ಪರಾಗ

ವಾಟ್ಸಾಪ್ ಕಥೆ 80: ಸುಳಿವು.

Share Button

ಒಂದು ಸಾರಿ ಒಬ್ಬ ವಜ್ರದ ವ್ಯಾಪಾರಿಯ ಗೋದಾಮಿನಲ್ಲಿ ಸಣ್ಣ ಇಲಿಯೊಂದು ಹೇಗೋ ಬಂದು ಸೇರಿಕೊಂಡಿತ್ತು. ಒಂದುದಿನ ವ್ಯಾಪಾರಿಯ ಕಣ್ಣಮುಂದೆಯೇ ಅದು ವಜ್ರವೊಂದನ್ನು ನುಂಗಿಬಿಟ್ಟತು. ಅದು ಗೋದಾಮನ್ನು ತೊರೆದು ಹೊರಗೆ ಹೋಗದಂತೆ ಭದ್ರಪಡಿಸಿದ ಮೇಲೆ ವಜ್ರವನ್ನು ಹೇಗೆ ಹೊರತೆಗೆಯಬಹುದೆಂದು ಆಲೋಚಿಸಿದ. ಅದಕ್ಕಾಗಿ ಒಬ್ಬ ಚತುರಬಾದ ವ್ಯಕ್ತಿಯನ್ನು ಕರೆತಂದ. ಆತ ಕಳ್ಳ ಇಲಿಯನ್ನು ಹುಡುಕುವ ಪ್ರಯತ್ನದಲ್ಲಿದ್ದ.

ಹೀಗಿರುವಾಗ ಒಂದು ದಿನ ಆಶ್ಚರ್ಯವಾಗುವಂತೆ ಒಂದು ಮೂಲೆಯಲ್ಲಿ ಹಲವಾರು ಇಲಿಗಳು ಗುಂಪು ಸೇರಿದ್ದವು. ಅವುಗಳನ್ನು ಕಂಡ ವ್ಯಾಪಾರಿಗೆ ಆತಂಕವಾಯಿತು. ಅವುಗಳಲ್ಲಿ ವಜ್ರ ನುಂಗಿದ ಇಲಿಯನ್ನು ಪತ್ತೆ ಮಾಡುವುದು ಕಷ್ಟ. ನನ್ನ ವಜ್ರ ಹಾಳಾಯಿತು ಎಂದು ಸಂಕಟಪಟ್ಟ.
ಆಗ ಚತುರನಾದ ಮನುಷ್ಯನು ಅವುಗಳಲ್ಲಿ ಒಂದು ಇಲಿಯನ್ನು ಉಪಾಯವಾಗಿ ಹಿಡಿದ. ಅದರ ಹೊಟ್ಟೆಯನ್ನು ಸೀಳಿ ವಜ್ರವನ್ನು ತೆಗೆದುಕೊಟ್ಟ.
ವ್ಯಾಪಾರಿಗೆ ಆಶ್ಚರ್ಯವಾಯಿತು. ಕುತೂಹಲದಿಂದ ಅವನನ್ನು “ನೀವು ಅಷ್ಟೊಂದು ಇಲಿಗಳಲ್ಲಿ ಇದೇ ಇಲಿಯನ್ನು ಹೇಗೆ ಪತ್ತೆಮಾಡಿದಿರಿ?” ಎಂದು ಪ್ರಶ್ನಿಸಿದ.
ಅದಕ್ಕೆ ಆ ಮನುಷ್ಯ “ಅದು ತುಂಬ ಸುಲಭ. ವಜ್ರ ನುಂಗಿದ ಇಲಿಯು ಗುಂಪಿನಿಂದ ಪ್ರತ್ಯೇಕವಾಗಿ ಸ್ವಲ್ಪ ದೂರದಲ್ಲಿ ಕುಳಿತಿತ್ತು” ಎಂದ.
“ಅದೇಕೆ?” ಎಂದು ಕೇಳಿದ ವ್ಯಾಪಾರಿ.
ಮನುಷ್ಯ ಹೇಳಿದ “ಸಾಮಾನ್ಯವಾಗಿ ಶ್ರೀಮಂತರು ಸಾಮಾನ್ಯ ಜನರ ಗುಂಪಿನಿಂದ ದೂರದಲ್ಲಿ ಕುಳಿತುಕೊಳ್ಳುತ್ತಾರೆ ಅಲ್ಲವೇ? ಆ ಸ್ವಭಾವವೇ ನನಗೆ ಪ್ರೇರಣೆಯಾಯಿತು” ಎಂದನು. ತನ್ನ ಸಂಭಾವನೆ ಪಡೆದು ಹೊರಟುಹೋದನು.

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು

10 Comments on “ವಾಟ್ಸಾಪ್ ಕಥೆ 80: ಸುಳಿವು.

  1. ಸಮಸ್ಯೆಗಳನ್ನು ಪರಿಹರಿಸುವಾಗ ಮನಃಶಾಸ್ತ್ರ ಬಹುಮುಖ್ಯವಾಗುತ್ತದೆ ಎಂಬ ಸಂದೇಶವನ್ನು ಸರಳವಾಗಿಈ ಕತೆ ನಿರೂಪಿಸಿದೆ.

    1. ನಿಮ್ಮ ಓದು..ಪ್ರತಿಕ್ರಿಯೆ ಗೆ ಧನ್ಯವಾದಗಳು..ಪದ್ಮಾ ಮೇಡಂ

  2. ಜೀರ್ಣವಾಗದ ವಜ್ರದಿಂದಾಗಿ ಆ ಇಲಿಯು ಹೊಟ್ಟೆ ನೋವಿನಿಂದ ದೂರ ಕುಳಿತಿರಲೂ ಬಹುದು ಎಂದು ನನ್ನೆಣಿಕೆ! ಇರಲಿ… ಸುಂದರ ರೇಖಾಚಿತ್ರದೊಂದಿಗೆ ಮೂಡಿಬಂದ ಚಂದದ ಕಥೆ… ನೀವಂತೂ ಸೂಪರ್ ರತ್ನ, ನಾಗರತ್ನ ಮೇಡಂ!

    1. ನಿಮ್ಮ ಓದುವಿಕೆ ಅದರ ಸ್ಪಂದನೆಗೆ…ಧನ್ಯವಾದಗಳು ಶಂಕರಿ ಮೇಡಂ

  3. ಕಥೆ ತುಂಬಾ ದೊಡ್ಡದಿರಬಹುದೆಂದು ಓದಲು ಪ್ರಾರಂಭಿಸಿದೆ. Sudden ಆಗಿ ಕ್ಲೈಮ್ಯಾಕ್ ಗೆ ಹೋಗಿ ಮುಗಿದೇ ಹೋಯಿತು.

    ಅತ್ಯುತ್ತಮ ಸಣ್ಣ ಕಥೆ ನೀಡಿದ್ದಕ್ಕೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *