ಮಹಾ ಶಿವರಾತ್ರಿಯ ಮಹಾಫಲಗಳು

Share Button

ಶಿವರಾತ್ರಿ ಹಿಂದುಗಳ ಪ್ರಮುಖ ಹಬ್ಬ. ಮಾಘಮಾಸದಿ ಬಹುಳ ಚತುರ್ದಶಿಯಂದು, ದಿನವಿಡೀ ಉಪವಾಸವಿದ್ದು, ಮರುದಿನ ಸಿಹಿ ಅಡುಗೆಯನ್ನು ಮಾಡುವುದು ವಾಡಿಕೆ. ದೇಶಾದ್ಯಂತ ದಿನವಿಡೀ ಉಪವಾಸ ಮಾಡಿ, ಶಿವನಿಗೆ ಭಕ್ತಿಯಿಂದ  ಅಭಿಷೇಕವನ್ನು ಮಾಡುತ್ತಾರೆ.

ಶಿವರಾತ್ರಿಯನ್ನು ಆಚರಿಸಲು ಕಾರಣವಿದೆ. ಭೃಹ್ಮ ಮತ್ತು ವಿಷ್ಣುವಿನ ಮಧ್ಯೆ ಬಂದ ಸಮಸ್ಯೆ ಬಗೆಹರಿಸಲು ಶಿವನು ಅಂತ್ಯವಿಲ್ಲದ ಅಗ್ನಿ ಕಂಬವಾದನೆಂದು ಶಿವ ಪುರಾಣ ಹೇಳುತ್ತದೆ. ಇನ್ನೊಂದೆಡೆ, ಪಾರ್ವತಿಯೂ ರಾತ್ರಿಯಿಡಿ ಶಿವನ ಧ್ಯಾನ ಮಾಡಿ ಶಿವನನ್ನು ವರಿಸಿದಳೆಂಬ ಪ್ರತಿತಿಯೂ ಇದೆ. ಜೊತೆಗೆ ಒಬ್ಬ ಬೇಡನು ಬೇಟೆಗಾಗಿ ಕಾಡಿಗೆ ಬಂದಾಗ ಎಲ್ಲೂ ಬೇಟೆ ಸಿಗಲಿಲ್ಲ. ಬೇಟೆ ಅರಸುತ್ತ ಹೋದಾಗ ದಾರಿ ತಪ್ಪಿ ದಟ್ಡ ಕಾಡನ್ನು ಸೇರಿದಾಗ, ಅಲ್ಲಿರುವ ಕ್ರೂರ ಪ್ರಾಣಿಗಳು ಆತನನ್ನು ಸುತ್ತುವರೆದವು, ಆಗ ಬೇಡ, ಹೆದರಿ ಒಂದು ಮರವನ್ನು ಹತ್ತಿ ತುತ್ತ ತುದಿಯಲ್ಲಿ ಕುಳಿತು ಶಿವನನ್ನು ಜಪಿಸುತ್ತಾ, ಹೆದರಿಕೆಯಿಂದ ಮರದಲ್ಲಿರುವ ಎಲೆಗಳನ್ನೆಲ್ಲ ಕಿತ್ತಿ ಹಾಕುತ್ತಿದ್ದನಂತೆ. ಅವನು ಕುಳಿತ ಮರ ಬಿಲ್ವ ಪತ್ರಿಯ ಮರವಾದ್ದರಿಂದ,  ಎಲೆಗಳೆಲ್ಲಾ ಮರದ ಕೆಳಗಿರುವ ಶಿವಲಿಂಗದ ಮೇಲೆ ಬೀಳುತ್ತಿರುವುದರಿಂದ,  ರಾತ್ರಿಯಿಡೀ ಜಾಗರಣೆ ಮಾಡಿ ಬಿಲ್ವ ಪತ್ರಿಯನ್ನು ಅರ್ಪಿಸಿದ್ದು,  ಶಿವನು ಅವನ ಭಕ್ತಿಗೆ ಮೆಚ್ಚಿ ಬೇಡನನ್ನು ರಕ್ಷಿಸಿದನೆಂದು, ಅಂದಿನಿಂದ ಆ ದಿನವನ್ನು ಶಿವರಾತ್ರಿ ದಿನವನ್ನಾಗಿ ಆಚರಿಸುತ್ತಾ ಬಂದಿದ್ದಾರೆಂದು, ಶಿವ ಪುರಾಣ ಹೇಳುತ್ತದೆ..

