ಬೆಳಕು-ಬಳ್ಳಿ

ಒಳಗೋ ಹೊರಗೋ…

Share Button

1
ಹೃದಯವನ್ನು
ಸ್ವಲ್ಪ ಈಚೆ ಆಚೆ
ಸರಿಸು-
ಸಮುದ್ರವೇ
ಒಳಬಂದು ಕುಳಿತುಕೊಳ್ಳುತ್ತದೆ.

2
ಕಣ್ರೆಪ್ಪೆಗಳನ್ನು
ಎಷ್ಟೇ ಮುಚ್ಚಿದರೂ, ತೆರೆದರೂ
ಆ ತೇವ
ಎಷ್ಟಕ್ಕೂ ಆರದು.

3
ದುಃಖದ ಮೋಡ
ಕವಿದಾಗಲೆಲ್ಲಾ
ಸುರಿಯುವುದು
ಕಣ್ಣೀರಿನ ಧಾರೆಗಳೇ ತಾನೇ?

4
ಬಳ್ಳಿಯಂತೆ ಅರಳಿಕೊಂಡ ದೇಹ
ಆಲೋಚನೆಗಳೆಂಬ ಕಿಟಕಿಗಳಿಲ್ಲದ ಕಬ್ಬಿಣದ ಪಂಜರ
ಮುಚ್ಚಲು ಅಥವಾ ತೆರೆಯಲು ದಾರಿಯೇ ಇಲ್ಲ
ಪ್ರಾಣವು ದೇಹದ ಅಂಚುಗಳಿಗೆ ಅಂಟಿಕೊಂಡಿರುತ್ತದೆ.

5
ನಿಲುಗಡೆಯೇ ಇಲ್ಲದ ಪಯಣ
ಅಂಗೈಯಿಂದ ಜಾರಿಬೀಳುವ ನೆನಪುಗಳು
ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲಿ
ಮರುಕ್ಷಣವೇ ವಿರೂಪಗೊಂಡ ಚಿತ್ರದಂತೆ
ಬದಲಾಗುವ ಕಾಲ.

6
ಬೀಗದ ಕೈ ಎಲ್ಲೋ ಬಿದ್ದುಹೋಗಿದೆ
ಎಷ್ಟೇ ಹುಡುಕಿದರೂ ಸಿಗುತ್ತಿಲ್ಲ.

ತೆಲುಗು ಮೂಲ: ಶಿಲಾ ಲೋಲಿತ
ಕನ್ನಡ ಅನುವಾದ: ಕೋಡೀಹಳ್ಳಿ ಮುರಳೀ ಮೋಹನ್

6 Comments on “ಒಳಗೋ ಹೊರಗೋ…

  1. ಡಿಫರೆಂಟಾಗಿದೆ ಕವಿಗಳೇ,

    ನಾನೂ ಹುಡುಕುತ್ತಿದ್ದೇನೆ, ಕೀಲಿಕೈ ಸಿಕ್ಕರೆ ತಿಳಿಸಿ………

  2. ನಿರಾಶೆಯ ಭಾವವನ್ನು ಮೈದುಂಬಿಕೊಂಡ ಅನುವಾದಿತ ಕವನ ಬಹಳ ಚೆನ್ನಾಗಿದೆ.

  3. ವಿಶೇಷ ಎನ್ನುವಂತಹ ಅನುವಾದಿತ ಕವನ..ಚೆನ್ನಾಗಿ ದೆ ಸಾರ್

  4. ತೆಲುಗು ಮೂಲ ವನ್ನ ಕನ್ನಡಕ್ಕೆ ಸೊಗಸಾಗಿ ಅನುವಾದ ಮಾಡಿದ್ದೀರಿ. ಇಲ್ಲಿ ಬರುವ ಉಪಮಾನ ಉಪಮೇಯಗಳು ಹೃದಯಸ್ಪರ್ಶಿಯಾಗಿವೆ…… ಅರ್ಥಪೂರ್ಣವಾಗಿವೆ ……ಮೌಲಿಕವಾಗಿವೆ…,.. ಧನ್ಯವಾದಗಳು ನಿಮಗೆ.

  5. ಇಂದಿನ ಜಗತ್ತಿನ ವಾಸ್ತವ ಸಂಗತಿ ಯನ್ನು ಬಿಂಬಿಸುವ ಕವನ

    ಇಂತಹ ಕವಿತೆಗಳ ಅನುವಾದ ತುಸು ಕಷ್ಟ

    ವಂದನೆಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *