ಅಂಡಮಾನ್ ನ ಸೆಲ್ಯೂಲರ್ ಜೈಲ್

Share Button

ನಾವಿಂದು ಎಪ್ಪತ್ತೆರಡನೆಯ ಸ್ವಾತಂತ್ರ್ಯೋತ್ಸವದ  ಸಂಭ್ರಮದಲ್ಲಿದ್ದೇವೆ. ಈ ಸಂದರ್ಭದಲ್ಲಿ  ನನ್ನ ಮನಸ್ಸು ಅಂಡಮಾನ್ ನ ಸೆಲ್ಯೂಲರ್ ಜೈಲ್ ನಲ್ಲಿ  ಬಲು ನೋವಿನಿಂದ ಸುತ್ತಾಡುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ  ‘ಕಾಲಾಪಾನಿ’ ಶಿಕ್ಷೆಗೆ ಗುರಿಯಾದವರನ್ನು ಅತ್ಯಂತ ಅಮಾನುಷವಾಗಿ ದಂಡಿಸಲೆಂದೇ ಕಟ್ಟಲಾದ ಈ ಜೈಲ್,  ಬ್ರಿಟಿಷ್ ಸರಕಾರದ ದಬ್ಬಾಳಿಕೆ  ಹಾಗು ನಮ್ಮ  ಸ್ವಾತಂತ್ರ್ಯ  ಹೋರಾಟಗಾರರು ಅನುಭವಿಸಿದ ಕಷ್ಟ ಕೋಟಲೆಗಳಿಗೆ  ಸಾಕ್ಷಿಯಾಗಿ ನಿಂತಿದೆ.

ಜೈಲ್ ನ ಮಧ್ಯದಲ್ಲಿ ಒಂದು ಗೋಪುರವಿದ್ದು, ಚಕ್ರದ ಕಡ್ಡಿಗಳಂತೆ  ನಿರ್ಮಿಸಲಾದ ಜೈಲ್ ನಲ್ಲಿ ಏಳು ‘ವಿಂಗ್’ಗಳು ಇದ್ದವಂತೆ. ಪ್ರತಿ ವಿಂಗ್ ನಲ್ಲಿ 3 ಅಂತಸ್ತುಗಳಿವೆ.  ಒಂದು ವಿಂಗ್ ನ ಮುಂಭಾಗಕ್ಕೆ  ಮತ್ತೊಂದು ವಿಂಗ್ ನ ಹಿಂಭಾಗದ ಗೋಡೆ ಕಾಣಿಸುವಂತೆ ಕಟ್ಟಿದ್ದಾರೆ. ಪ್ರತಿ ಸೆಲ್ ನಲ್ಲೂ, ಸುಮಾರು 10 ಅಡಿ ಎತ್ತರದಲ್ಲಿ ಗವಾಕ್ಷಿ ಇದೆ. ಹಾಗಾಗಿ, ಸೆಲ್ ನ ಒಳಗಿರುವ ವ್ಯಕ್ತಿ ಇತರರೊಡನೆ ಸಂಪರ್ಕ ಸಾಧಿಸಲು ಸಾಧ್ಯವೇ ಇಲ್ಲ.  ಈಗ ಕೇವಲ ಎರಡು ವಿಂಗ್ ಗಳನ್ನು ಸ್ಮಾರಕವಾಗಿ ಉಳಿಸಿದ್ದಾರೆ. ಇತರ ವಿಂಗ್ ಗಳನ್ನು  ಕೆಡವಿ  ಬೇರೆ  ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಒಬ್ಬರ ಮುಖ ಇನ್ನೊಬ್ಬರಿಗೆ ಕಾಣಿಸದಂತೆ ಕಟ್ಟಲಾದ ‘ಸೆಲ್’ಗಳು, ಬಲವಾದ ಬೀಗಗಳು, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಂತಹ ಪಹರೆ, ಅತಿ ಪರಿಶ್ರಮ ಬೇಡುವ ಗಾಣದ ಯಂತ್ರಕ್ಕೆ ಕತ್ತು ಒಡ್ಡುವ ಕೆಲಸ, ತೀರ ಕಳಪೆಯಾದ  ಕಡಿಮೆ ಆಹಾರ, ಕೆಲಸ ಮಾಡಲು ಅಸಾಧ್ಯವಾದಲ್ಲಿ  ಹೊಡೆತ, ಹೆಜ್ಜೆ ಹೆಜ್ಜೆಗೂ  ಅವಮಾನಕಾರಿಯಾದ  ಸನ್ನಿವೇಶ. ಒಂದು ವೇಳೆ ತಪ್ಪಿಸಿಕೊಂಡರೂ, ನಾಲ್ಕು ಕಡೆಯಲ್ಲೂ ಸಮುದ್ರ , ಹೋಗುವುದಾದರೂ ಹೇಗೆ?   ಹಾಗಿದ್ದೂ ಪಾರಾಗಲೆತ್ನಿಸಿದ ಕೆಲವರನ್ನು  ಅಂಡಮಾನಿನ ಕಾಡುಗಳಲ್ಲಿದ್ದ ನರಭಕ್ಷಕ  ಆದಿವಾಸಿಗಳು ಕೊಂದರು. ಸಿಕ್ಕಿಬಿದ್ದ  ಕೆಲವರನ್ನು ಬ್ರಿಟಿಷರು ಗಲ್ಲಿಗೇರಿಸಿದರು.

