“ಅಕ್ಷಯ”
ಅಂದು
ದ್ರೌಪದಿಯ
ಮಾನ ಅಭಿಮಾನಕ್ಕೆ
ಕೃಷ್ಣನೊಬ್ಬನಿದ್ದ..
ಇಂದಿನ
ದ್ರೌಪದಿಯರ
ಮಾನ ಅಭಿಮಾನಕ್ಕೆ
ಕೃಷ್ಣನಂತಹವರಿಲ್ಲ,,
ಅಂದಿಗೆ
ವನವಾಸ ಅಜ್ಞಾತವಾಸವಿದ್ದರು
ದ್ರೌಪದಿ ನೀ ಅದೃಷ್ಟವಂತೆ
ಅಕ್ಷಯವನೀವ ಕೃಷ್ಣನೊಬ್ಬನಿದ್ದ ನಿನಗೆ…
ಇಂದಿಗೂ ಇದೆ
ವನವಾಸ ಅಜ್ಞಾತವಾಸ
ಆದರೆ ನಾವು ಅದೃಷ್ಟವಂತರಲ್ಲ
ನಮ್ಮೊಡನೆ ನಮಗಾಗಿ
ಅಕ್ಷಯವನೀವ
ಕೃಷ್ಣನೊಬ್ಬನಿಲ್ಲ ನಮಗೆ…
-ವಿದ್ಯಾ ವೆಂಕಟೇಶ್. ಮೈಸೂರು
ಸರಳ ಸುಂದರ ಕವನ ಚೆನ್ನಾಗಿದೆ ಸೋದರಿ ವಿದ್ಯಾ
Very nice
ಹೌದು..ಹೆಚ್ಚು ದುಸ್ಶಾಸನರೇ ತುಂಬಿರುವ ಈ ಲೋಕದಲ್ಲಿ ಕೃಷ್ಣ ಕರುಣೆಯ, ಅಕ್ಷಯ ಪ್ರೀತಿಯ ಬರ! ಚಂದದ ಕವನ ಮೇಡಂ.
ಬಹಳ ಸೊಗಸಾದ ರಚನೆ
Very nice
Hi Vidya
Very nice