Author: Vidyashree Adoor
ಕ್ವಾರಂಟೈನ್ ರಜೆಯ ನೀತಿ ಪಾಠ
ಹಿಂದೆಂದೂ ಕಂಡು, ಕೇಳಿ ಅರಿಯದ , ಮುಂದೆಂದೂ ಈ ರೀತಿಯೂ ಆಗಬಹುದೇ ಎಂದು ಖಾತ್ರಿಯೇ ಇಲ್ಲದಂತಹ ವಿದ್ಯಮಾನವೊಂದು ಜಗತ್ತಿನಾದ್ಯಂತ ತಾಂಡವವಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೌದು…ನಾನು ಕೊರೊನ ಬಗೆಗೆಯೇ ಹೇಳುತ್ತಿರುವುದು. ಯಾರಿಗೆ ಪಥ್ಯವಾದರೂ…ಆಗದಿದ್ದರೂ…ಪ್ರಕೃತಿಯ ಮುಂದೆ ಹುಲುಮಾನವ ತೃಣಕ್ಕೆ ಸಮಾನವಾಗಿದ್ದಾನೆ. ಜಗತ್ತಿನ ದೊಡ್ಡಣ್ಣ ಎನ್ನಲಾಗುವ ಅಮೇರಿಕಾದಂತಹ ದೇಶವೇ ಸೋತು...
ನಿನ್ನೆ….ನಿನ್ನೆಗೆ…
ಬಾಳಮುಸ್ಸಂಜೆಯಲಿ ನಿಲ್ದಾಣದೆಡೆಗೆ ಸಾಗುತ್ತಿದ್ದಾತನಿಗೆ ಹಿಂದಿರುಗಿದಾಗ ಕಂಡದ್ದು ಬರೀ ಮಬ್ಬು ಛಾಯೆ… ಅಲ್ಲಲ್ಲಿ ಸಣ್ಣದಾಗಿ ಮಿಣುಕುವ ದೀಪಗಳಿಂದಾಗಿ ಅಸ್ಪಷ್ಟವಾಗಿ ಗೋಚರಿಸಿತ್ತು ನಡೆದು ಬಂದ ದಾರಿ ಅದಕ್ಕಿರಲಿಲ್ಲ ಇವನ ಪರಿವೇ….. ಕಾಯುತ್ತಿತ್ತು ಆ ದಾರಿ ಇನ್ನಾರದೋ ಬರುವಿಕೆಗಾಗಿ ತುಂಬು ಉತ್ಸಾಹದಿಂದ ನಿಂತಿತ್ತು ಇವನಿಗೆ ಬೆನ್ನು ಮಾಡಿ…. ಮಿಣುಕುತ್ತಿದ್ದ ದೀಪಗಳೂ ಕಾಯುತ್ತಿದ್ದವು...
ಪಾರಿಜಾತದ ಘಮ ಆವರಿಸಿದ ಪರಿ
ಪಾರಿಜಾತ ಹೂವಿನ ಮರ ಎಂದರೆ ಚಿಕ್ಕಂದಿನಿಂದಲೂ ನನಗೆ ಅದೆಂತದೋ ಒಂದು ರೀತಿಯ ಪ್ರೀತಿ. ಅದೊಂದು ದೇವಲೋಕದ ಸುವಸ್ತು, ಕೃಷ್ಣ ತನ್ನ ಮಡದಿ ಸತ್ಯಭಾಮೆಗಾಗಿ ತಂದ ಹೂವು ಎಂದೆಲ್ಲ ಅರ್ಧಂಬರ್ಧ ಕಥೆಗಳು ಕಲಸುಮೇಲೋಗರವಾಗಿ ಒಂದು ಅಲೌಕಿಕ ಆಕರ್ಷಣೆಯಾಗಿ ಬೆಳೆದಿದೆ. ಕೆಲವು ವರ್ಷಗಳ ಹಿಂದೆ ಎಲ್ಲೋ ನೆಂಟರ ಮನೆಗೆ ಹೋಗಿದ್ದಾಗ...
ನಿಮ್ಮ ಅನಿಸಿಕೆಗಳು…