 

ಅಂಡಮಾನ್ ನ ಸೆಲ್ಯೂಲರ್ ಜೈಲ್

 

 

ಗಲ್ಲಿಗೆ ಕೊರಳೊಡ್ಡುವ ಮುನ್ನ ಸ್ವಯಂ ಅಂತಿಮ ಸಂಸ್ಕಾರ ಮಾಡುವ ಜಾಗ

ಗಲ್ಲುಶಿಕ್ಷೆ ನಿಗದಿಯಾದವರು, ತಮ್ಮ ಅಂತಿಮ  ಸಂಸ್ಕಾರಗಳನ್ನು ತಾವೇ ಮುಂಚಿತವಾಗಿ ಮಾಡಿ ನೇಣಿಗೆ ಸಿದ್ಧರಾಗುತಿದ್ದರಂತೆ.
ಇದಕ್ಕಾಗಿ ಜೈಲ್ ನ ಆವರಣದಲ್ಲಿ, ‘ಫಾಸಿ ರೂಂ’ ಪಕ್ಕದಲ್ಲಿ  ಒಂದು ಜಾಗವನ್ನು ನಿಗದಿಪಡಿಸಿದ್ದಾರೆ.

ಸೆಪ್ಟೆಂಬರ್ 17,2010 ರಂದು, ಅಂಡಮಾನ್ ನ ಸೆಲ್ಯೂಲರ್ ಜೈಲ್ ನ ಅಂಗಳದಲ್ಲಿ ಓಡಾಡಿದ್ದೆ. ಈಗ ಸೆಲ್ಯೂಲರ್ ಜೈಲ್ ಒಂದು ರಾಷ್ಟ್ರೀಯ ಸ್ಮಾರಕ . ಜೈಲಿನ ಆವರಣದಲ್ಲಿ , ಪ್ರತಿದಿನ ಸಂಜೆಯ ಸಮಯ ‘ಧ್ವನಿ -ಬೆಳಕು’ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಾರೆ. ತೀರಾ ಹೃದಯಸ್ಪರ್ಶಿಯಾದ ಈ ಕಾರ್ಯಕ್ರಮವನ್ನು ಆಲಿಸಿ-ವೀಕ್ಷಿಸಿ ಹೊರ ಬರುವಾಗ, ನಮ್ಮ ಸ್ವಾತಂತ್ಯ್ರ ಹೋರಾಟಗಾರರು  ಮಾಡಿದ ತ್ಯಾಗ, ಅನುಭವಿಸಿದ ಹಿಂಸೆ, ಕೆಲವರಿಗೆ ಗಲ್ಲುಶಿಕ್ಷೆ-ಅವರಿಗೆ ಆದ ಹಸಿವು, ನಿರಾಶೆ, ನೋವು, ಅಸೌಖ್ಯತೆ,  ಏಕಾಂಗಿತನ- ಇವಕ್ಕೆಲ್ಲ ಕಾರಣವಾದ ಬ್ರಿಟಿಷ್ ಸರಕಾರ, ಜೈಲರ್ ‘ಡೇವಿಡ್ ಬಾರಿ’ಯ  ಅಟ್ಟಹಾಸದ ನುಡಿಗಳು . .ಇವೆಲ್ಲ ಮನಸ್ಸಿಗೆ ತುಂಬಾ  ವೇದನೆಯನ್ನು  ಉಂಟುಮಾಡುತ್ತವೆ.  ಈತನ ಹಿಂಸೆ ತಡೆಯಲಾರದೆ  ಕೆಲವರು ಮಾನಸಿಕವಾಗಿ  ಅಸ್ವಸ್ಥರಾದರಂತೆ, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡರಂತೆ.

ಇಂತಹ ಕಂಗೆಡಿಸುವ ವಾತಾವರಣದಲ್ಲೂ ಸ್ವಾತಂತ್ಯ್ರ ಯೋಧರ ವಂದೇ ಮಾತರಂ ಎಂಬ ಕೆಚ್ಚಿನ ನುಡಿಗಳು ಕಳೆಗುಂದಲಿಲ್ಲ

ಇಂತಹ ಯೋಧರ ಪರಿಶ್ರಮ, ತ್ಯಾಗ, ಬಲಿದಾನಗಳಿಂದಾಗಿ ಸಿಕ್ಕಿದ ಸ್ವಾತಂತ್ರ್ಯವನ್ನು ಆರಾಮವಾಗಿ ಅನುಭವಿಸುತ್ತಿರುವ ನಾವು, ಅವರ ಋಣವನ್ನು ಕಿಂಚಿತ್ತಾದರೂ ತೀರಿಸಲು ಅರ್ಹರೆ? ಈ ಗುಂಗಿನಲ್ಲೇ  ಸೆಲ್ಯೂಲರ್ ಜೈಲ್ ನ ಆವರಣದಿಂದ  ಹೊರಬಂದಾಗ ನನಗೆ ಅನಿಸಿದ್ದು ಇಷ್ಟು : ಇನ್ನು  ಕಾಶಿ, ಪ್ರಯಾಗ  ಇತ್ಯಾದಿ ಕ್ಷೇತ್ರಗಳಿಗೆ ಗದಿದ್ದರೂ ಅಡ್ಡಿಯಿಲ್ಲ, ಯಾಕೆಂದರೆ, ಅವಕ್ಕಿಂತಲೂ  ಶ್ರೇಷ್ಠವಾದ, ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಕ್ಷೇತ್ರವನ್ನು ಸಂದರ್ಶಿಸಿದೆನೆಂಬ ಧನ್ಯತಾ ಭಾವ ಸಿದ್ದಿಸಿತು.

ತಮ್ಮ ಕಠಿಣ  ಪರಿಶ್ರಮ, ತ್ಯಾಗ ಹಾಗೂ  ಬಲಿದಾನಗಳಿಂದ ಭಾರತಕ್ಕೆ ಸ್ವಾತಂತ್ಯವನ್ನು ದೊರಕಿಸಿ ಕೊಟ್ಟ ಎಲ್ಲಾ  ಸ್ವಾತಂತ್ಯ ಹೋರಾಟಗಾರರಿಗೆ ಅನಂತ ನಮನಗಳು.

Vande mataram
– ಹೇಮಮಾಲಾ. ಬಿ
.

17 Responses

  1. ತುಂಬಾ ಮಾಹಿತಿಪೂರ್ಣ ಲೇಖನ! ನೆನೆಸಿಕೊಂಡರೆ ಬೇಜಾರಾಗುತ್ತದೆ 🙁

  2. Hema says:

    ಧನ್ಯವಾದಗಳು.

  3. Niharka says:

    Hrudayasparshi lekana.

  4. Santhosh Uppin says:

    Great memory.

  5. k.k .kasaragod. says:

    ಅಂಡಮಾನ್ ನೋಡುವಾಗ ಕಾಡುವುದು ಅಗಾಧ ನೋವಿನ ಅನುಭೂತಿ .ಧ್ವನಿ ಮತ್ತು ಬೆಳಕು ಕೇಳಿ ನೋಡಿ ಮುಗಿದು ಅಲ್ಲಿಂದ ಎದ್ದಾಗ ಅನುಭವಕ್ಕೆ ಬರುವ ವಿಚಿತ್ರ ಸಂಕಟ ಬದುಕಿಡಿ ಕಾಡುತ್ತದೆ .ಮಾತು ಮೂಕವಾಗಿ ನೋವು ಹೆಪ್ಪುಗಟ್ಟುತ್ತದೆ ..ನಿಜ ತಮ್ಮ ಬದುಕನ್ನು ಇಲ್ಲಿ ಹಿಂಸೆ ,ಯಾತನೆ ಅನುಭವಿಸಿ ಮುಗಿಸಿದ ಈ ಅಮೂಲ್ಯ ಜೀವಗಳು ನಡೆದ ಈ ನೆಲ ವಾರಣಾಸಿ, ಪ್ರಯಾಗಕ್ಕಿಂತ ಶ್ರೇಷ್ಠ ಜಾಗ.

  6. madhusudana maddur says:

    ನೋವಿನಲ್ಲಿ ಅದ್ದಿದ ಕುಂಚ
    ಬರೆದ ಚಿತ್ರವಿದು
    ಸರಳುಗಳ ಮರೆಯಲಿ ನೊಂದ ಜೀವಿಗಳ
    ಆರ್ತನಾಾದ ನಿಟ್ಟುಸಿರಿಗೆ ಸಾಕ್ಷಿಯಿದು

  7. ಮಾನ್ಯರೇ, ನಿಜ ಅವರು ನಮಗಾಗಿ ಐಹಿಕ ಸುಖಗಳನ್ನೆಲ್ಲ ಮರೆತು ನಮಗಾಗಿ ಚಿತ್ರ ಹಿಂಸೆ ಅನುಭವಿಸಿ ಜೀವ ತೆತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಪುಣ್ಯಕ್ಷೇತ್ರಗಳನ್ನು ಹುಡುಕುತ್ತ ಹೋಗುವ ಬದಲು ಇದೆ ಅಲ್ಲವೇ ನಮ್ಮೆಲ್ಲರ ಪುಣ್ಯ ಭೂಮಿ. ನೋಡಿ ಕ್ರುತಾರ್ತರಾಗೋಣ.

  8. Ranganna Nadgir says:

    ಮನಸ್ಸಿಗೆ ತಾಗುವಂತಹ ಲೇಖನ. ಧನ್ಯವಾದ ಶ್ರೀಮತಿ ಹೇಮಾ. .

  9. Kadwadi Printers says:

    ತಮ್ಮ ಮನಸುಗಳು ಅತ್ಯಂತ ಸೂಕ್ಷ್ಮಮತಿ…..
    ತಮ್ಮಷ್ಟು ಯೋಚಿಸಲಾಗದು…ಇಗೊ ನದೊಂದು ನಮನ….

  10. K N Satish says:

    Been there. Really dreadful.

  11. ಸ್ವಾತಂತ್ರ್ಯ ಹೋರಾಟಗಾರರೆಂದರೆ ಒಂದಷ್ಟು ನೇತಾರರ ಹೆಸರುಗಳನ್ನು ಮಾತ್ರ ನೆನೆದು ಸ್ವಾತಂತ್ರ ದಿವಸದ ಆಚರಣೆಯ ಶಾಸ್ತ್ರವನ್ನು ಮುಗಿಸುವ ಈ ಜಮಾನದಲ್ಲಿ, ದೇಶಕ್ಕಾಗಿ ತಮ್ಮನ್ನೇ ತಾವು ತರ್ಪಣ ಕೊಟ್ಟ ಮಾದರಿ ಜೀವಗಳು ಎಲ್ಲೋ ಒಂದು ಕಡೆ ಅವಗಣಿಸಲ್ಪಡುತ್ತಿವೆಯೋ ಎಂದು ಸಂಶಯವಾಗುತ್ತದೆ.

    ತಮ್ಮ ಈ ಸಾಂದರ್ಭಿಕ ಬರಹ ಅರ್ಥಪೂರ್ಣ. ಮನಸ್ಸು ಮಿಡಿಯಿತು. ದೇಶಕ್ಕಾಗಿ ತಮ್ಮನ್ನೇ ಬಲಿದಾನ ಕೊಟ್ಟ ವ್ಯಕ್ತಿಗಳಿಗೆಲ್ಲಾ ಸಲಾಂ!

  12. savithri s bhat says:

    ದೇಶ ಕ್ಕಾಗಿ ವೀರಸ್ವರ್ಗ ವೇರಿದ ಭಾರತ ಮಾತೆಯ ಪುತ್ರರ ಆತ್ಮಕ್ಕೆ ಶಾಂತಿ ಸಿಗಲಿ .ಧನ್ಯ ವಾದಗಳು.

  13. h.s.vathsala says:

    ಆರು ವರ್ಷ ಆಗಿಯೇ ಹೋಯಿತಲ್ಲ ಹೇಮಾ, ಆದರೆ ನೆನಪುಗಳು ಮಾತ್ರ ಇನ್ನು ಹಸಿರಾಗಿಯೇ ಇದೆ. ಅಭೂತಪೂರ್ವ ಅನುಭವದ ನೆನಪು ಮಾಡಿದ್ದಕ್ಕೆ ವಂದನೆಗಳು.

  14. ಉತ್ತಮ ಮಾಹಿತಿ..

  15. Shamala Ganesh says:

    Howdu maala nijawagaloo hrudaya sparshi anubhava Andaman jailinalli nodida light n sound show. Naavellaroo nijakku runigalu. Ella swatantrya horatagararigoo nanna bhakti poorvaka namanagalu.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: