ಮಡಹಾಗಲಕಾಯಿ…
ಅಂಗಡಿಯೊಂದರಲ್ಲಿ ಜೋಡಿಸಿಟ್ಟಿದ್ದ, ಹಾಗಲಕಾಯಿಯ ತಮ್ಮನಂತೆ ಕಾಣಿಸುವ ಈ ಹಸಿರು ತರಕಾರಿ ಆಕರ್ಷಿಸಿತು. ಇದರ ಹೆಸರು ‘ಮಡಹಾಗಲಕಾಯಿ’. ಇದನ್ನು ಕಾಡುಪೀರೆಕಾಯಿ, ಕಂಟೋಲಾ, Spiny Gourd ಎಂತಲೂ ಕರೆಯುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು Momordica dioica.
ಕರಾವಳಿಯಲ್ಲ್ಲಿ ಮಳೆಗಾಲದಲ್ಲಿ ಹೆಚ್ಚಾಗಿ ಕಾಣಸಿಗುವ ಮಡಹಾಗಲಕಾಯಿಯು ಸ್ವಲ್ಪ ದುಬಾರಿ. ಒಂದು ಕಿಲೋಗೆ 120 -180 ರೂ ಇರುತ್ತದೆ. ಕೆಲವು ಸಮುದಾಯದವರಿಗೆ, ಗಣೇಶ ಚತುರ್ಥಿಯ ಸಂದರ್ಭದಲ್ಲಿ ಇದರ ಅಡುಗೆ ಬಹಳ ಶ್ರೇಷ್ಠವಂತೆ. ಹಾಗಲಕಾಯಿಯನ್ನು ಹೋಲುವುದಾದರೂ ಇದಕ್ಕೆ ಕಹಿ ರುಚಿಯಿಲ್ಲ. ಬೀಜ ಸಮೇತವಾಗಿ ಹೆಚ್ಚಿ ಪಲ್ಯ, ಹುಳಿ, ಮಜ್ಜಿಗೆಹುಳಿ ತಯಾರಿಸಬಹುದು. ಬೀಜವು ಬಲಿತಿದ್ದರೂ, ಬೆಂದ ಮೇಲೆ ತಿನ್ನಲು ತೊಂದರೆಯಾಗುವುದಿಲ್ಲ. ಮಳೆಗಾಲದಲ್ಲಿ ಸಾಮಾನ್ಯವಾಗಿ ತಾನಾಗಿಯೇ ಬೆಳೆಯುವ ಮಡಹಾಗಲಕಾಯಿಯನ್ನು ವಾಣಿಜ್ಯ ದೃಷ್ಟಿಯಿಂದ ಬೆಳೆಸುವವರು ಬಹು ಕಡಿಮೆ.
ಹಲವಾರು ಪೋಷಕಾಂಶಗಳನ್ನು ಹೊಂದಿರುವ ಮಡಹಾಗಲಕಾಯಿಯನ್ನು ಆಯುರ್ವೇದ ಔಷಧಿಗಳ ತಯಾರಿಯಲ್ಲಿ ಬಳಸುತ್ತಾರೆ.
(ಮಾಹಿತಿ: ವಿಕಿಪಿಡಿಯ)
– ಹೇಮಮಾಲಾ.ಬಿ
ಪಲ್ಯ ಹುಳಿ ಏನೇ ಮಾಡಿದ್ರು ತುಂಬ ಚನ್ನಾಗಿರತ್ತೆ ..ಮಲೆನಾಡಿನಲ್ಲೂ ಇದನ್ನು ಬೆಳಿತಾರೆ…
ಉಪಯುಕ್ತ ಮಾಹಿತಿ.
ಇದಕ್ಕೆ ನಾವು ಪಾಗೀಲ ಎನ್ನುತ್ತೆವೆ.