ಮನಸ್ಸಿನ ಕನವರಿಕೆ. . . .
ಅಂದೊಂದು ದಿನ ರಾತ್ರಿ ಆಫೀಸ್‌ನಿಂದ ಮನೆಗೆ ಹೋಗುವ ಸಮಯ. ಕಾರಿನಲ್ಲಿ ಹೋಗುತ್ತಿರುವಾಗ ರಸ್ತೆಯ ಅಂಚಿನಲ್ಲಿ ವೃದ್ಧ ಜೋಡಿಯೊಂದು ನಡೆದುಕೊಂಡು ಹೋಗುತ್ತಿದ್ದರು. ಅಜ್ಜ ತನ್ನ ಅಂಗವಿಕಲ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದ. ಆ ಜೋಡಿಯನ್ನು ನೋಡಿ ಒಂದು ಕ್ಷಣ ಮನಸ್ಸಿನಲ್ಲಿ ಕಸಿವಿಸಿ ಉಂಟಾಯಿತು. ಹೋಗಿ ಅವರನ್ನು ಮಾತನಾಡಿಸಬೇಕೆಂಬ ಬಯಕೆ ಚಿಗುರೊಡೆಯಿತು. ಎಕೆಂದರೆ ಕಳೆದ ಹಲವು ದಿನಗಳಿಂದ ನಾನು ಅವರನ್ನು ಗಮನಿಸಿದ್ದೆ. ಆವತ್ತು ಮಾತನಾಡಿಸಲೇಬೆಕೇಂಬ ನಿರ್ಧಾರ ಮಾಡಿ ಕಾರಿನಿಂದ ಇಳಿದು ಅವರ ಬಳಿ ಹೋಗಿ ‘ನಮಸ್ಕಾರ ಅಜ್ಜ, ನಾನು ಪ್ರಜ್ವಲ್. ಕಳೆದ ಹಲವು ದಿನಗಳಿಂದ ನಾನು ನಿಮ್ಮನ್ನು ನೋಡುತ್ತಿದ್ದಿನಿ ನಿಮ್ಮಲ್ಲಿ ಎನೋ ಮಾತಾನಾಡಬೇಕು, ಕೇಳಬೇಕೆಂಬ ಹಂಬಲ, ನಿಮಗೆ ನೋವಾಗುವುದಿಲ್ಲ ಅಂದಾದರೆ ಅದನ್ನು ಕೇಳಲೇ’ ಎಂದು ಬಿಟ್ಟೆ. ಅದಕ್ಕೆ ಅವರು ಪ್ರೀತಿಯಿಂದ ನನ್ನ ಕೈಹಿಡಿದು ಕೇಳು ಮಗು ಅಂಥ ಮುಗ್ಧ ನಗು ಬೀರಿದರು. ಆ ನಗುವಿನ ಹಿಂದೆ ಅದೆಂಥಾ ನೋವು ಅಡಗಿರಬಹುದು ಅಂಥ ನನಗೆ ತಿಳಿಯಲೇ ಇಲ್ಲ..
ಅಜ್ಜ ‘ನೀವೇಕೆ ಇಷ್ಟು ರಾತ್ರಿಯಲ್ಲಿ ಪ್ರತಿನಿತ್ಯವು ನಡೆದುಕೊಂಡು ಹೋಗುತ್ತಿದ್ದಿರಾ? ಯಾರನ್ನಾದರೂ ಹುಡುಕುತ್ತಿದ್ದಿರಾ? ‘ಎಂದು ಕೇಳಿದೆ. ಅದಕ್ಕೆ ‘ಇಲ್ಲ ಮಗು ನಾವು ಯಾರನ್ನು ಹುಡುಕುತ್ತಿಲ್ಲ. ಪಕ್ಕದ ರಸ್ತೆಯಲ್ಲಿರುವ ಅನಾಥಶ್ರಮಕ್ಕೆ ಪ್ರತಿ ನಿತ್ಯವು ಬೇಟಿ ನೀಡಿ ಮಕ್ಕಳೊಂದಿಗೆ ಬೆರೆತು ಮನೆಗೆ ಬರುತ್ತೆವೆ ಎಂದರು’. ಅಷ್ಟು ಹೇಳುವಾಗಲೇ ಅವರ ಮುಖದಲ್ಲಿ ದುಖದ ಛಾಯೆ ಕಂಡು ಬಂದಿತು. ಮುಂದೆನು ಕೇಳಬೇಕೆಂದು ತಿಳಿಯದೆ ಅವರನ್ನು ನನ್ನ ಕಾರಿನಲ್ಲೇ ಮನೆಯ ತನಕ ತಲುಪಿಸಿದೆ. ನಂತರ ಯಾಕೋ ಮನಸ್ಸಿಗೆ ಸಮಾಧಾನವಾಗದೇ ನೇರವಾಗಿ ಆ ಅನಾಥಾಶ್ರಮಕ್ಕೆ ಹೋಗಿ ವಿಚಾರಿಸಿದಾಗ ಸತ್ಯ ತಿಳಿಯಿತು. ಅವರ ಮಕ್ಕಳು ಆ ವೃದ್ಧ ದಂಪತಿಯರನ್ನು ಅಂಗವಿಕಲರು ಕೆಲಸ ಮಾಡಲು ಸಾಧ್ಯವಿಲ್ಲವೆಂಬ ಕಾರಣಕ್ಕಾಗಿ ಅವರನ್ನು ಬೇರೆ ಮನೆಯಲ್ಲಿ ಇರಿಸಿದ್ದಾರೆ ಅಂಥ ತಿಳಿದು ಮನಸ್ಸಿಗೆ ಬಾರವಾಯಿತು.
