ಗಿಡಗಳ ವೈಜ್ಞಾನಿಕ ಹೆಸರು ಅರಿಯಲು ಬಳಸಿ: PlantNet ಆಪ್

Share Button

ಸುಮಾರು ಎರಡು ವರ್ಷಗಳ ಹಿಂದಿನ  ಘಟನೆ. ನನ್ನ ಸಂಬಂಧಿಕರೊಬ್ಬರ ಮನೆಗೆ ಊಟಕ್ಕೆ ಹೋಗಿದ್ದೆ. ಊಟಕ್ಕೆ ತಯಾರಿಸಿದ್ದ ಪದಾರ್ಥಗಳಲ್ಲಿ ಸೊಪ್ಪಿನ ತಂಬುಳಿಯೂ ಇತ್ತು. ನನಗೋ ಸೊಪ್ಪಿನ ತಂಬುಳಿಯೆಂದರೆ ಪಂಚಪ್ರಾಣ. ಯಾವ ಸೊಪ್ಪಿನ ತಂಬುಳಿ ಎಂದು ವಿಚಾರಿಸಿದಾಗ ರಕ್ತಕಾಂತಿ ಸೊಪ್ಪೆಂದರು. ಮೊದಲ ಬಾರಿಗೆ ಆ ಹೆಸರು ಕೇಳಿದ್ದೆ. ಆ ಬಳಿಕ ಅವರ ಮನೆಗೆ ಹೋದಾಗಲೆಲ್ಲಾ ಆ ಸೊಪ್ಪನ್ನು ಕೇಳಿ ಮನೆಗೆ ತಂದು ತಂಬುಳಿ ಮಾಡುತ್ತಿದ್ದೆ. ಆದರೆ ಬೇರೆ ನನ್ನ ಯಾವ ಸಂಬಂಧಿಕರ ಮನೆಯಲ್ಲಿಯೂ ಈ ಸಸ್ಯದ ಬಗ್ಗೆ ಕೇಳಿದ ನೆನಪಿರಲಿಲ್ಲ. ನಾನು ಯಾಕೆ ಈ ಸಸ್ಯದ  ಬಗ್ಗೆ ಜಾಸ್ತಿ ತಿಳಿದುಕೊಂಡು ಒಂದು ಲೇಖನ ಬರೆಯಬಾರದು ಎಂಬ ತುಡಿತ ಆಯ್ತು ನೋಡಿ. ಹಲವರೊಡನೆ ಈ ವಿಚಾರ ಚರ್ಚಿಸಿದರೂ, ಸೂಕ್ತ ಮಾಹಿತಿ ಸಿಗಲಿಲ್ಲ. ಆ ಬಳಿಕ “ಸಸ್ಯ ಸಂಪತ್ತು Plants around us” ಅನ್ನುವ ಮುಖಪುಸ್ತಕದ ಪುಟದಲ್ಲಿ ಸಸ್ಯದ ಫೋಟೋ ಹಾಕಿ ಆ ಸಸ್ಯದ ಬಗ್ಗೆ ಗೊತ್ತಿರುವವರು ದಯವಿಟ್ಟು ಮಾಹಿತಿ ನೀಡಿ ಅಂತ ಪೋಸ್ಟ್ ಮಾಡಿದೆ. ಆ ಸಸ್ಯದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಯಾರೂ ನೀಡಲಿಲ್ಲ. ಆದರೆ ಓರ್ವ ಸಹೃದಯಿ PlantNet  ಅನ್ನುವ ತಂತ್ರಾಂಶದ ಬಗ್ಗೆ ಮಾಹಿತಿ ನೀಡಿದರು.

ನಮ್ಮ ಸುತ್ತಮುತ್ತ ಕಂಡುಬರುವ ಹಲವು ಸಸ್ಯಗಳು ಔಷಧಿಗಳ ಆಗರ. ಆದರೆ ನಮಗೆ ಅವುಗಳ ಔಷಧೀಯ ಗುಣಗಳ ಬಗ್ಗೆ ಅರಿವಿರುವುದಿಲ್ಲ. ನಮ್ಮ ಹಿರಿಯರು ಉಪಯೋಗಿಸುತ್ತಿದ್ದ ಸಸ್ಯಗಳ ಬಗ್ಗೆ ಅರಿವಿರುತ್ತದೆ. ಕೆಲವು ಸಸ್ಯಗಳು ವಿಷಕಾರಿಯಾಗಿರುತ್ತವೆ. ಯಾವುದಾದರೂ ಅಪರಿಚಿತ ಸಸ್ಯದ ವೈಜ್ಞಾನಿಕ ಹೆಸರು ತಿಳಿದುಕೊಳ್ಳಲು ನೆರವಾಗುವ ಆಪ್ PlantNet.  ಹಾಗಾದರೆ ಈ ಉಪಯುಕ್ತ ಆಪ್ ಬಗ್ಗೆ ತಿಳಿದುಕೊಳ್ಳೋಣ ಅಲ್ಲವೇ?

ಕೈಯಲ್ಲಿ ಮೊಬೈಲ್ ಫೋನ್(Android) ಇದ್ದರಾಯಿತು. ನೇರವಾಗಿ ಗೂಗಲ್ ಪ್ಲೇ ಸ್ಟೋರಿಗೆ ಹೋಗಿ download ಮಾಡಿ ಮೊಬೈಲಿನಲ್ಲಿ ಅಳವಡಿಸಿಕೊಂಡರಾಯಿತು. ನಂತರ ಆ ಅಪ್ಲ್ಲಿಕೇಶನನ್ನು ತೆರೆದು, ಅಲ್ಲಿರುವ ಕ್ಯಾಮೆರಾ ಚಿಹ್ಞೆಯನ್ನು ಒತ್ತಿದಾಗ ಬರುವ ಪರದೆಯಲ್ಲಿ  New Observation  ಕ್ಯಾಮೆರಾ (camera) ಮತ್ತು ಗ್ಯಾಲರಿ (gallery) ಎಂಬ ಎರಡು ಆಯ್ಕೆಗಳು ಬರುತ್ತವೆ. Allow google to access your device ಎಂದು ಹೇಳಿ allow, deny ಎಂಬ ಎರಡು ಆಯ್ಕೆ ಬಂದಾಗ allow ಆಯ್ಕೆ ಒತ್ತಬೇಕು. ಮೊದಲೇ ಸಸ್ಯದ ಚಿತ್ರ ತೆಗೆದಿದ್ದರೆ, ಗ್ಯಾಲರಿ ಆಯ್ಕೆ ಮಾಡಿ ಬೇಕಾದ ಚಿತ್ರವನ್ನು ಆರಿಸಬೇಕು. ಆಗಲೇ ಗಿಡದ ಚಿತ್ರ ತೆಗೆಯುವುದಾದರೆ, ಕ್ಯಾಮೆರಾ ಆಯ್ಕೆ ಮಾಡಿ, ಗಿಡದ ಚಿತ್ರ ತೆಗೆಯಬೇಕು. ಆಮೇಲೆ ಸರಿ (ü‍) ಮತ್ತು (×) ಆಯ್ಕೆ ಬಂದಾಗ ಸರಿ (ü‍)  ಆಯ್ಕೆ ಮಾಡಬೇಕು. ಗಿಡದ ಯಾವ ಭಾಗ ಅಂದರೆ ಎಲೆ (leaf)/ ಹೂವು (flower)/ ಹಣ್ಣು (fruit)/ ಬಾರ್ಕ್(Rark)/Habit/Nothing ಇವುಗಳಲ್ಲಿ ಒಂದನ್ನು ಆರಿಸಿ  ಅಪ್ಲೋಡ್ ಮಾಡಿದ ಸ್ವಲ್ಪ ಹೊತ್ತಿನಲ್ಲಿ ಗಿಡದ ವೈಜ್ಞಾನಿಕ ಹೆಸರು, ಆದು ಯಾವ ಸಸ್ಯ ಕುಟುಂಬಕ್ಕೆ ಸೇರಿದೆ ಅನ್ನುವ ವಿವರಣೆಗಳು ಸಿಗುತ್ತವೆ. ವೈಜ್ಞಾನಿಕ ಹೆಸರು ಸಿಕ್ಕಿತೆಂದರೆ, ಆ ಬಳಿಕ ಆ ಹೆಸರನ್ನು ಗೂಗಲ್ ಮಹಾಶಯನಿಗೆ ನೀಡಿದರೆ, ಅಂತರ್ಜಾಲದಲ್ಲಿ ಆ ಸಸ್ಯದ ಬಗ್ಗೆ ಇರುವ ಮಾಹಿತಿಗಳ ಲಿಂಕುಗಳು ಸಿಗುತ್ತವೆ.

ತಂಬುಳಿಯಲ್ಲಿ ಬಳಸಿದ ರಕ್ತಕಾಂತಿ ಸೊಪ್ಪಿನ ಗಿಡದ ವೈಜ್ಞಾನಿಕ ಹೆಸರು ತಿಳಿಯಲು ಉತ್ಸುಕಳಾಗಿದ್ದ ನಾನು, ಮೊತ್ತಮೊದಲಿಗೆ ಈ ಆಪ್ ಬಳಸಿದೆನು.  ನಾನು ಹುಡುಕ ಹೊರಟ ಸಸ್ಯದ ಹೆಸರು ರಿವಿನಾ ಹುಮಿಲಿಸ್ (Rivina humilis). ಆ ಸಸ್ಯದ ಬಗ್ಗೆ ಜಾಲಾಡಿದಾಗ ನನಗೆ ಸಿಕ್ಕಿದ ಮಾಹಿತಿಗಳಿಂದ ನಾನು ಗೊಂದಲಕ್ಕೆ ಬಿದ್ದೆ. ಕೆಲವು ಲೇಖನಗಳಲ್ಲಿ ಆ ಸಸ್ಯದ ಎಲೆಗಳು ಔಷಧಿಯುಕ್ತವಾದುದರಿಂದ ತಿನ್ನಬಹುದು ಎಂದಿದ್ದರೆ ಅನೇಕ ಲೇಖನಗಳಲ್ಲಿ ಆ ಸಸ್ಯ ಅತಿ ವಿಷಕಾರಿ ಎಂದಿತ್ತು. ಯಾರಿಗಾದರೂ ಸಂಶೋಧನೆಯಲ್ಲಿ ಆಸಕ್ತಿ ಇದ್ದರೆ ಈ ಗಿಡದ ಬಗ್ಗೆ ಅಭ್ಯಸಿಸಬಹುದು.

-ಡಾ.ಕೃಷ್ಣಪ್ರಭಾ.ಎಂ., ಮಂಗಳೂರು

6 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ ಮೇಡಂ. ವಿಭಿನ್ನ ವಾದ ಬರಹ. ಮೊದಲು ಓದುವಾಗ ಸಸ್ಯದ ಕುರಿತಾದ ಲೇಖನ ಅಂದ್ಕೊಂಡೆ, ಓದುತ್ತಾ ಸಾಗಿದಂತೆ ಅದರಲ್ಲೇ ಮೊಬೈಲ್ನಲ್ಲಿ ಆ ಲೇಖನಕ್ಕೆ ಸಂಬಂಧ ಪಟ್ಟ ವಿವರ ಪಡೆಯಲು ಸಹಾಯ ಆಗುವಂತಹ app ನ ವಿವರಣೆ. Nice one

  2. Shankari Sharma says:

    ಉತ್ತಮ ಮಾಹಿತಿಯ ಸೊಗಸಾದ ಬರಹ.

  3. jyothi says:

    Good information..Thanks for sharing

  4. BASAVARAJ HUBBALLI says:

    ಕನ್ನಡದಲ್ಲಿ ಆರಿ ಗಿಡ ಅಂತ ನಾವು ಕರೀತೀವಿ. ಹೊಲದಲ್ಲಿ ಇದರ ಬುಡದಲ್ಲಿ ದೇವರ ಪೂಜೆ ಮಾಡ್ತೇವೆ ಆದ್ರೆ ಇದು ಬನ್ನಿ (ಶಮಿ ) ಗಿಡವಲ್ಲ. ಇದರ ಹೆಸರನ್ನು ಇಮೇಜ್ ಜೊತೆ ಕಳಿಸಿ ಕೊಡಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: