ವಿದ್ಯಾರ್ಥಿ ವೇತನ… ಭ್ರಷ್ಟಾಚಾರ.. ಕಡಿವಾಣ

Share Button

 

       Nagaraj Bhadra

ಹಳ್ಳಿಗಳಿಂದ  ಹೆಚ್ಚಿನ ವಿದ್ಯಾಭ್ಯಾಸೋಸ್ಕರ ತಾಲ್ಲೂಕು ಕೇಂದ್ರಗಳಿಗೆ ಹಾಗೂ ನಗರಗಳಿಗೆ ಬರುವ ಹಿಂದುಳಿದ ವಗ೯ದ ಜಾತಿಗಳ ಬಡ ವಿದ್ಯಾರ್ಥಿಗಳು ವಾಸಿಸಲು ಸರಕಾರಿ ವಸತಿ ನಿಲಯಗಳ ಕೊರತೆಯು ಸುಮಾರು ವರ್ಷಗಳಿಂದಲೂ ಕಾಡುತ್ತಿದೆ. ಯಾಕೆಂದರೆ ಹಿಂದುಳಿದ ವಗ೯ದ ಜಾತಿಗಳ ಸರಕಾರಿ ವಸತಿ ನಿಲಯಗಳು  ಪ್ರತಿ ತಾಲ್ಲೂಕು  ಕೇಂದ್ರಗಳಲ್ಲಿ ಹಾಗೂ ನಗರಗಳಲ್ಲಿ ಒಂದು ಅಥವಾ ಎರಡೂ ಮಾತ್ರ ಇರುತ್ತವೆ.

ಪ್ರತಿಯೊಂದು ತಾಲ್ಲೂಕಿನಲ್ಲಿ ಸುಮಾರು 100 ಕ್ಕಿಂತ ಹೆಚ್ಚು ಹಳ್ಳಿಗಳು ಬರುತ್ತವೆ.  ಒಂದು ಹಳ್ಳಿಯಿಂದ ಕನಿಷ್ಠ 10 ವಿದ್ಯಾರ್ಥಿಗಳಾದರು ಹೆಚ್ಚಿನ ವಿದ್ಯಾಭ್ಯಾಸೋಸ್ಕರ ತಾಲ್ಲೂಕು ಕೇಂದ್ರಗಳು ಹಾಗೂ ನಗರಗಳಿಗೆ ಬರುತ್ತಾರೆಂದು ಅಂದಾಜಿಸಿದ್ದರು,ಒಂದು ಅಥವಾ ಎರಡೂ ಹಿಂದುಳಿದ ವಗ೯ದ ಜಾತಿಗಳ  ಸರಕಾರೀ    ವಿದ್ಯಾರ್ಥಿ ವಸತಿ ನಿಲಯಗಳಲ್ಲಿ  ಎಷ್ಟು ಬಡ ವಿದ್ಯಾರ್ಥಿಗಳು ವಾಸಿಸಬಹುವುದು ನೀವೆ ಯೋಚಿಸಿ . ಹಲವಾರು ಕಡೆ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಬಾಲಕಿಯರ ವಸತಿ ನಿಲಯಗಳಿಲ್ಲ.

ಇರುವ ಹಿಂದುಳಿದ ವಗ೯ದ ಜಾತಿಗಳ ಸರಕಾರೀ  ವಸತಿ ನಿಲಯಗಳಲ್ಲಿ   ಮೆರಿಟ್ ಆಧಾರದ ಹಾಗೂ  ಈ ವಗ೯ದಲ್ಲಿ ಬರುವ ಜಾತಿಗಳ ಆಧಾರದ ಮೇಲೆ ಪ್ರವೇಶ ಮಾಡಿಕೊಳ್ಳಲಾಗುತ್ತದೆ. ಕೇವಲ ಕೆಲವು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಸಿಗುತ್ತಾಯಿತ್ತು.ಮೆರಿಟ್‌ನಲ್ಲಿ ಬಾರದ ವಿದ್ಯಾರ್ಥಿಗಳ ಪರಿಸ್ಥಿತಿ, ಗೋಳು ,ಕಷ್ಟ ಕೇಳುವರಿರಲಿಲ್ಲ.

