ತಂತ್ರ-ಜ್ಞಾನದ ದಾಸರಾಗುವ ಮುನ್ನ..
ಪರೀಕ್ಷೆಗೆ ಸರಿಯಾಗಿ ಓದು ಎಂದು ಅಪ್ಪ ಗದರಿಸಿದ್ದಕ್ಕೆ ಮಗನ ಆತ್ಮಹತ್ಯೆ..
ಪ್ರೀತಿಸಿದವನ ಜೊತೆ ಮದುವೆ ಮಾಡಿ ಕೊಡದ್ದಕ್ಕೆ ಮಗಳ ಆತ್ಮಹತ್ಯೆ.
ಶಾಪಿಂಗ್ ಗೆ ಗಂಡ ಕರೆದುಕೊಂಡು ಹೋಗಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ….
ಹೀಗೆ ಸಣ್ಣಪುಟ್ಟ ಕಾರಣಕ್ಕೆ ಜೀವನದಿಂದ ಜಿಗುಪ್ಸೆಗೊಂಡು ಆತುರದ ನಿರ್ಧಾರ ಕೈಗೊಳ್ಳುವ ಹಲವರ ಬಗ್ಗೆ ನಾವು ಪತ್ರಿಕೆಗಳಲ್ಲಿ ದಿನನಿತ್ಯ ಓದುತ್ತಿರುತ್ತೇವೆ. ಇಂತಹ ಘಟನೆಗಳ ಬಗ್ಗೆ ಓದುವಾಗ ನಮ್ಮಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ..ಮಾನಸಿಕವಾಗಿ ನಾವೇಕೆ ಇಷ್ಟು ದುರ್ಬಲರಾಗುತ್ತಿದ್ದೇವೆ?
ತಂತ್ರಜ್ಞಾನವೆಂಬುದು ಪ್ರಪಂಚವನ್ನು ನಮ್ಮ ಕೈಯಲ್ಲಿ ತಂದಿರಿಸಿದೆ ಒಂದು App ಡೌನ್‌ಲೋಡ್ ಮಾಡಿಕೊಂಡರೆ ಸಾಕು ಅದರಿಂದ ಮೊಬೈಲ್,ಟಿವಿ ರೀಚಾರ್ಜ್ ಮಾಡಬಹುದು. ಕರೆಂಟ್, ವಾಟರ್ ಬಿಲ್ ಗಳನ್ನು ಮನೆಯಲ್ಲೆ ಕುಳಿತು ತುಂಬಬಹುದು. ಬ್ಯಾಂಕಿನ ಎಲ್ಲ ವಹಿವಾಟುಗಳನ್ನು ಮೊಬೈಲ್ ಫೋನ್ಗಳ ಮೂಲಕವೇ ಮಾಡಬಹುದು. ಆತ್ಮೀಯರಿಗೆ ಭೇಟಿಯಾಗಬೇಕೆಂದರೆ ಅವರು ಇರುವಲ್ಲಿಗೆ ಹೋಗಬೇಕಾಗಿಲ್ಲ ಒಂದು video call ಮಾಡಿದರೆ ಸಾಕು ಅವರು ಕಣ್ಣ ಮುಂದೆಯೇ ಪ್ರತ್ಯಕ್ಷವಾಗಿಬಿಡುತ್ತಾರೆ.
ತರಕಾರಿ ತರಲು ಸಂತೆಗೆ ಹೋಗಬೇಕಾಗಿಲ್ಲ ಅದನ್ನು ಆರ್ಡರ್ ಮಾಡಿದರೆ ಮನೆಗೆ ಬಂದು ಕೊಟ್ಟಿ ಹೋಗುತ್ತಾರೆ. ಮೊದಲಿನ ದಿನಗಳಲ್ಲಿ ಹಬ್ಬ ಬಂತೆಂದರೆ ಕುಟುಂಬದ ಎಲ್ಲರು ಒಂದೆಡೆ ಸೇರಿ ಹಬ್ಬ ಆಚರಿಸುತ್ತಿದ್ದರು ಈಗ ಹಬ್ಬ ಬಂತೆಂದರೆ ಎಲ್ಲರ ಕೈಯಲ್ಲಿ ಮೊಬೈಲ್ ಫೋನ್‌ಗಳು ಇದ್ದು ಎಲ್ಲರು ತಮ್ಮ ಆತ್ಮೀಯರಿಗೆ ಸಂದೇಶದ ಮೂಲಕ ಶುಭಾಶಯ ಕೋರುವುದರಲ್ಲಿ ಮಗ್ನರಾಗಿರುತ್ತಾರೆ. ಈ ತಂತ್ರಜ್ಞಾನವೆಂಬುದು ಪ್ರಪಂಚವನ್ನೆ ಮನೆಯಲ್ಲಿ ತಂದಿದೆ ಹಾಗೇ ಮನೆಯಲ್ಲಿನ ಮನಸ್ಸುಗಳನ್ನು ದೂರ ಮಾಡುತ್ತಿರುವುದು ಕಟು ಸತ್ಯ..
ನಾವು ಈ ತಂತ್ರಜ್ಞಾನದ ಬೆನ್ನು ಹತ್ತಿ ಆತ್ಮೀಯರಿಂದ ದೂರಾಗುತ್ತಿದ್ದೇವೆ, ದುಃಖದಲ್ಲಿದ್ದಾಗ ಜೊತೆಗಿದ್ದು ಸಾಂತ್ವನ ಹೇಳಿ ಬೆನ್ನು ಸವರಿ ಧೈರ್ಯ ತುಂಬಿ ಮನಸ್ಸನ್ನು ಹಗುರ ಮಾಡುವ ಹೃದಯಗಳು ಈ busy ಲೈಫ್ ನಲ್ಲಿ ಸಿಗೊದು ವಿರಳ, ಈಗಿನ ದಿನಗಳಲ್ಲಿ ನಾವು ದುಃಖದಲ್ಲಿದ್ದಾಗ ಬಹಳ ಎಂದರೆ ವಾಟ್ಸಾಪ್ ಗೆ ಸ್ನೇಹಿತರಿಂದ ‘Be brave man’ ಎಂಬ ಒಂದು ಮೆಸೇಜ್ಅನ್ನು ನಿರೀಕ್ಷಿಸಬಹುದು ಅಷ್ಟೆ….
ಬದುಕಿನ ಹೋರಾಟದ ಈ ಪಯಣದಲ್ಲಿ ನಾವು ಮನೆಯವರೊಂದಿಗೆ , ಆತ್ಮೀಯರೊಂದಿಗೆ ಹೆಚ್ಚಿನ ಸಮಯ ಕಳೆಯಬೇಕಾಗಿದೆ. ಎಷ್ಟು ತಂತ್ರಜ್ಞಾನ ಮುಂದುವರೆದರು ಹೃದಯಗಳಿಗೆ ಬೆಸುಗೆ ಹಾಕುವುದು ಪ್ರೀತಿ ಮಾತ್ರ, ಹಿಂದೆ ಅಜ್ಜಿ ಹೇಳುತ್ತಿದ್ದ ಕಥೆಗಳನ್ನು ನಾವು ಮಕ್ಕಳಿಗೆ ಹೇಳಬೇಕಾಗಿದೆ. ಸಾಮಾಜಿಕ ಜಾಲತಾಣಗಳು ಬದುಕಿಗೆ ಮಾರಕವೆಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಾಗಿದೆ. ದುರ್ಬಲ ಮನಸ್ಸುಗಳನ್ನು ಸದೃಢ ಮನಸ್ಸುಗಳಾಗಿ
ಪರಿವರ್ತಿಸಬೇಕಾಗಿದೆ..
-ರಾಜೇಶ ಎಸ್ ಜಾಧವ, ಬಾಗಲಕೋಟ.
Superb. ಸತ್ಯವಾದ ಮಾತು. ಮಾನವ ಸಂಬಂಧಗಳ ಕೊಂಡಿ ಕಳಚುವಲ್ಲಿ ಇವತ್ತು ತಂತ್ರಜ್ಞಾನದ್ದೇ ಬಹಳ ದೊಡ್ಡ ಕೈವಾಡ . ಆತ್ಮೀಯತೆ , ಪ್ರೀತಿ, ಬಾಂದವ್ಯ ಎಲ್ಲವೂ ಇವತ್ತು ಮೊಬೈಲ್ ಎಂಬ ಸಣ್ಣ ಪೆಟ್ಟಿಗೆಯೊಳಗೆ ಬಂಧಿಯಾಗಿವೆ
ಸರಿ, ತಂತ್ರಜ್ಞಾನದ ಬಳಕೆಯಿಂದ ಈಗ ಎಲ್ಲಾ ಆವಶ್ಯಕತೆಗಳನ್ನು ಕೂತಲ್ಲೇ ಪೂರೈಸಬಹುದು, ನಡೆಯುವ ಅಗತ್ಯವಿಲ್ಲ. ಹೀಗೆ ಮುಂದುವರಿದರೆ ಇನ್ನೂ ಏನೇನೋ ಕಾಣಬೇಕಾಗಬಹುದು, ಕಲ್ಪನಾತೀತ ಸಂಗತಿಗಳು,