ಶಿಕ್ಷಣಕ್ಕೆ ವ್ಯಾಪಾರೀಕರಣ ಸರಿಯೇ ?
ವಿದ್ಯೆ ಒಂದು ಸಂಪತ್ತು. ಅದನ್ನು ಈಗ ಬೇಕಾಬಿಟ್ಟಿ ಮಾಡಿಕೊಂಡು, ಅದಕ್ಕಿರುವ ಗೌರವವನ್ನು ಕಳೆಯುತ್ತಾ ಬಂದಿಹರು. ವಿದ್ಯೆ ಪೂಜ್ಯವಾದುದು . ವಿದ್ಯೆಯನ್ನು ಕಲಿಯಬೇಕೇ ವಿನ: ಕದಿಯಬಾರದು. ಅದನ್ನು ಕದಿಯುವುದು, ಹಣಗಳಿಸುವುದು ಪಾಪದಕೆಲಸ ಎನ್ನಬಹುದು ಅಲ್ಲವೇ?
ಇಂದಿನ ವಿದ್ಯಾರ್ಥಿಗಳು ಮುಂದಿನ ಆದರ್ಶಪ್ರಜೆಗಳು. ಕಾಲ ಮುಂದುವರೆದಂತೆ ಶಿಕ್ಷಣ ವ್ಯವಸ್ಥೆಯು ಹಣ ಲೂಟಿಮಾಡಲು ನಿಂತಿದೆ. ಹೇಗೆಂದರೆ ಪ್ರತಿಷ್ಠಿತ ಶಾಲೆಯಲ್ಲಿ ನರ್ಸರಿ, ಎಲ್.ಕೆಜಿ, .ಯು.ಕೆಜಿಗೆ ಸುಮಾರು ರೂ.40,000/- ಹೆಚ್ಚು ಹಣ ತೆತ್ತು, ವಾರ್ಷಿಕವಾಗಿ ಭರಿಸುವುದನ್ನು ನಾವು ಕಾಣುವೆವು. ತಮ್ಮ ಮಕ್ಕಳನ್ನು ಶಾಲೆಗೆ ಹಾಕಿ ಪ್ರತಿಷ್ಠೆಯನ್ನು ಎತ್ತಿ ತೋರಿಸುವರು. ಇನ್ನೂ ಸರಿಯಾಗಿ ಮಾತೇ ಆಡದ ಕಂದಮ್ಮಗಳಿಗೆ ಶಾಲೆ ಎಂಬ ಬಂಧನ ಸುರು ಮಾಡುವರು. ಈ ರೀತಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಹೆಸರಿನಲ್ಲಿ ಹಣ ಲೂಟಿ ಮಾಡುವು ಎಷ್ಟು ಸರಿ ? ಕೇವಲ ಎಲ್ ಕೆ.ಜಿ .ಗೆ ಪ್ರವೇಶ ಪಡೆಯಲು ನಗರಗಳಲ್ಲಿ ಅಂದಾಜು 40,000 ರೂ ತೆರಬೇಕಾದರೆ, ಮುಂದಿನ ದಿನಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಎಷ್ಟು ಹಣ ಬೇಕಾಗಬಹುದು? ಶಿಕ್ಷಣ ಎಂಬುದು ವ್ಯಾಪಾರ ಆಗಿದೆ ಅನಿಸುತ್ತಿದೆಯಲ್ಲವೇ?
ಈಗೀಗ ಬೇಬಿಸಿಟ್ಟಿಂಗ್ , ಪ್ರೀನರ್ಸರಿ ಇತ್ಯಾದಿ ಹೆಸರಿನಲ್ಲಿ ಡೊನೇಶನ್ ಹಾವಳಿ ವಿಪರೀತವಾಗಿದೆ. ನಮ್ಮ ಬಾಲ್ಯದ ಕಾಲದಲ್ಲಿ ಮನೆಯಲ್ಲಿ ಅಮ್ಮನೇ ಮೊದಲಗುರು. ನಗರಪರದೇಶಗಳಲ್ಲಿ ಗಂಡಹೆಂಡತಿ ಇಬ್ಬರೂ ಮನೆಯಿಂದ ಹೊರಗೆ ದುಡಿಯಲು ಹೋಗುವವರು ಜಾಸ್ತಿ. ಹಾಗಾಗಿ ತಮ್ಮ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲದಂತಾಗುತ್ತದೆ. ಕುಟುಂಬದ ಹಿರಿಯರಿದ್ದರೂ ಅವರು ದೂರದ ಹಳ್ಳಿಯಲ್ಲಿ ಇರುವ ಸಾಧ್ಯತೆಗಳೇ ಹೆಚ್ಚು.
ಸಣ್ಣ ಮಕ್ಕಳಿಗೆ .ವಿಪರೀತ ಮನೆಕೆಲಸ (homework) ಪಠ್ಯಪುಸ್ತಕಗಳ ಹೊರೆ ಬೇರೆ ಇದ್ದು ಅದನ್ನು ಎತ್ತಿಕೊಳ್ಳಲು ಆಗದೆ ಅವರು ಪಡುವಕಷ್ಟ ಅಷ್ಟಿಷ್ಟಲ್ಲ . ಇದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡಬಲ್ಲುದು. ‘ಮಕ್ಕಳ ತಲೆಯು ವಿಷಯ ತುಂಬುವ ಗೋಣಿಚೀಲ ಆಗಬಾರದು. .ಅದು ಭತ್ತ ಬೆಳೆಯುವ ಹೊಲ ಆಗಬೇಕೆಂದು‘ ಕುವೆಂಪುರವರು ಹೇಳಿದ್ದಾರೆ.
ಎಜುಕೇಶನ್ ಎಲ್ಲರಿಗೂ ತುಂಬಾ ಮುಖ್ಯ. ಸಮಾಜದೊಂದಿಗೆ ಬೆರೆಯಲು ಮತ್ತು ಹಣಗಳಿಸಲು. ಪ್ರತಿಯೊಂದನ್ನು ಹಣದ ಮೂಲಕ ಅಳೆಯುವ ಈ ದಿನಗಳಲ್ಲಿ ಹಣ ಇಲ್ಲದವರನ್ನು ಯಾರೂ ಗಮನಿಸುವುದಿಲ್ಲ ಹಾಗೂ ಗೌರವಿಸುವುದಿಲ್ಲ ಎಂಬುದು ವಾಸ್ತವ. ಮಾತೇ ಬಾರದ ಮಕ್ಕಳನ್ನು ಆ ಪ್ರತಿಷ್ಠಿತ ಶಾಲೆಗೆ ಸೇರಿಸಿ ಏನು ಸಾಧಿಸುವರು ? ತಮ್ಮ ಮಕ್ಕಳು ಕೆಲವು ಆಯ್ದ ಶಿಕ್ಷಣ ಸಂಸ್ಥೆಯಲ್ಲಿ ಓದಿದರೆ ಮಾತ್ರ ಯಶಸ್ವಿಯಾಗುವರೆಂಬ ಭ್ರಮೆಯಿಂದ ಕೆಲವು ಪೋಷಕರು, ತಮಗೆ ಆರ್ಥಿಕವಾಗಿ ಭರಿಸಲು ಕಷ್ಟವಾದರೂ, ಸಾಲ ಮಾಡಿಯಾದರೂ ಅಂತಹ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವುದನ್ನು ಕಾಣುತ್ತೇವೆ. ಆದರೆ, ಎಲ್ಲಾ ಮಕ್ಕಳು ಇದಕ್ಕೆ ಹೊಂದಿಕೊಳ್ಳದೆ ಮಂಕುಬಡಿದಂತಾಗುವುದೂ ಇದೆ.
ಪುಸ್ತಕದ ಹುಳದಂತೆ ಇದ್ದರೆ ಲೋಕಜ್ಞಾನವೇ ಇರುವುದಿಲ್ಲ . ಬೇಕಾಬಿಟ್ಟಿ ಬೆಳೆದು ನಮ್ಮಲ್ಲಿ ದುಡ್ಡಿದೆ ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೆಲವು ವಿದ್ಯಾರ್ಥಿಗಳು ಉಡಾಫೆಯಾಗಿ ವರ್ತಿಸುವುದೂ ಇದೆ. ಓದಿನ ಉದ್ದೇಶ ಜ್ಞಾನಾರ್ಜನೆಯಾಗಿದ್ದರೆ ಚೆನ್ನ. ಆದರೆ ಕೇವಲ ಉದ್ಯೋಗಕ್ಕಾಗಿ ಓದುವಂತಹ ಸನ್ನಿವೇಶ ಸೃಷ್ಟಿಯಾಗಿರುವುದು ಈಗಿನ ವ್ಯವಸ್ಥೆಯ ದೌರ್ಬಲ್ಯ. ಸಣ್ಣ ಮಕ್ಕಳ ಸಾಮರ್ಥ್ಯಕ್ಕೆ ಮೀರಿ, ಅವರನ್ನು ಅನಾವಶ್ಯಕವಾದ ಪೈಪೋಟಿಗೆ ಒಡ್ಡಿಕೊಳ್ಳುವಂತ ಶಿಕ್ಷಣ ವ್ಯವಸ್ಥೆಯ ಬದಲು, ಮನೆಯಲ್ಲಿ ಅವರನ್ನು ಸರಿಯಾದ ಕ್ರಮದಲ್ಲಿ ಬೆಳೆಸಿ ಸಂಸ್ಕಾರ ಕೊಟ್ಟರೆ ಆ ಮಕ್ಕಳು ಉತ್ತಮ ಪ್ರಜೆ ಆಗುವುದರಲ್ಲಿ ಸಂಶಯ ಇಲ್ಲ .
-ಆಶಾ ನೂಜಿ
ಈಗಿನ ವಿದ್ಯಾಭ್ಯಾಸದ ದುರ್ದೆಸೆಗೆ ಹಿಡಿದ ಕನ್ನಡಿ..ಸಕಾಲಿಕ ಲೇಖನ.
ಸತ್ಯವಾದ ಮಾತು. ಶಿಕ್ಷಣದ ಗುಣ ಮಟ್ಟವೂ ಇತ್ತೀಚಿನ ದಿನಗಳಲ್ಲಿ ಕುಸಿದಿದೆ .
ಅರ್ಥಪೂರ್ಣ ,ಚಿಂತನಾರ್ಹ ಬರಹ
ಆಶಕ್ಕ, ತಾವು ಬರೆದುದು ಖಂಡಿತ. ಪ್ರತಿಯೊಬ್ಬರೂ ವಿವೇಚಿಸಬೇಕಾದ ವಿಚಾರ. ಇವೆಲ್ಲವನ್ನು ವಿಚಾರವಂತರು ಅವಕಾಶ ಸಿಕ್ಕಿದಾಗೆಲ್ಲಾ ಚರ್ಚಿಸಿದರೆ ಜನರಲ್ಲಿ ಒಂದಿಷ್ಟು ಜಾಗೃತಿ ಮೂಡಬಹುದೇನೊ ಎಂಬುದು ನನ್ನ ಆಶಾಭಾವನೆ. ನಾನು ಸಹ ಈ ಹಿಂದೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೀಗೆ ಒಂದಿಷ್ಟು ಚಿಂತನೆಗಳನ್ನು ನಿಮ್ಮ ಮುಂದಿರಿಸಿದ್ದೆ.ಇವೆಲ್ಲಾ ಕೇವಲ ಓದಿ ಹಾಗೇ ಬಿಡಬಾರದು ಎಂಬುದು ನನ್ನ ಬಯಕೆ.
ಬಿಡಬಾರದು ಹೌದು ,ಆದರೆ .ಇದನ್ನು ಅಷ್ಟು ಸುಲಭದಲ್ಲಿ .ಬಗೆಹರಿಸಲು .ಸಾಧ್ಯ ವಿಲ್ಲ ಎಂದು .ನನ್ನ ಭಾವನೆ .ನಾವು .ಸುಮಾರು ದೂರ ಬಂದು ಮುಟ್ಟಿರುವೆ ಎಂದು .ನನ್ನ ಆಪ್ತರು ಹೇಳಿದರು .ನೀನು ಬರೆದಷ್ಟು ಸುಲಭವಿಲ್ಲ ಎಂದು ನನ್ನ ಹಿಯಾಳಿಸಿದರು .
ಓದು ವುದು ಮಾತ್ರ .ಚರ್ಚಿಸಲು .ಯಾರೂ ಇಲ್ಲ ಅಣ್ಣಾ .ನನಗೆ ಈ ಮಕ್ಕಳ ವಿಧ್ಯಾಭ್ಯಾಸ ದಬಗ್ಗೆ ನೋವಾಯಿತು ಬರೆದೆ ಅಷ್ಟೆ .ಎಲ್ಲರೂ ನನ್ನ ಬೈದಿರುವರು ,ನಾನು ಮಾತ್ರ ಅದನ್ನು ಮನಸ್ಸಿಗೆ ಹಚ್ಚಿಲ್ಲ ಷ್ಟೆ