  1. ಕೆಲವರು ತಮ್ಮ ಬಂಧುಗಳ  ಮನೆಯಲ್ಲಿ ವಾಸಿಸುತ್ತಿದ್ದರು.
  2. ಕೆಲವು ವಿದ್ಯಾರ್ಥಿಗಳು ಸೇರಿ ಒಂದು ಕೋಣೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು.ಆ ಕೋಣೆಯ ಬಾಡಿಗೆ ನೀಡಲು ಹಾಗೂ ಊಟಕ್ಕೆ ಹಣವನ್ನು ಹೊಂದಿಸಲಾಗದೆ ಪರದಾಡುತ್ತಿದ್ದರು. ಆದ್ದರಿಂದ ಕಾಲೇಜು ಮುಗಿದ ಮೇಲೆ ಸಂಜೆಯ ಸಮಯದಲ್ಲಿ ಕಿರಾಣಿ ಅಂಗಡಿಗಳಲ್ಲಿ, ಮೇಡಿಕಲ್ ಅಂಗಡಿಗಳಲ್ಲಿ, ಬಟ್ಟೆ ಅಂಗಡಿಗಳಲ್ಲಿ,  (Part Time) ಕೆಲಸವನ್ನು  ಮಾಡುತ್ತಿದ್ದರು.
  3. ಎಷ್ಟೋ ವಿದ್ಯಾರ್ಥಿಗಳು ಪಾರ್ಟ ಟೈಂ  ಕೆಲಸಕ್ಕೆ ಸೇರಿದ ಮೇಲೆ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಕೊಡಲಾಗದ್ದೆ ಪರೀಕ್ಷೆಯಲ್ಲಿ ಫೇಲ್ ಆಗುತ್ತಿದ್ದರು.
  4. ತುಂಬಾ ಬಡ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸವನ್ನು ಅಲ್ಲಿಗೆ ಕೊನೆಗೊಳಿಸಿದ್ದರು.

ನಮ್ಮ ಸರಕಾರವು ಪ್ರತಿ ವರ್ಷವು ಹಣದ ಕೊರತೆಯ ನೇಪವೊಡ್ಡಿ ಹೊಸ ವಸತಿ ನಿಲಯಗಳ ನಿರ್ಮಾಣದ ಬೇಡಿಕೆಯನ್ನು ತಳ್ಳಿಹಾಕುತ್ತಾ ಬಂದಿದೆ .ಸರಕಾರವು ಎಲ್ಲೆಲ್ಲೊ ದುಂದು ವೆಚ್ಚವನ್ನು ಮಾಡುತ್ತದೆ. ಆದರೆ ಬಡ ವಿದ್ಯಾರ್ಥಿಗಳ ವಸತಿ ನಿಲಯಗಳ ನಿರ್ಮಾಣಕ್ಕೆ ಹಣದ ಕೊರತೆ ನೆಪ್ಪವನ್ನು ನೀಡುತ್ತಿರೋದ್ದು ವಿರ್ಪಯಾಸವೆ ಸರಿ.ಪ್ರತಿ ವರ್ಷ ಸರಕಾರವು  ಯಾವುದೇ ಇಲಾಖೆಯ ಸರ್ಕಾರಿ /ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ  ಓದುವ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವು  ವಿದ್ಯಾರ್ಥಿಗಳಿಗೆ ತಲಪುತ್ತಿರಲಿಲ್ಲ .ಅದರಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿತ್ತು. ಬಡ ವಿದ್ಯಾರ್ಥಿಗಳು ಅದರ ಬಗ್ಗೆ ಕಾಲೇಜಿನಲ್ಲಿ ಕೇಳಿದರೆ ಅವರು ಸರಕಾರದಿಂದ ಇನ್ನೂ  ಬಜೆಟ್ಟ     ಬಂದಿಲ್ಲ ಅಂಥ ಕಾರಣ ಹೇಳುತ್ತಿದ್ದರು.ಸರಕಾರದ ಇಲಾಖೆಯಲ್ಲಿ ಕೇಳಿದರೆ ವಿದ್ಯಾರ್ಥಿ ವೇತನದ ಹಣವನ್ನು ಕಾಲೇಜಿಗೆ ನೀಡಲಾಗಿದೆ ಅಂತ ಹೇಳುತ್ತಿದ್ದರು.  ಬಡ ವಿದ್ಯಾರ್ಥಿಗಳಿಗೆ ಸೇರಬೇಕಾದ ದುಡ್ಡು ಯಾರು ನುಂಗುತ್ತಾಯಿದ್ದರು ? ಆ ದೇವರೇ ಬಲ.  ವಿದ್ಯಾರ್ಥಿಗಳು ಕಾಲೇಜಿನ ವಿರುದ್ಧ ಹೋರಾಟ ಮಾಡಲು ಹೆದರುತ್ತಾಯಿದ್ದರು ಯಾಕೆಂದರೆ

  1. ಹೋರಾಟ ಮಾಡಿದ್ದವರಿಗೆ ಇರ್ಟನಲ್ ಮಾಕ್ಸ್ರ (Internal Marks)   ಕಡಿಮೆ ಕೊಡುತ್ತಿದ್ದರು.
  2. ಕೆಲವು ಕಾಲೇಜುಗಳಲ್ಲಿ  ಪ್ರಯೋಗಾಲಯ ಪರೀಕ್ಷೆಯಲ್ಲಿ  (Practical Exams) ಫೇಲ್  ಮಾಡುತ್ತಿದ್ದರು.

ವಿದ್ಯಾರ್ಥಿಗಳ ಕಷ್ಟ ಕೇಳುವರಿರಲ್ಲ. ಇನ್ನೂ ಶಾಲೆಗಳ ಪರಿಸ್ಥಿತಿ ಇದ್ದಕ್ಕಿಂತ ಭಿನ್ನವೆನಾಗಿರಲಿಲ್ಲ.ಯಾವುದೇ ಸರ್ಕಾರಿ ಶಾಲೆಗಳಲ್ಲಿ /ಅನುದಾನಿತ ಸರ್ಕಾರಿ   ಶಾಲೆಗಳಲ್ಲಿ 2 ರಿಂದ 10 ತರಗತಿಯಲ್ಲಿ  ಓದುತ್ತಿದ್ದ ಬಡ ವಿದ್ಯಾರ್ಥಿಗಳಿಗೆ ಸರಕಾರವು  200  ರಿಂದ 1000 ರೂಪಾಯಿವರೆಗೆ ವಿದ್ಯಾರ್ಥಿ ವೇತನವನ್ನು ನೀಡುತ್ತದೆ. ಆದರೆ  ಅದನ್ನು ಕೆಲವು ಶಿಕ್ಷಕರು, ಪ್ರಾಂಶುಪಾಲರು   ವಿದ್ಯಾರ್ಥಿಗಳಿಗೆ ನೀಡದೆ ನುಂಗುತ್ತಾಯಿದ್ದರು.ಮನುಷ್ಯನ ಅತಿ  ಆಸೆ ಎಂತಹದು ನೋಡಿ ಬಡ ವಿದ್ಯಾರ್ಥಿಗಳ ಪಾಲಿನ ದುಂಡು   ತಿನ್ನಲು ಮನಸ್ಸಾದ್ದರು ಹೇಗೆ ಬರುತ್ತದೆ? . ಸರಕಾರವು ಪ್ರತಿ ವರ್ಷವು ನಾವು ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತೆವೆ  ಅಂತ ಜಂಬದಿಂದ ಹೇಳಿಕೊಳ್ಳುತ್ತಿತ್ತು .

scholarship

ಹಿಂದುಳಿದ ವರ್ಗಗಳ ಕಲ್ಯಾಣ  ಇಲಾಖೆಯು ಪ್ರತಿ ವರ್ಷವು ವಿವಿಧ  ಕೋರ್ಸಗಳಿಗೆ ಪ್ರವೇಶ ಪಡೆಯುವ / ಕೋರ್ಸಗಳು ಓದುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ಬಡ ವಿದ್ಯಾರ್ಥಿಗಳಿಗೆ  ವಿದ್ಯಾರ್ಥಿ ವೇತನವನ್ನು ನೀಡುತ್ತದೆ. ಆದರೆ ಅದರಲ್ಲಿಯೂ ಭ್ರಷ್ಟಾಚಾರ ನಡೆಯುತ್ತಾಯಿತ್ತು.ಈ ಭ್ರಷ್ಟಾಚಾರಕ್ಕೆ ಯಾವಾಗ ಕಡಿವಾಣ ಹಾಕ್ಕುತ್ತದೆ ನಮ್ಮ ಎಂದು ವಿದ್ಯಾರ್ಥಿಗಳು ಯೋಚಿಸುತ್ತಿದ್ದರು. ಕಡೆಗೂ ಎಚ್ಚೆತ್ತ ನಮ್ಮ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ  ಇಲಾಖೆಯು 2013ರಲ್ಲಿ  ವಿದ್ಯಾಸಿರಿ ಎಂಬ ಯೋಜನೆಯನ್ನು ಘೋಶಿಸಿತ್ತು. ಈ ಯೋಜನೆಯಲ್ಲಿ  ಆಯ್ಕೆಯಾದ ವಿದ್ಯಾರ್ಥಿಗಳ ಬ್ಯಾಂಕ ಖಾತೆಗಳಿಗೆ ಆನಲೈನ್ ಮೂಲಕ ಜಮಾ ಮಾಡುತ್ತದೆ.
ಈ ಯೋಜನೆಯಲ್ಲಿ ಎರಡು ವಿಧಗಳಿವೆ.

  1. ಹಿಂದುಳಿದ ವರ್ಗಗಳ ಮೆಟ್ರಿಕ್  ನಂತರದ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸಹಾಯ ಯೋಜನೆ
  2. ಶುಲ್ಕ ವಿನಾಯತಿ ಯೋಜನೆ

ಊಟ ಮತ್ತು ವಸತಿ ಸಹಾಯ ಯೋಜನೆ:  ಈ ಯೋಜನೆ ಉದ್ದೇಶ ಯಾವುದೇ ಇಲಾಖೆಯ ಸರಕಾರಿ/ ಸರಕಾರಿ ಅನುದಾನಿತ  ವಿದ್ಯಾರ್ಥಿ ವಸತಿ ನಿಲಯಗಳಿರುವ  ಕಾಲೇಜುಗಳಲ್ಲಿ  /ವಸತಿ ಕಾಲೇಜುಗಳಲ್ಲಿ, ಪ್ರವೇಶ ದೊರೆಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ,ಊಟ ಮತ್ತು  ವಸತಿಗೆ  ಸಹಾಯವನ್ನು ಒದಗಿಸುವುದು. ಈ ಯೋಜನೆಯಲ್ಲಿ  ವಿದ್ಯಾರ್ಥಿಗಳನ್ನು ಮೆರಿಟ್ ಆಧರಿಸಿ ಆಯ್ಕೆ ಮಾಡಲಾಗುತ್ತದೆ.  ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1500 ರೂಪಾಯಿ ಅಂತೆಯೇ ಶೈಕ್ಷಣಿಕ ವರ್ಷದ 10 ತಿಂಗಳಿಗೆ ಒಟ್ಟು 15000 ರೂಪಾಯಿಯನ್ನು ವಿದ್ಯಾರ್ಥಿಗಳ ಬ್ಯಾಂಕ ಖಾತೆಗಳಿಗೆ ಕೋರ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ನೇರವಾಗಿ ಜಮಾಮಾಡಲಾಗುತ್ತದೆ.ಈ ಯೋಜನೆಯಲ್ಲಿ ವಿದ್ಯಾರ್ಥಿಗಳು  ಅರ್ಜಿಯು ಆನಲೈನ್ ಮೂಲಕವೆ ಹಾಕಬೇಕು.

ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ : ಈ ಯೋಜನೆಯಲ್ಲಿ  ವಿದ್ಯಾರ್ಥಿಗಳ ಆಯ್ಕೆಯು ಮೆರಿಟ್ ಆಧರಿಸಿ ಮಾಡಲಾಗುತ್ತದೆ. ಇದ್ದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಈ ಕೆಳಗಿನ ಶುಲ್ಕಗಳನ್ನು ವಿದ್ಯಾರ್ಥಿ ವೇತನದ ರೂಪದಲ್ಲಿ ಮರುಪಾವತಿಸಲಾಗುತ್ತದೆ.

  1. ಭೋದಾನ ಶುಲ್ಕ
  2. ಪ್ರಯೋಗಾಲಯ ಶುಲ್ಕ
  3. ಪರೀಕ್ಷಾ ಶುಲ್ಕ
  4. ಕ್ರೀಡಾ ಶುಲ್ಕ
  5. ಗ್ರಂಥಾಲಯ ಶುಲ್ಕ

scholarship-india

ಈ ಯೋಜನೆಗೆ ವಿದ್ಯಾರ್ಥಿಗಳು ಆನಲೈನ ಮೂಲಕ ಅರ್ಜಿ ಸಲ್ಲಿಸಬೇಕು. ಇನ್ನೂ ಸರಕಾರಿ /ಸರಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ   ನೀಡುವ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಬ್ಯಾಂಕ ಖಾತೆಗಳಿಗೆ ನೇರವಾಗಿ ಜಮಾ ಮಾಡುವ ಉದ್ದೇಶದಿಂದ ಅಂದಿನ ಯು.ಪಿ. ಸರಕಾರವು ದೇಶದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಒಂದು ಸುತ್ತೋಲೆಯನ್ನು ಹೊರಡಿಸಿತ್ತು .ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಶೂನ್ಯ ಬ್ಯಾಲೇಸ್ನ (Zero Balance)  ಅಲ್ಲಿ ಉಚಿತ ಬ್ಯಾಂಕ ಖಾತೆಯನ್ನು ತೆರೆಯಲು ಆದೇಶವನ್ನು ಹೊರಡಿಸಿತ್ತು. ಆಮೇಲೆ ಸರಕಾರವು ನೀಡುವ  ವಿದ್ಯಾರ್ಥಿ ವೇತನವು ವಿದ್ಯಾರ್ಥಿಗಳ ಬ್ಯಾಂಕ ಖಾತೆಗಳಿಗೆ ನೇರವಾಗಿ ಜಮಾ ಮಾಡುವ ಕ್ರಿಯೆ ಶುರುವಾಯಿತು. ನಮ್ಮ ದೇಶದ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಂಕ ವಹಿವಾಟುಗಳ  ಬಗ್ಗೆ ಸ್ವಲ್ಪ ಜ್ಞಾನವು ಬರುತ್ತಾಯಿದ್ದೆ. ನಮ್ಮ ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯು  ಪರಿಶಿಷ್ಟ  ಜಾತಿ ಮತ್ತು ಪರಿಶಿಷ್ಟ  ಪಂಗಡಕ್ಕೆ ಸೇರಿದ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವು ಕಳೆದ ವರ್ಷದಿಂದ ವಿದ್ಯಾರ್ಥಿಗಳ ಬ್ಯಾಂಕ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕೂಡ ಇದ್ದೇ ರೀತಿಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸರಕಾರವು ಬಡ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನದಲ್ಲಿ ಆಗುತ್ತಿರುವ ಭ್ರಷ್ಟಾಚಾರವು ಕೊನೆಗೊಂಡಿದೆ.

ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಡಿಜಿಟಲ್ ಇಂಡಿಯಾ ( Digital India)  ವನ್ನು  ಜುಲೈ 15,2015 ರಂದು ಘೋಷಿಸಿದರು. ಈ ಯೋಜನೆಯಲ್ಲಿ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ್ದ ಪ್ರಕ್ರಿಯೆಗಳು ಮಾಡಲು  ನ್ಯಾಶನಲ್  ಸ್ಕಾಲರಶಿಪ್ ವೇಬಪೋರಟ್ (National Scholarship Webportal)  ಅನ್ನು ನಿರ್ಣಮಿಸಲಾಗಿದೆ. ನಮ್ಮ ದೇಶದ ಸರಕಾರಗಳು ವಿದ್ಯಾರ್ಥಿ ವೇತನದ ಪ್ರಕ್ರಿಯೆಯಲ್ಲಿ ಅದನ್ನು ಉಪಯೋಗಿಸಬಹುವುದು.

ಆತ್ಮೀಯ ಸ್ನೇಹಿತರೆ ನನ್ನ,ದೊಂದು ಕೋರಿಕೆ ನಿಮಗೆ ಪರಿಚಯವಿರುವ ಬಡ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.. ಯಾಕೆಂದರೆ ಆಗಸ್ಟ್ ತಿಂಗಳಲ್ಲಿ ಎಲ್ಲಾ ವಿದ್ಯಾರ್ಥಿ ವೇತನಗಳ ಅರ್ಜಿಗಳನ್ನು ಕರೆಯಲಾಗುತ್ತದೆ.ಹೆಚ್ಚಿನ ವಿವರಗಳಿಗೆ ಈ ಜಾಲತಾಣಗಳಿಗೆ ಭೇಟಿ ನೀಡಿ.

  1. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -www.karepass.cgg.gov.in
  2. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ -www. sw.kar. nic. in
  3. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -www. gokdom.kar. nic. in
  4. ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ – www. kar.nic.in/pue/
  5. ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ – www. vidyaposhak.org
  6. ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ – www. kar.nic.in/pue/
  7. ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ – www. kar.nic.in/pue/
  8. ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ – www. kar.nic.in/pue/
  9. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) – www. kar.nic.in/pue/
  10. ಮೆರಿಟ್ ಸ್ಕಾಲರಶಿಪ್ – ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ –www. kar.nic.in/pue/
  11. ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ  ವೀಪ್ರೊ ಅವರ  ಅಜೀಮ್ ಪ್ರೇಮಜೀ ಫೌಂಡೇಷನ್ -www. azimpremjifoundation.org

 

 – ನಾಗರಾಜ ಭದ್ರಾ, ಕಲಬುರಗಿ ಜಿಲ್ಲೆ

 

 

2 Responses

  1. ಬಹಳಷ್ಟು ಉಪಯುಕ್ತ ಮಾಹಿತಿಗಳನ್ನು ವಿವರವಾಗಿ ನೀಡಿ ಅನೇಕರಿಗೆ ನೆರವಾಗುತ್ತಿದ್ದೀರಿ . ಉತ್ತಮ ಬರಹ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: