“ದೇವರ ಸಾಲ”
ಮಗನ ಹುಟ್ಟುಹಬ್ಬದಂದು ಆನೆಗುಡ್ಡೆ , ಧರ್ಮಸ್ಥಳ, ಹೊರನಾಡು, ಸುಬ್ರಹ್ಮಣ್ಯ….ಹೀಗೆ ದೇವಸ್ಥಾನಗಳಿಗೆ ಕಿರುಕಾಣಿಕೆಯನ್ನು M.O. ಮಾಡುವ ಪರಿಪಾಠ ಹಲವು ವರ್ಷಗಳಿಂದ ನಡೆದುಬಂದಿದೆ. ಹಾಗೆಯೇ ಕುಟುಂಬದಲ್ಲಿ ಏನಾದರೂ ಆಪತ್ತು ಬಂದಾಗ, ಅಥವಾ ಶುಭಕಾರ್ಯದ ಮೊದಲು ವಿಶೇಷ ಪ್ರಾರ್ಥನಾ ರೂಪವಾಗಿ ದೇವರ ಬಳಿ ದುಡ್ಡು ತೆಗೆದಿಡುವುದೂ ಇದೆ.
ಈ ಸಲ ದೇವರ ಪೀಠದ ಕೆಳಗೆ ಸುಮಾರು ದುಡ್ಡು ಜಮೆಯಾಗಿ ಇನ್ನೂ ಆಯಾ ಕ್ಷೇತ್ರಗಳಿಗೆ ತಲುಪಿಸಿಲ್ಲವೆನ್ನುವ ಹೊಣೆ ನೆನಪಿಸಿತು. ಆಗ ಥಟ್ಟನೆ ಅನ್ನಿಸಿದ್ದು …ಇದು “ದೇವರ ಸಾಲ ” ಇದನ್ನು ಚುಕ್ತಾ ಮಾಡದೇ ಮತ್ತೇನೂ ಬೇಡಲು ಹಕ್ಕಿಲ್ಲವೆನ್ನುವ ಭಾವನೆ. ಇದರ ಹಿಂದೆಯೇ ಬಂದ ಚಿಂತನೆ “ದೇವರ ಸಾಲ” ತೀರಿಸಲು ನನಗೆ ಸಾಧ್ಯವೇ? ನನ್ನ ಬದುಕಿನಲ್ಲಿ ಸುಂದರ ಸಂಬಂಧಗಳನ್ನು , ಚಂದದ ಕ್ಷಣಗಳನ್ನು, ಕರುಣಿಸಿದ ಆ ದೇವರ ಸಾಲ ಅಗಾಧ, ಅನಂತ.
ಹೀಗೇ ಕೊಡುತಿರು ದೇವಾ ಕೊನೆಯಿಲ್ಲದ ಸಾಲ
ಹಾಗೇ ನೀಡುತಿರು ಎನಗೆ ಮರಳಿಸುವ ಬಲ
– ಮೋಹಿನಿ ದಾಮ್ಲೆ (ಭಾವನಾ)
ಈ ಬರಹ ಎಲ್ಲರಿಗೂ ದೇವರ ಸಾಲ ಉಳಿಸಿಕೊಂಡ ಎಲ್ಲರಿಗೂ ಅನ್ವಯಿಸುತ್ತೆ.. ಚೆನ್ನಾಗಿದೆ. .
ಧನ್ಯವಾಾದಗಳು.
ಸರ ಕಾರ ಕ್ಕೆ ಸಲ್ಲುವ ದೇವಾಲಯಗಳ ಗಂಟು
ಈಗ ಆ ಸಾಲಕ್ಕೆ ಅಂತ ಕೊಟ್ಟ ಹಣ ಎಲ್ಲಿಗೆ ಹೋಗುತ್ತಿದೆ ಅಂತ ಕಂಡು ಕೊಳ್ಳುವುದೂ ವಿಹಿತ
ನೀವು ಹೇಳೋದು ಸರಿ. ಆದರೆ, ನನ್ನ ಸಾಲಪಾವತಿಯಾಗುವ ದೇವಳ (ದೇವರು) ಗಳ ಸನ್ನಿಧಿಯಲ್ಲಿ ನಿತ್ಯ ಅನ್ನದಾನ ನಡೆಯುವುದರಿಂದ ನನ್ನ ಕಾಣಿಕೆಯ ಸದ್ವಿನಿಯೋಗವಾಗುವುದೆಂಬ ಸಾರ್ಥಕಭಾವ ಇದೆ.