ಪೂಜೆ ಮಾಡಲು ಕಾರಣ ಏನೇ ಇರಲಿ, ಮದುವೆಯಾಗದ  ಹೆಣ್ಣು ಮಕ್ಕಳು ಶಿವನಂತಹ ಪತಿ ದೊರೆಯಲಿ ಎಂದು, ಮದುವೆಯಾದವರು ನಮ್ಮ ಪತಿಗೆ ಆಯುರಾರೋಗ್ಯ ಭಾಗ್ಯ ಲಭಿಸಲಿ ಎಂದು, ಆಸ್ತಿಕರು ಸುಖ, ಶಾಂತಿ, ಸಮೃದ್ಧಿ ದೊರಕಲಿ ಎಂದು,  ಭಕ್ತಿಯಿಂದ ದಿನವಿಡೀ ಶಿವನಿಗಾಗಿ ಉಪವಾಸ ಮಾಡಿ, ಸಂಜೆ  ಅಭಿಶೇಕ ಮಾಡಿ ಅಲ್ಪೋಪಹಾರ ಸೇವಿಸುವರು. ಇದರಿಂದ ನಿಷ್ಕಲ್ಮಷವಾಗಿ, ಶಿವನಿಗೆ  ಬಿಲ್ವ ಪತ್ರಿಯನ್ನು ಅರ್ಪಿಸುತ್ತಾ ಪಂಚಾಭಿಷೇಕ, ಅಥವಾ  ರುದ್ರಾಭಿಶೇಕವನ್ನು ಮಾಡುವರು. ಬಿಲ್ವ ಪತ್ರಿ ಹೃದಯ ಮತ್ತು ಲಿಂಗ ಪರಮಾತ್ಮ ಆತ್ಮ ಮತ್ತು ಪರಮಾತ್ಮನ ಸಮ್ಮಿಲನ  ಎಂದು  ಹೇಳುತ್ತಾರೆ. ಜಾಗರಣೆಯೆಂದರೆ ಜಾಗೃತನಾಗಿರುವುದು ಎಂದರ್ಥ. ರಾತ್ರಿ ಎಂದರೆ ಕತ್ತಲು, ಕತ್ತಲು ಅಜ್ಞಾನದ ಸಂಕೇತ, ಜ್ಞಾನ ಬೆಳಕಿನ ಸಂಕೇತ. ರಾತ್ರಿಯೆಲ್ಲ ದೇವರ ಧ್ಯಾನ ಮಾಡಿ, ಸುಜ್ಞಾನದೆಡೆಗೆ ಹೋಗುವುದು ಅಂತ ತತ್ವಗಳು ತಿಳಿಸುತ್ತವೆ. ಅಷ್ಟೆ ಅಲ್ಲ ಪೂಜೆ ಉಪವಾಸಾದಿಗಳಿಂದ ನಮ್ಮ ಮನದೊಳಗಿರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ, ಸಕಾರಾತ್ಮಕ ಶಕ್ತಿಯನ್ನು ಮೈಗೂಡಿಸಿಕೊಳ್ಳುವುದು.
.

ಕಾಶಿ ವಿಶ್ವನಾಥ

ವೈಜ್ಞಾನಿಕವಾಗಿ ನಾವು ಆಲೋಚನೆ ಮಾಡಿದಾಗ. ಈ ಶಿವರಾತ್ರಿ ಹಬ್ಬವನ್ನು ನಮ್ಮ ಹಿರಿಯಲು ಏಕೆ ಮಾಡಿರಬಹುದೆಂದು ತಿಳಿಯುತ್ತದೆ. ಸೂರ್ಯ ಮತ್ತು ಚಂದ್ರನ ಚಲನೆಯಿಂದಾಗಿ ಕಾಲಮಾನಕ್ಕೆ ನಮ್ಮ ದೇಹ ಒಗ್ಗಿಕೊಳ್ಳಬೇಕಾಗುತ್ತದೆ. ಇನ್ನೇನು ಚಳಿಗಾಲ ಮುಗಿದು ಬೇಸಿಗೆ ಪ್ರಾರಂಭವಾಗುತ್ತದೆ. ಚಳಿಗಾಲದಲ್ಲಿ  ಶೀತ, ಕೆಮ್ಮು, ಜ್ವರದಲ್ಲಿ ಬಳಲಿದ ದೇಹ ಇನ್ನು ಬೇಸಿಗೆಗೆ ಗಟ್ಟಿಯಾಗಬೇಕು. ಒಂದು ದಿನ ಉಪವಾಸ ಮಾಡಿ ದೇಹದ ಜೀವಾಣುಗಳಿಗೆ ವಿಶ್ರಾಂತಿ ಕೊಟ್ಟು, ಮನಸಾರೆ ದೇವರ ನಾಮ ಹೇಳುತ್ತಾ ಧ್ಯಾನ ಮಾಡಿದರೆ ಯೋಗದ ಒಂದು ಬಹು ಮುಖ್ಯವಾದ ಭಾಗ, ಅದರಿಂದ ಒಂದು   ಯೋಗ್ಯವಾದ ಪ್ರತಿಫಲವನ್ನೇ ಪಡೆಯುತ್ತೇವೆ. ಜೊತೆಗೆ ದೈಹಿಕವಾಗಿ ನೀರನ್ನು ತಂದು ಲಿಂಗಕ್ಕೆ ಹಾಕುತ್ತ, ಬಿಲ್ವ ಪತ್ರಿಯಿಂದ ಅಲಂಕರಿಸುವುದರಿಂದ, ಬಿಲ್ವ ಪತ್ರಿಯ ವಾಸನೆಯಿಂದಾಗಿ ನಮಗೆ ಉಸಿರಾಟದ ತೊಂದರೆ ಹೋಗಬಹುದಲ್ಲದೆ, ಜಾಗರಣೆಯಿಂದ ಬುದ್ಧಿ ಶಕ್ತಿಯೂ ಲಭಿಸುತ್ತದೆ..

ಏನೆ ಇರಲಿ ಮಹಾ ಶಿವನ ಜಪ, ತಪ ಮಾಡುವುದರಿಂದ ನಮ್ಮ ಕಷ್ಟ ಕಾರ್ಪಣ್ಯಗಳೆಲ್ಲ ಕಳೆದು. ಜನರೆಲ್ಲ ಸುಖವಾಗಿ ಬಾಳುವಂತಾದರೆ ಸಾಕು. ರೋಗ ರುಜೀನಗಳಿಂದ ಮುಕ್ತರಾಗಿ, ಆರೋಗ್ಯವಂತ ಜೀವನ ನಡೆಸುತ್ತ, ದೇವರ ಮೇಲಿನ ನಂಬಿಕೆಯಿಂದಾದರೂ, ಧಾನ ಧರ್ಮ ಮಾಡುತ್ತ, ನ್ಯಾಯವಾಗಿ ಬದುಕಿದರೆ ಸಾಕಲ್ಲವೆ. ನಮ್ಮನ್ನೆಲ್ಲ ಕಾಪಾಡುವ ಶಕ್ತಿ ಆ ಪರಮಾತ್ಮ. ಅವನ ಹೆಸರಲ್ಲಿ ನಾವು ವರ್ಷಕ್ಕೊಂದು ದಿನ ಉಪವಾಸ ಮಾಡಿ, ಜಾಗರಣೆ ಮಾಡಿದರೆ, ಮನಸ್ಸಿಗೂ ಹಿತ, ದೇಹಕ್ಕೂ ಆರೋಗ್ಯ.

.

-ಮಧುಮತಿ ರಮೇಶ್ ಪಾಟೀಲ್

3 Responses

  1. ಪ್ರಸ್ತುತದ ಒಳ್ಳೆಯ ಲೇಖನ. ಚೆನ್ನಾಗಿ ಮೂಡಿ ಬಂದಿದೆ.ಮಧುಮತಿಯವರೆ.

  2. ನಯನ ಬಜಕೂಡ್ಲು says:

    ಧಾರ್ಮಿಕ, ಹಾಗೂ ವೈಜ್ಞಾನಿಕ ಕಾರಣಗಳನ್ನೊಳಗೊಂಡ ಶಿವಾರಾತ್ರಿಯ ವೈಶಿಷ್ಟ್ಯದ ಕುರಿತಾದ ಬರಹ ಚೆನ್ನಾಗಿದೆ.

  3. Shankari Sharma says:

    ಸಕಾಲಿಕ ವೈಶಿಷ್ಟ್ಯಪೂರ್ಣ ಲೇಖನ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: