ಮುಖಪುಟ

Share Button

‘ಸುರಹೊನ್ನೆ’, ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ ಮೀಸಲಾದ ಜಾಲತಾಣ. ಬದಲಾಗುತ್ತಿರುವ ಕಾಲಗತಿಯಲ್ಲಿ, ವಿದ್ಯಾಭ್ಯಾಸ,ಉದ್ಯೋಗ ಪರ್ವಗಳಿಗೆ ಆಂಗ್ಲಭಾಷೆ ಅನಿವಾರ್ಯ. ಈ ಧಾವಂತದ ನಡುವೆ, ಮಾತೃಭಾಷೆಯಾದ ಕನ್ನಡದ ಅಕ್ಷರಗಳನ್ನಾದರೂ ಮರೆಯಬಾರದು ಎಂಬ  ಪ್ರಯತ್ನ ಇದು.

ಇತ್ತೀಚೆಗೆ ಯಾವುದಾದರೂ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ಕೊಟ್ಟಿದ್ದೀರಾ? ಸುತ್ತಲಿನ ನಿಸರ್ಗ ಸಿರಿಯನ್ನು ನಿಮ್ಮ ಕ್ಯಾಮೆರಾ ಸೆರೆಹಿಡಿದಿದೆಯೇ ? ನಿಮ್ಮ ವಿಚಾರ ಲಹರಿಗೆ ಅಕ್ಷರ ರೂಪ ಕೊಟ್ಟು  ನುಡಿ/ಬರಹ/ಇತರ ಯಾವುದಾದರೂ ಕನ್ನಡ ತಂತ್ರಾಂಶದಲ್ಲಿ ಟೈಪ್ ಮಾಡಿ editor@surahonne.com ಗೆ ಇ-ಮೈಲ್ ಮಾಡಿ.  ಪ್ರಥಮ ಬಾರಿಗೆ ಬರಹವನ್ನು ಕಳುಹಿಸುವವರು,  ನಿಮ್ಮ ಕಿರುಪರಿಚಯ (ಹೆಸರು, ಊರು) ತಿಳಿಸಿ, ಜತೆಗೆ ಒಂದು ಛಾಯಾಚಿತ್ರವನ್ನೂ ಕಳುಹಿಸಿ.

‘ಸುರಹೊನ್ನೆ’ ಇ-ಪತ್ರಿಕೆಯನ್ನು ಕಂಪ್ಯೂಟರ್ ಪರದೆಯಲ್ಲಿ ಓದಿದರೆ ಪುಟವಿನ್ಯಾಸ ಸಂಪೂರ್ಣವಾಗಿ ಕಾಣಿಸುತ್ತದೆ. ಸ್ಮಾರ್ಟ್ ಫೋನ್ ನಲ್ಲಿ  ಆಯಾ ಮೊಬೈಲ್ ನ ಪರದೆಯ ಉದ್ದ-ಅಗಲಕ್ಕೆ ತಕ್ಕಂತೆ ಪುಟ  ಕೆಲವೊಮ್ಮೆ ಆಂಶಿಕವಾಗಿ ಕಾಣಿಸುತ್ತದೆ. ಹಾಗಾಗಿ ಮೊಬೈಲ್ ನಲ್ಲಿ ಓದುವುದಾದರೆ,  ಫೋನ್ ಅನ್ನು ಅಡ್ಡವಾಗಿ ಹಿಡಿಯುವುದು (Landscape mode) ಉತ್ತಮ.

ಧನ್ಯವಾದಗಳು

ಹೇಮಮಾಲಾ ಬಿ, ಮೈಸೂರು.

ಸಂಪಾದಕಿ.
ಹೇಮಮಾಲಾ. ಬಿ,ಮೈಸೂರು.

E-mail : editor@surahonne.com 

ನಮ್ಮ ಹೊಸ ಪ್ರಕಟಣೆಗಳು:

ಬೆರಳುಗಳೆಂಬ ಬೆರಗಿನ ಸುತ್ತ ಮಾನವನ ವಿಕಾಸದಲ್ಲಿ ಬೆರಳುಗಳ ಬೆಳವಣಿಗೆ ಹಾಗೂ ಅವುಗಳ ಪಾತ್ರ ನಿಜಕ್ಕೂ ಬೆರಗು ಮೂಡಿಸುವಂಥಹದು. ಮಾನವನ ಕೈಯ ಹತ್ತು ಬೆರಳುಗಳ ಪಾತ್ರ.

K Ramesh, April 18, 2024

ಲಹರಿ

 ಏಳಿ ! ಎದ್ದೇಳಿ !  ಮತದಾನ ಬಂತು -  ಜಾಗೃತರಾಗೋಣ!   'ಏಳಿ ! ಎದ್ದೇಳಿ ! ಗುರಿ ಮುಟ್ಟುವ ತನಕ ನಿಲ್ಲದಿರಿ '  ಸ್ವಾಮಿ ವಿವೇಕಾನಂದರು  ಭಾರತದ ಯುವಜನತೆಯನ್ನು ಕುರಿತು ಹೇಳಿರುವ ಮಾತು ಸದಾ ನಮ್ಮನ್ನು  ಎಚ್ಚರಿಸುತ್ತದೆ.

Surendra Pai, April 18, 2024

ಲಹರಿ

ಅವಿಸ್ಮರಣೀಯ ಅಮೆರಿಕ : ಎಳೆ 85 (ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಲಾವಾ ಗುಹೆಯೊಳಗೆ…..  ಗವಿಯು ಪೂರ್ತಿ ನಯವಾದ ಕರಿಶಿಲೆಯಿಂದ ಮಾಡಿದಂತೆ ಕಾಣುತ್ತಿತ್ತು.

Shankari Sharma, April 18, 2024

ಪ್ರವಾಸ

ಜಂಗಮಜ್ಯೋತಿ ಅಲ್ಲಮಪ್ರಭು. ಸಮಾಜವು ಮಾನವನ ಬದುಕಿಗಾಗಿಯೇ ಇರುವ ರಂಗಭೂಮಿ. ಕಾಲಕಾಲಕ್ಕೆ ಇಲ್ಲಿ ಬದಲಾವಣೆಗಳು ಆಗಿರುವುದು ಇತಿಹಾಸದ ಪುಟಗಳಿಂದ ನಮಗೆಲ್ಲ ತಿಳಿದಿದೆ.

B.R.Nagarathna, April 18, 2024

ಬೊಗಸೆಬಿಂಬ

ಮಂಗಳದ್ರವ್ಯಗಳ ಮಹತ್ವ ಯಾವುದೇ ಒಂದು ಸಂಪ್ರದಾಯ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿದೆ.

Kalihundi Shivakumar, April 18, 2024

ಲಹರಿ

ಮೂರ್ಖರು – ಯಾರು? ಇದೊಂದು 52 – 53 ವರ್ಷಗಳಷ್ಟು ಹಿಂದೆ ನಡೆದ ಘಟನೆ.  ನಾನಾಗ 9 ನೇ ತರಗತಿಯಲ್ಲಿ ಓದುತ್ತಿದ್ದೆ.  ನಮ್ಮದೊಂದು ಕನ್ನಡ ಮೀಡಿಯಂನ ಅನುದಾನಿತ ಶಾಲೆ.

Padma Anand, April 18, 2024

ಥೀಮ್-ಬರಹ

ಮಕ್ಕಳಿಗಿರಲಿ ಪರಿಸರದ ಪಾಠ ಪರೀಕ್ಷೆಗಳು ಮುಗಿದು ಶಾಲೆಗೆ ರಜೆ ಸಿಕ್ಕ ಖುಷಿಯಲ್ಲಿ ಮಕ್ಕಳು ಮನೆಯಲ್ಲಿರದೆ, ತೋಟ ಹೊಲ ಗದ್ದೆ ಕಾಡುಮೇಡು ಅಲೆಯುತ್ತಾ, ಹೊಸ ಹೊಸ ಅನುಭವಗಳನ್ನು ಕಲೆ ಹಾಕುತ್ತಾ, ಅಲ್ಲಿ ಸಿಗು...

Amubhavajeevi, April 18, 2024

ಲಹರಿ

ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’- 8 (ಹಿಂದಿನ ಸಂಚಿಕೆಯಿಂದ ಮುಂದುವರಿದುದು)'ದೊಡ್ಡ ಕಾರಣವೇನೂ ಇಲ್ಲ. ಯಾಕೋ ಬದುಕು ತುಂಬಾ ಯಾಂತ್ರಿಕ ಅನ್ನಿಸಿಬಿಟ್ಟಿತ್ತು.

Published by Surahonne, April 18, 2024

ಕಾದಂಬರಿ

ಇಡ್ಡಲಿಗೆ ಎಂಬ ದಿವಿನಾದ ಕೊಡುಗೆ ! ನಮ್ಮೆಲ್ಲರ ಅಚ್ಚುಮೆಚ್ಚಿನ ಅಂತರ್ಜಾಲ ಪತ್ರಿಕೆಯಾಗಿರುವ ‘ಸುರಹೊನ್ನೆ’ಯು ದೋಸೆಯನ್ನು ಕುರಿತ ಥೀಮ್ ಕೊಟ್ಟಿತ್ತು.

Dr.H N Manjuraj, April 18, 2024

ವಿಶೇಷ ದಿನ

ಗೋಪುರಗಳ ನಾಡಿನಲ್ಲಿ…ಹೆಜ್ಜೆ 18 (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ತ್ರಿಚ್ಚಿಯಿಂದ ಕೊಡೈಕೆನಾಲ್ 08/10/2023 ರಂದು ತ್ರಿಚ್ಚಿಯಲ್ಲಿ ಉಪಾಹಾರ ಸೇವಿಸಿದ ನಂತರ, 200 ಕಿಮೀ ದೂರದಲ್ಲಿರುವ ಕೊಡೈಕೆನಾಲ್ ನತ್ತ ಪ್ರಯ...

Hema Mala, April 18, 2024

ಪ್ರವಾಸ

ಗಮನಿಸಿ:

  1. ಈ ಜಾಲತಾಣದಲ್ಲಿ ಪ್ರಕಟವಾಗುವ ಎಲ್ಲಾ ಬರಹಗಳ  ಅಭಿಪ್ರಾಯಗಳು ಆಯಾ ಬರಹಗಾರರಿಗೆ ಸಂಬಂಧಿಸಿದ್ದಾಗಿರುತ್ತವೆ.ಈ ಬಗ್ಗೆ ಏನಾದರೂ ಭಿನ್ನಾಭಿಪ್ರಾಯವಿದ್ದಲ್ಲಿ   www.surahonne.com  ಜವಾಬ್ದಾರಿಯಲ್ಲ.
  2. ಮುಜುಗರ ತರಿಸುವ /ಪ್ರಣಯ ಸಂಬಂಧಿ ಪದಗಳುಳ್ಳ/ರಾಜಕೀಯಕ್ಕೆ ಸಂಬಂಧಿಸಿದ / ರಾಜಕೀಯದಿಂದ ಪ್ರೇರಿತ/ಕಟು ಧಾರ್ಮಿಕ ಧೋರಣೆಗಳುಳ್ಳ/ ವಿರೋಧಾಭಾಸಕ್ಕೆ ಆಸ್ಪದವಿರುವ/ ಯಾವುದಾದರೂ ಸಮುದಾಯ ಅಥವಾ ವ್ಯವಸ್ಥೆಯನ್ನು ದೂಷಿಸುವ/ನಕಾರಾತ್ಮಕ ಧ್ವನಿಯ ಬರಹಗಳು ಬೇಡ ಹಾಗೂ ಈ ಬಗ್ಗೆ ಚರ್ಚೆಗೆ ಅವಕಾಶವಿಲ್ಲ.
  3. ಬರಹಗಳಿಗೆ ಪೂರಕವಾಗಿ ಗೂಗಲ್ ಹುಡುಕಾಟದಲ್ಲಿ ಲಭ್ಯವಾದ ಸಾಂದರ್ಭಿಕ ಚಿತ್ರಗಳನ್ನು ಬಳಸುತ್ತೇವೆ. ಮೂಲ ಛಾಯಾಗ್ರಾಹಕರಿಗೆ ಧನ್ಯವಾದಗಳು.
  4. ಸರಿಯಾದ ಶೀರ್ಷಿಕೆ ಇಲ್ಲದ/ಲೇಖಕರ ಹೆಸರಿಲ್ಲದ/ಅಪೂರ್ಣ ಬರಹಗಳನ್ನು ಪರಿಗಣಿಸುವುದಿಲ್ಲ.
  5. ಚಿತ್ರಗಳನ್ನು ಪ್ರತ್ಯೇಕ .jpg file  ಆಗಿ ಲಗತ್ತಿಸಿ. (Please do not copy-paste photos on a word file)
  6. ಈಗಾಗಲೇ ಫೇಸ್ ಬುಕ್/ವಾಟ್ಸಾಪ್/ ಬೇರೆ ಆನ್ ಲೈನ್ ಪತ್ರಿಕೆಗಳು/ಇತರ ಅಂತರ್ಜಾಲ ಗ್ರೂಪ್ ಗಳಲ್ಲಿ ಪ್ರಕಟವಾದ ಬರಹಗಳನ್ನು ದಯವಿಟ್ಟು ನಮಗೆ ಕಳುಹಿಸಬೇಡಿ.
  7. ಸಾಮಾನ್ಯವಾಗಿ, ಪ್ರತಿ ಮಂಗಳವಾರದಂದು ಸಂಚಿಕೆ ಸಿದ್ದವಾಗುತ್ತದೆ. ಆಮೇಲೆ ತಲಪಿದ ಬರಹಗಳನ್ನು ಅವಶ್ಯವೆನಿಸಿದರೆ ಮಾತ್ರ ಪರಿಗಣಿಸಲಾಗುವುದು. ವಿಶೇಷ ದಿನ/ಹಬ್ಬಗಳಿಗೆ ಸಂಬಂಧಿಸಿದ ಬರಹ/ಕವನಗಳು ಆಯಾ ದಿನದ ಕನಿಷ್ಟ ಎರಡು ದಿನ ಮೊದಲು ನಮಗೆ ತಲಪಿದರೆ ಮಾತ್ರ ಸಕಾಲದಲ್ಲಿ ಪ್ರಕಟಿಸಲು ಸಾಧ್ಯವಾಗುತ್ತದೆ.
  8. ‘ಸುರಹೊನ್ನೆ’ ಇ-ಪತ್ರಿಕೆಯ ಸಂಚಿಕೆಯಲ್ಲಿ ದೀರ್ಘ ಬರಹ, ಭಾವಾರ್ಥವುಳ್ಳ ಕವನಗಳು, ಸಾಂದರ್ಭಿಕ ಬರಹ….ಹೀಗೆ ವೈವಿಧ್ಯಮಯ ವಿಷಯಗಳುಳ್ಳ ಗದ್ಯ ಬರಹಗಳಿಗೆ ಆದ್ಯತೆ.
  9.  ಪ್ರತಿ ಗುರುವಾರದಂದು ‘ಸುರಹೊನ್ನೆ’ಯಲ್ಲಿ ಹೊಸ ಬರಹಗಳನ್ನು ಪ್ರಕಟಿಸುತ್ತೇವೆ.
Follow

Get every new post on this blog delivered to your Inbox.

Join other followers: