Author: K N Mahabala
ಆತಂಕ
ಬೀದಿಯಲಿ ವಾಹನದ ಸದ್ದಾಗಲೆಲ್ಲ ಬಿಂದೂರಾಯರಿಗೆ ಅತ್ತಲೇ ಗಮನ “ರಾತ್ರಿ ಎಷ್ಟು ಹೊತ್ತಾದ್ರೂ ಸರಿ ವಾಪಸ್ ತಂದುಕೊಡ್ತೀನಿ ಭಾವಾ “ಎಂದಿದ್ದ ಭಾವಮೈದುನ ವರಾಹಮೂರ್ತಿ..ಹತ್ತಾಯ್ತು…. , ಹನ್ನೊಂದಾಯ್ತು…. ಹನ್ನೆರಡೂ ಹೊಡೆದೇಬಿಟ್ಟಿತ್ತಲ್ಲ.! “ಎಷ್ತೊತ್ತು ಎಚ್ಚರಾಗಿರ್ತೀರಿ?ಊಟಮಾಡಿ ಮಲಗಿ ಅವನು ಬಂದಾಗ ನಾನು ಎಚ್ಚರಿಸ್ತೀನಿ.”ಮಡದಿ ಮಹಾಲಕ್ಷಮ್ಮನವರ ಆಗ್ರಹದಲ್ಲಿ ಕಳಕಳಿಯೇ ಹೆಚ್ಚು ಇದ್ದದ್ದು. “ಹನ್ನೆರಡಾಯ್ತೆ ಟೈಮು . ಈಗ ಅದು...
ಏಕಾಂಗಿಯ ನಿವೃತ್ತಿ
“ನಿರಂಜನರವರು ನಮ್ಮ ಸಂಸ್ಥೆಯ ನಿಷ್ಠಾವಂತ ಕೆಲಸಗಾರರಾಗಿದ್ದರು.ನಾಳೆಯಿಂದ ಅವರು ನಮ್ಮೊಂದಿಗೆ ಕಚೇರಿಯಲ್ಲಿ ಇರುವುದಿಲ್ಲ ಎಂಬುದು ಬಹಳ ಖೇದಕರ ಸಂಗತಿಯಾಗಿದೆ “ಎಂದು ಸಹೋದ್ಯೋಗಿ ರಮಾನಂದ ನಿರಂಜನನ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಿದ್ದ. . ನಿರಂಜನ ನಿರ್ಲಿಪ್ತ ಭಾವದಿಂದಲೇ ಕೇಳಿಸಿಕೊಳ್ಳುತ್ತಿದ್ದ.”ಜಾತಸ್ಯ ಮರಣಂ ಧೃವಂ” ಎಂಬುದು ಜೀವನಕ್ಕೆ ಅನ್ವಯವಾಗುವಂತೆ,ವೃತ್ತಿಬದುಕಿಗೂ ನಿವೃತ್ತಿಯ ದಿನ ಇದ್ದೇ...
ಮುಂಚೆ ಹೋದ ಅತಿಥಿಯ ಪಾಡು
ನಮ್ಮ ತಂದೆ ಕೆ.ಎಸ್.ನ ಅವರನ್ನು ಕುರಿತು ಮಾತನಾಡಲು ಆ ಸಂಘಟಣೆಯ ಕಾರ್ಯದರ್ಶಿಯವರು ಆಹ್ವಾನಿಸುವಾಗ “ಅರ್ಧ ಗಂಟೆ ಮುಂಚಿತವಾಗಿ ಬನ್ನಿ .ನಮ್ಮ ಕಾರ್ಯಕಾರಿ ಸಮಿತಿಯವರನ್ನು ಪರಿಚಯ ಮಾಡಿಕೊಳ್ಳಬಹುದು” ಎಂದಿದ್ದರು. ಅದರಂತೆ ಆ ದಿನ ವಿಧೇಯವಾಗಿ ಹತ್ತೂವರೆಗೆ ಆರಂಭವಾಗಬೇಕಿದ್ದ ಸಮಾರಂಭಕ್ಕೆ ಸರಿಯಾಗಿ ಹತ್ತು ಗಂಟೆಗೆ ಹೋದೆ. ನನ್ನೆದುರೇ ಒಬ್ಬಾತ ಬಂದು...
ಚೀಲವಿಲ್ಲದೆ ಖರೀದಿ
ಮಾರುಕಟ್ಟೆಯಲ್ಲಿ ಎರಡೂ ಕೈಯಲ್ಲಿ ಟೋಮೇಟೊ ತುಂಬಿದ ಪ್ಲಾಸ್ಟಿಕ್ ಚೀಲಗಳನ್ನು ಹಿಡಿದುಕೊಂಡು ಒಬ್ಬ ಆಸಾಮಿ, ಬಸ್ ಬಂದಾಗ ಹತ್ತಲು ಯತ್ನಿಸಿ ಸೋತ.ಅವನ ಸ್ಥಿತಿ ಪಾಪ ಸಂಪುಟ ಸೇರಲು ಯತ್ನಿಸಿ ವಿಫಲನಾಗುತ್ತಿರುವ ಅರ್ಹ ಅಥವಾ ಅನರ್ಹ ಶಾಸಕನಂತೆ ಇತ್ತು.ಯಾರೋ ಕನಿಕರದಿಂದ ಬಲವಂತವಾಗಿ ಅವನನ್ನು ಬಸ್ಸಿನೊಳಗೆ ದಬ್ಬಿದರು. “ನೂಕಬೇಡಿ ಕೈಯಲ್ಲಿ ಟೊಮೇಟೋ...
ಕಾಫಿಯೊಡನೆ
ಕಾಫಿಯೊಡನೆ ಬಹಳಷ್ಟು ಸಂಭವಿಸಬಹುದಂತೆ ಕುಳಿತಿದ್ದಾರೆ ಕಾಫಿತಾಣದಲಿ ಜನ ದ್ವೀಪದಂತೆ ನಲ್ಲನಲ್ಲೆಯರ ಪಿಸುದನಿಯ ಸವಿಮಾತು ಕನಸುಗಳನೂ ಹೆಣೆಯುತಿಹರು ಅಲ್ಲಿ ಕುಳಿತು ಮದುವೆಯಾದ ಜೋಡಿಗಳಿಗೂ ಇಲ್ಲುಂಟು ಸ್ಥಳ ತರಬಹುದು ತಮ್ಮೊಡನೆ ಜಂಜಡ,ಮನಸ್ತಾಪ ಜಗಳ ಅಲ್ಲೊಂದು ಜೋಡಿ ನಡುವೆ ಇದೆ ಕಾಫಿ ಬಟ್ಟಲು ಉಳಿದಂತೆ ಆ ಟೇಬಲಿನಲ್ಲಿ ಮೌನದ್ದೇ ದರ್ಬಾರು ಮನದಾಳದ ಮಾತುಗಳಿಗೆ ಏನೋ...
ನಿಮ್ಮ ಅನಿಸಿಕೆಗಳು…