ಅಲ್ಲ ಮಗು ತಂದೆ ತಾಯಿ ಅಂಗವಿಕಲರು, ಅವರ ಬಳಿ ಕೆಸ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹೋರ ಹಾಕುವುದು ಸರಿಯೇ? ಅವರು ಈ ಇಳಿ ವಯಸ್ಸಿನಲ್ಲಿ ಬಯಸುವುದು ಪ್ರೀತಿಯೇ ಹೊರತು ಬೇರೆನು ಅಲ್ಲ ಅಂಥ ಅವರಿಗೇಕೆ ತಿಳಿಯದು. ಅದೇ ತನ್ನ ಮಗು ಅಂಗವಿಕಲ ಎಂಬ ಕಾರಣಕ್ಕಾಗಿ ತಾಯಿ ಮಗುವನ್ನು ಮನೆಯಿಂದ ಹೊರಹಾಕಿದರೇ? ತನ್ನ ಮಗ ದೊಡ್ಡವನಾದರೂ ಜವಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ ಎಂದು ಹೋರಹಾಕುತ್ತಾರೆಯೇ? ಮುಂತಾದ ಸಾವಿರಾರು ಪ್ರಶ್ನೆಗಳು ಮನಸ್ಸಿನಲ್ಲಿ ಒಮ್ಮೆ ಸುಳಿದು ಹೋದವು.
ಅಂಗವಿಕಲತೆ ಎಂಬುದು ಕೇವಲ ದೇಹಕ್ಕೆ ಮಾತ್ರ ಸಿಮೀತವೇ? ಇಲ್ಲಿ ನಿಜವಾದ ಅಂಗವಿಕಲರು ಯಾರು? ಆ ವೃದ್ಧ ದಂಪತಿಗಳ ಮನಸ್ಸಿನ ಕನವರಿಕೆ ಯಾಕೆ ಮಕ್ಕಳಿಗೆ ತಿಳಿಯುತ್ತಿಲ್ಲ? ನಾವು ಒಂದು ದಿನ ವೃದ್ಧರಾಗಬೇಕಲ್ಲವೇ? ನಮ್ಮ ಮನಸ್ಸಿನ ಕನವರಿಕೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು.. ಹೀಗೆ ಆಲೋಚನೆಯಲ್ಲಿ ಮನೆಗೆ ತಲುಪಿದೆ. ಅಷ್ಟರಲ್ಲಿ ನನ್ನ ತಾಯಿ ಬಾಗಿಲು ತೆಗೆದು ಬಾ ಮಗು ಎಂದು ಅಕ್ಕರೆಯಿಂದ ಕರೆದಳು. ಆಗ ಸಮಯ ಮಧ್ಯರಾತ್ರಿ 12.30. ನನಗಾಗಿ ಸ್ವಲ್ಪವು ಬೇಸರ ಮಾಡಿಕೊಳ್ಳದೇ ಊಟ ಕೂಡಾ ಮಾಡದೆ ಕಾಯುತ್ತಾ ಕುಳಿತ್ತಿದ್ದ ಅಮ್ಮನನ್ನು ನೋಡಿ ಕಣ್ಣುಗಳು ತುಂಬಿದವು. ಅವಳ ತೊಳಿನಲ್ಲಿ ಮಗುವಿನ ಹಾಗೇ ಮಲಗಿದೆ.. ಮನಸ್ಸು ಹಗುರವಾಯಿತು.
– ಸುರೇಂದ್ರ ಪೈ, ಉತ್ತರ ಕನ್ನಡ ಜಿಲ್ಲೆ
Nimma lekhana mana muttithu… uthama nirupane…