‘ಅವರು ನಿಜವೆಂದೇ ನಂಬಿದರು’

Share Button
Dhananjya Kumble

ಧನಂಜಯ ಕುಂಬ್ಳೆ

ಮಂಗಳೂರು ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀ  ಧನಂಜಯ ಕುಂಬ್ಳೆ ಅವರು ಭರವಸೆಯ  ಸಾಹಿತಿ. ಮುದ್ದಣ ಕಾವ್ಯ ಪ್ರಶಸ್ತಿ ಮೊದಲುಗೊಂಡು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ.  ಸರಳ ಸಜ್ಜನಿಕೆಯ ಕುಂಬ್ಳೆಯವರ ಕವಿತೆ “ಅವರು ನಿಜವೆಂದೇ ನಂಬಿದರು” (ಏಕಲವ್ಯನ ಕುರಿತು) ಇತ್ತೀಚೆಗೆ ಕಾಸರಗೋಡಿನಲ್ಲಿ ನಡೆದ  ದಕ್ಷಿಣ ಭಾರತೀಯ ಬರಹಗಾರರ ಬಹುಭಾಷಾ ಸಮ್ಮೇಳನದಲ್ಲಿ ವಾಚಿಸಲು ಆಯ್ಕೆಯಾಗಿತ್ತು. ಇದನ್ನು ಶ್ರೀಮತಿ  ಜಯಶ್ರೀ ಬಿ. ಕದ್ರಿಯವರು ಇಂಗ್ಲಿಷ್ ಗೆ ಅನುವಾದಿಸಿದ್ದರು. ಕವಿತೆ ಹಾಗೂ ಅನುವಾದ ಇಲ್ಲಿದೆ.
.
ಅವರು ನಿಜವೆಂದೇ ನಂಬಿದರು
ನಾನು ಮೂರ್ತಿಯನು ಎದುರಿಟ್ಟು
ಅದು ಕಲಿಸಿದಂತೆ ಕಲಿತೆ ಎಂದು
ಅಸಲಿಗೆ ನಾನು ಕಲಿತದ್ದು
ಹಣ್ಣಿಗೆ ಎಸೆದೆಸೆದು ಕಲ್ಲ
.
ಅವರು ವಿಲವಿಲನೆ ಮಿಸುಕಾಡಿ
ಸ್ತಬ್ಧವಾದ ನನ್ನ ಬಲ ಬೆರಳನ್ನು
ಗುರುದಕ್ಷಿಣೆಯೆಂದೇ ಬಗೆದರು
ಅದು ನನ್ನವರ ರಕ್ಷಣೆಗೆ
ನಾನಾಡಿದ ನಾಟಕವೆಂದು ತಿಳಿಯದೆ
.
ಎಲ್ಲರೂ ನನ್ನಂತೆ ಮುಂದೊಂದು ದಿನ ಕಲಿತಾರು
ಎಂಬ ಯೋಚನೆಯೇ ಬರದಂತೆ
ಸಂಕಟವಾದರೂ ಗೆದ್ದೆ
ಮತ್ತೊಂದು ಖಾಂಡವದಹನ ತಪ್ಪಿತು
ಅಸಲಿಗೆ ನಾನೊಬ್ಬ ಎಡಚನಿರಬಹುದೆಂಬ
ಗುಮಾನಿಯೂ ಬಂದಿಲ್ಲ ಬಚಾವು
.
ಕೌರವನ ಸ್ನೇಹ ಮಾಡಿದೆನೆಂದೇ ಬಗೆದರು
ಅದು ಹಿಡಿಂಬೆಯ ಹಿಂಡಿ ಕಾಡಲ್ಲೆ ಬಿಟ್ಟು
ಬೆಳೆದ ಬರ್ಬರೀಕನ ಆಹುತಿ ಪಡೆದ
ಭೀಮಬಲಕ್ಕಿಟ್ಟ ಬೆಂಕಿ ಎಂದು
ಬಿಸಿಮುಟ್ಟುವ ತನಕ ತಿಳಿಯಲಿಲ್ಲ

.

ಜಿಂಕೆಯಂತೆ ಕಂಡ ಬೆರಳಿಗೆ ಗುರಿಯಿಟ್ಟು ಹೊಡೆದ
ಬೇಡ ಎಂದೇ ಇವರು ನಂಬಿದ್ದಾರೆ ಈಗಲೂ
ನಿಜದಲ್ಲಿ ಅದು ಮರ್ಮಕ್ಕೆ ಕೊಟ್ಟ ಪೆಟ್ಟು
ಬಾಣವದು ನಮ್ಮ ಎದೆಯುರಿಯ ಕಟ್ಟು

–  ಧನಂಜಯ ಕುಂಬ್ಳೆ
Jayashree Kadri

ಜಯಶ್ರೀ ಬಿ. ಕದ್ರಿ

They believed it to be truth 
That I learnt it in front of the statue
In obsequious worship
Not knowing  that 
I learnt it 
By throwing stones at 
Tandem at the tree
.
They assumed that 
The right thumb 
My right thumb 
Which became numb 
After writing in pain 
To be gurudakshina 
Not knowing it to be 
A drama enacted to save my tribe 
.
My pain and anguish, a victory 
Not even a trace was left for them 
To think that many
Like me, will learn 
That I did this
To protect yet another Khandavavana
Thank Gos they didn’t  even suspect
That I might be a leftie 
.
They thought 
That I paired with the Kouravas
Without knowing that
It was smouldering fire
In retaliation for
Barbarika’s sacrifice
.
They believed
That the  hunter who shot the toe 
Mistook it to be doe
Without knowing that
It is an arrow of fire
Our burning ire  
.
    Translated by : Jayashree B Kadri. 
.

5 Responses

  1. ಪುರಾಣ ಪಾತ್ರವೊಂದನ್ನು ಬಹಳ ಶಕ್ತಿಯುತ ಕವಿತೆಯನ್ನಾಗಿಸುವ ಸೊಗಸು ಮತ್ತು ಅಷ್ಟೇ ಸುಂದರ ಇಂಗ್ಲೀಷ್ ತರ್ಜುಮೆ – ತಂಬಾ ಇಷ್ಟವಾದ ಓದು.

  2. Anantha Indaje says:

    ಆರ್ಗೊ ಬಲಿ ಎನ್ನಣುಗನ ಬೆರಳ್…, ಬಲಿಯಕ್ಕೆ ಆ ಪಾಪಿಯ ಕೊರಳ್….!! ಅಂದಿದ್ದ ಮಾತೃವಚನದ ಹಿಂದಿನ ಭಾವ ಬಯಲಾಯ್ತು ನಿಮ್ಮ ಕವನ ಹಾಗೂ ಭಾಷಾಂತರದ ಭಾವದಿಂದ…..!!
    ನಿಜದಲ್ಲಿ ಅದು ಮರ್ಮಕ್ಕೆ ಕೊಟ್ಟ ಪೆಟ್ಟು….!!!

  3. Veeru Sharada Pradeep says:

    ಎನ್ನ ಮಗನ ಬೆರಳು ಆ ದ್ರೋಣನ ಕೊರಳು ..

  4. Hema says:

    ‘ಬೆರಳಿಗೆ -ಕೊರಳ್’ ಎಂಬ ನುಡಿಗಟ್ಟನ್ನು ಕೇಳಿ ಗೊತ್ತಿತ್ತು, ಆದರೆ ಇದುವರೆಗೆ ಅದರ ಗೂಢಾರ್ಥ ಗೊತ್ತಿರಲಿಲ್ಲ. ಕನ್ನಡದಲ್ಲಿ ಸೊಗಸಾಗಿ ನಿರೂಪಿಸಿದ ಶ್ರೀ ಧನಂಜಯ ಕುಂಬ್ಳೆ ಹಾಗೂ ಉತ್ತಮವಾಗಿ ಅನುವಾದಿಸಿದ ಶ್ರೀಮತಿ ಜಯಶ್ರೀ.ಬಿ.ಕದ್ರಿ ಅವರಿಗೆ ಧನ್ಯವಾದಗಳು.

  5. ನಯನಾ ಭಿಡೆ.... says:

    ಓದಿ ಋಷಿಯಾಯಿತು……
    ತರ್ಜುಮೆಯೂ ಸಹ….thanks….

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: