ಕರಗದ ಬಾನು
ಕದಲದ ಕಡಲು
ಮೋಹದ ಛಾಯೆ
ಮನಸಿನ ಮಾಯೆ
ಎಲ್ಲವೂ ಪದದ
ಸುತ್ತ ಸುತ್ತಿ
ದೂರ ನಿಲ್ಲುತ್ತದೆ
ಗಾಳಿ ಚದುರಬೇಕು
ಗಂಧ ಹರಡಬೇಕು
ಗೂಡು ತೂಗಬೇಕು
ಗಿರಿ ಗಹ್ವರಗಳು
ನಿಶ್ಚಲವಾಗಬೇಕು
ಅಂತಃಕರಣ ಶಕ್ತಿ
ದೀಪದ ಸಾಲಿನ ನಡುವೆ
ನಿಂತು ಬೆಳಗಬೇಕು
ಸಂಜೆಗೆ ಒಂದು ಹಣತೆಯ
ಬೆಳಕು ಪುಟಿದೇಳಬೇಕು
ನೆಲದ ಕವಿತೆಯೊಳಗೆ
ತಾನೇ ತಾನಾಗಿ
ಝರಿಯೊಂದು ಹರಿಯಬೇಕು
ತಾಳ ಲಯ ಸಂಗೀತದಾಚೆ
ಪುಟ್ಟ ದೋಣಿಯ ಪಯಣ
ಸಾಗಬೇಕು ಅನುದಿನ
ಹಸಿವೆಯ ಹರಿವು
ಸುಳಿಯಾಗಬೇಕು
ಪಟಪಟನೆ ಉರಿವ
ಕೆಂಡದಂಗಳದಿ
ಕಂಗಳ ಸುಳಿಮಿಂಚು
ಸಂಚು ರೂಪಿಸಿ
ಒಳಿತಿನ ಒಳನೋಟವ
ನುಡಿಸಿ ಕೈ ಹಿಡಿದು
ಅನುಸರಿಸಬೇಕು……

-ನಾಗರಾಜ ಬಿ ನಾಯ್ಕ. ಹುಬ್ಬಣಗೇರಿ.


ಮುಂಗಾರು ಮಳೆ ಕೈ ಕೊಟ್ಟ ಈ ದಿನಮಾನದಲ್ಲಿ ಈ ಕವಿತೆಯು ಅತ್ಯಂತ ಸಮಯೋಚಿತ ಮತ್ತು ಸಮಕಾಲೀನ.
ಪುಟ್ಪುಟ್ಟ ಪದಗಳಲ್ಲೇ ವಾಕ್ಯವಾದ
ಇದು ಲಯಬದ್ಧ ಮತ್ತು ಅರ್ಥಪೂರ್ಣ.
ಭುವಿಯ ಬೇಗೆಯೇ ಹೀಗೆ ಅಭಿವ್ಯಕ್ತವಾಗುವಾಗ
ಅದರ ಒಂದಂಗವಾದ ನಮ್ಮ ಹತಾಶೆಯೂ ಅದರೊಳಡಗಿದೆ
ಎಂಬುದನು ಧ್ವನಿಪೂರ್ಣವಾಗಿ ಕಟ್ಟಿ ಕೊಟ್ಟಿದೆ.
ಧನ್ಯವಾದಗಳು ಸರ್…..
ಸರ್ ತಮ್ಮ ಅಭಿಮಾನದ ಓದಿಗೆ ತುಂಬಾ ತುಂಬಾ ಧನ್ಯವಾದಗಳು. ಅರ್ಥಪೂರ್ಣ ಗ್ರಹಿಕೆ ಜೊತೆಗೆ ಓದಿನ ವಿಸ್ತಾರ ನೋಟ ತಮ್ಮ ಸಂದೇಶದಲ್ಲಿದೆ ಸರ್……….
ಚಂದದ ಕವನ ಸಾರ್… ವಂದನೆಗಳು
Nice poem
ಚೆನ್ನಾಗಿದೆ ಕವಿತೆ
ಚಂದದ ಕವನ
ಮಳೆರಾಯನ ಅನುಪಸ್ಥಿತಿಯ ಇಂದಿನ ನಿರಾಶಾದಾಯಕ ಸನ್ನಿವೇಶದಲ್ಲಿ, ಆಶಾಭಾವವನ್ನು ಹೊತ್ತ ಸುಂದರ ಕವನ.
ಸದಾಶಯದ ಸುಂದರ ಕವಿತೆ.