ಕನಸು ಕರಗಿದಾಗ
ನೀ ,
ಕೊಟ್ಟಿದ್ದನ್ನೇ ನಾ
ನಿನಗೆ ಹೇಗೆ ಕೊಡಲಿ ….?
ಅಂತಲೇ
ಪ್ರೀತಿ ಕೊಡಲಿಲ್ಲ …..
ಹೃದಯದ ಬಾಗಿಲು
ತೆರೆದು ಇಟ್ಟಿದ್ದಿಯಂತೆ ನೀನು
ಒಳಗೆ ಕರೆಯದಿದ್ದರೂ ಪರವಾಗಿಲ್ಲ
ಹೊರಗೆ ಬೆಳದಿಂಗಳಿದೆ
ರಂಗೋಲಿ ಹಾಕಲು
ಹೇಳಲಾರದೆ ಹಾಗೇ ಉಳಿದ
ನೂರಾರು ಮಾತುಗಳಿವೆ ಅಲ್ಲಿ
ಸ್ಪೋಟವಾಗುವ ಮೊದಲು
ಕೊಟ್ಟುಬಿಡು ಹೃದಯ
ಸುಮ್ಮನೆ ಬರೆಯಲಿಲ್ಲ ನಾನು
ಅಳಿಸಲ್ಲ ನಿನ್ನ ನೆನಪುಗಳು
ಬರೆದೂ ,ಬರೆದೂ ಖಾಲಿಯಾಗಿವೆ
ಬರಲಾರೆಯಾ ಮತ್ತೊಮ್ಮೆ ಕನಸಿನಲಿ ……?
ನಿನ್ನ ಪ್ರೀತಿಯ ನೆನಪುಗಳು
ಈ ವಸಂತದಲಿ ಚಿಗುರಿ
ಚಿಗುರಿ ಬೆಳೆದು ಮರವಾಗಿರುವಾಗ
ನೀ ,
ಸಿಗದಿದ್ದರೇನಂತೆ
ನನಗೆ ಅದರ
ನೆರಳೇ ಸಾಕು …..!!
-ಪ್ರಭಾಕರ ತಾಮ್ರಗೌರಿ, ಗೋಕರ್ಣ
ಚೆನ್ನಾಗಿದೆ ಸರ್
ಧನ್ಯವಾದಗಳು ಮೇಡಂ
ಮನದ ಭಾವನೆಗಳನ್ನು ಬಿಚ್ಚಿಟ್ಟ ಕವನ..ಚೆನ್ನಾಗಿದೆ.
ಕವನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ಮೇಡಂ.