್ಕಿ ಅಸ್ವಾದಿಸಿ, ಏಕೆಂದರೆ ಕಳೆಯುತ್ತಿರುವ ಪ್ರತಿ ಕ್ಷಣಗಳೂ ನಿಮಗೆ ಅಮೂಲ್ಯವಾಗಿ ಕಡಿಮೆಯಾಗುತ್ತಲಿರುತ್ತದೆ.

13. ದಿನಾ ನೀವು ಅವಶ್ಯ ಮಾಡಲೇಬೇಕಾದ ಮುಖ್ಯ ಎರಡು ಕೆಲಸಗಳು ” ಹಸನ್ಮುಖಿಯಾಗಿ ಮತ್ತು ನಗುತ್ತಿರಿ

14. ಹರಿಯುತ್ತಿರುವ ನೀರು ಹಿಂದಕ್ಕೆ ತಿರುಗದು,ಅಂತೆಯೇ ನಮ್ಮ ಜೀವನ, ಅದಕ್ಕೇ ಸಂತಸವಾಗಿಸಿರಿ.

 

ದೇವರು ನಿಮ್ಮ ಚೆನ್ನಾಗಿ ಖುಷಿಯಲ್ಲಿಟ್ಟಿರಲಿ.

 

 

– ಬೆಳ್ಳಾಲ ಗೋಪಿನಾಥ ರಾವ್

1 Response

  1. savithri s bhat says:

    ಉತ್ತಮ ಸಲಹೆಗಳಿಗಾಗಿ ಧನ್ಯವಾದಗಳು

Leave a Reply to savithri s bhat Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: