‘ಮೌನ’ವನ್ನು record ಮಾಡಲಾಗುತ್ತದೆಯೇ ?
ಹೀಗೆ ಒಂದು ದಿನ ಪಾಂಡವಪುರದ ಹತ್ತಿರ ಇರುವ. ಪುರಾತನಕಾಲದ ದೇವಸ್ಥಾನದ ಗರ್ಭಗುಡಿಯ ಮುಂದೆ ನಾನು ಹಾಗು ನನ್ನ ಸ್ನೇಹಿತ ನಿಂತಿದ್ದೆವು. ಅವನಿಗೆ ದೇವರಲ್ಲಿ ಅತೀವ ಭಕ್ತಿ ಕಣ್ಣು ಮುಚ್ಚಿ ಕೈ ಮುಗಿದು ನಿಂತಿದ್ದ .ನನ್ನ ಕಣ್ಣುಗಳು ಕ್ಯಾಮರದಂತೆ ಸುತ್ತಲೂ ಇರುವುದನ್ನು ಸೆರೆ ಹಿಡಿಯಲು ಪ್ರಾರಂಭಿಸಿತು. ಅದರಷ್ಟೆ ವೇಗವಾಗಿ ಮನಸ್ಸು , ಅಷ್ಟೇನು ದೊಡ್ಡದಲ್ಲದ ದೇವಸ್ಥಾನ, ಎಲ್ಲವು ಕಲ್ಲಿನಿಂದಲೆ ಕಟ್ಟಲ್ಪಟ್ಟಿದ್ದವು ಕಂಬ,ಗೋಡೆ, ಮೇಲ್ ಛಾವಣಿ.
ಆಗಲೇ ನನ್ನಗಮನಕ್ಕೆ ಬಂದದ್ದು ಇಡೀ ದೇವಸ್ಥಾನದಲ್ಲಿ ನಾವು ಇಬ್ಬರೆ ಪೂಜಾರಿಯು ಇರಲಿಲ್ಲ ವರವನ್ನು ನೇರವಾಗಿ ದೇವರು ನಮಗೆ ಕೊಡಬೇಕಾಗಿತ್ತು (ದೇವರುಕೊಟ್ಟರು ಪೂಜಾರಿ ಕೊಡ….ಅನ್ನೊ ಸಮಸ್ಯೆ ಇರಲಿಲ್ಲ).ದೇವಸ್ಥಾನ ಕತ್ತಲಿನಿಂದ ಕೂಡಿತ್ತು ,ದೇವರ ಮುಂದೆ ಇದ್ದ ಒಂಟಿ ದೀಪ ಇಡೀ ದೇವಸ್ಥಾನವನ್ನು ಬೆಳಗಲು ಹೆಣಗುತಿತ್ತು. ಒಳಗೆ ಕಮಟು ವಾಸನೆ, ಅಲ್ಲಿ ಏನೊ ಒಂದು ವ್ಯೆತ್ಯಾಸ ನಾನು ದೇವಸ್ಥಾನದ ಒಳಗೆ ಬಂದಾಗಲಿನಿಂದ ಗಮನಿಸುತಿದ್ದೆ ,
ಅದು ‘ಮೌನ‘ ಇಷ್ಟೆಲ್ಲಾ ಬರೆಯಲು ಆ ನೀರವ ಮೌನವೆ ಕಾರಣ ,ನಿಶಬ್ದವೇ ಬೇರೆ ಮೌನವೇ ಬೇರೆ ಅನ್ನೊ ಅನುಭವ ಮೊದಲು ಆಗಿದ್ದು ಅಲ್ಲೇ …..ಇಂದಿಗೂ ಆ ಮೌನವನ್ನು ನನ್ನೊಳಗೆ ಅನುಭವಿಸುತಿದ್ದೇನೆ….. ಶಬ್ದ, ಗದ್ದಲಗಳನ್ನು ದಾಖಲಿಸ ಬಹುದು (Record) ಆದರೆ ‘ಮೌನ’ ಸಾಧ್ಯ ವಿಲ್ಲ. ಅಲ್ಲವೇ? ಅದನ್ನು ಅನುಭವಿಸಲಷ್ಟೆ ಸಾಧ್ಯ …
– ಶೈಲಜೇಶ್ ರಾಜ , ಮೈಸೂರು
ವಾಹ್! ಅದ್ಭುತ ಅಭಿವ್ಯಕ್ತಿ! 🙂
nija devastanada olagina mounave bere…avarnaneeya…
ಮೌನ ನಮ್ಮೊಳಗೆ ಇದೆ. ಅದನ್ನು ರೆಕಾರ್ಡ್ ಮಾಡಲು ನಮ್ಮ ಒಳಗಣ್ಣನ್ನು ಕ್ಲಿಕ್ಕಿಸಬೇಕು. ಉರಿವ ಹಣತೆ ಮತ್ತು ಆವರಿಸಿಕೊಂಡ ಕತ್ತಲೆಯ ನಡುವೆ
‘ಮೌನವಿತ್ತು’ ಶೈಲಜೇಶ್. ಚಿಕ್ಕ, ಚೊಕ್ಕ ಲೇಖನ.